ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೬೯

ಯವರಿಗೆ ನಾನೇ ತೆಗೆದುಕೊಡ್ತೇನೆ' ಎಂದು ಹೇಳಿ ಮೇಷ್ಟು ಒಳಗಿದ್ದ ಹಾಜರಿ ರಿಜಿಸ್ಟರನ್ನು ತೆಗೆದು ಮೇಜಿನ ಮೇಲಿಟ್ಟನು.

ರಂಗಣ್ಣ ಅದನ್ನು ತನಿಖೆ ಮಾಡಿದಾಗ ಹಾಜರಿಯಲ್ಲಿ ಗುರ್ತಿಸಿತ್ತು. ಸರ್ಕ್ಯುಲರಿನಂತೆ ಮೇಷ್ಟು ನಡೆದು ಕೊಂಡಿದ್ದನು. ರಂಗಣ್ಣನಿಗೆ ಸಂತೋಷ ವಾಗಿ ಮೇಷ್ಟರ ಮುಖವನ್ನು ನೋಡಿ ಮುಗುಳುನಗೆ ಸೂಸಿದನು. ಪ್ರಸನ್ನರಾಗಿದ್ದ ಇನ್ಸ್ಪೆಕ್ಟರನ್ನು ನೋಡಿ ಮೇಷ್ಟ್ರು ತನ್ನ ಗಡ್ಡವನ್ನು ಸವರಿ ಕೊಳ್ಳುತ್ತ ' ' ಸ್ವಾಮಿಯವರಿಗೆ ! ಸ್ವಲ್ಪ, ಸ್ವಾಮಿಯವರಿಗೆ !' ಎಂದನು. ರಂಗಣ್ಣನಿಗೆ ಅರ್ಥವಾಗಲಿಲ್ಲ. ಅಡ್ಮಿಷನ್ ರಿಜಿಸ್ಟರ್ ಕೊಡಿ ಮೇಷ್ಟೆ ” ಎಂದು ಕೇಳಿದನು. ಪೆಟ್ಟಿಗೆಯಿಂದ ಅದನ್ನು ಮೇಷ್ಟ್ರು ತೆಗೆದುಕೊಟ್ಟಿದ್ದಾಯಿತು. ಅದನ್ನು ತನಿಖೆಮಾಡುತ್ತ ಮತ್ತೊಮ್ಮೆ ಮೇಷ್ಟರನ್ನು ನೋಡಿದಾಗ, ' ಸ್ವಾಮಿಯವರಿಗೆ ! ಸ್ವಲ್ಪ ! ? ಎಂದು ಮೊದಲಿನಂತೆಯೇ ಗಡ್ಡವನ್ನು ಸವರಿಕೊಂಡು ಮೇಷ್ಟ್ರು ಹೇಳಿದನು. " ಏನು ಮೇಷ್ಟೆ ? ಸ್ವಾಮಿಯವರಿಗೇನು ? ಸ್ವಲ್ಪ ಏನು ? ಎಂದು ರಂಗಣ್ಣ ಕೇಳಿದನು.

'ಸ್ವಾಮಿಯವರಿಗೆ ಗಡ್ಡ ಸ್ವಲ್ಪ.......

'ಗಡ್ಡ ಏನಾಗಿದೆ ಮೇಷ್ಟೆ ? ಸ್ವಲ್ಪ ಬೆಳೆದಿದೆ. ಇವೊತ್ತು ನಾನು ಕ್ಷೌರ ಮಾಡಿಕೊಂಡು ಹೊರಡಲಿಲ್ಲ. ಊರು ಸೇರಿದ ಮೇಲೆ ಕ್ಷೌರ ಮಾಡಿಕೊಂಡು ಸ್ನಾನ ಮಾಡುತ್ತೇನೆ. ನಿಮಗೇಕೆ ಅದರ ವಿಚಾರ ??


'ಸ್ವಾಮಿಯವರಿಗೆ, ಅಪ್ಪಣೆ ಯಾದರೆ........ ? 'ಏನು ಅಪ್ಪಣೆಯಾದರೆ ?.... ಸಂಬಳ ಬಟವಾಡೆ ರಿಜಿಸ್ಟರ್ ಇಲ್ಲಿ ಕೊಡಿ )

'ಎಲ್ಲಾ ರೋಜಿ ಸ್ಟರ್‌ ಪಕ್ಕಾ ಮಡಗಿದ್ದೀನಿ ! ಸ್ವಾಮಿಯವರಿಗೆ, ಅಪ್ಪಣೆಯಾದರೆ....' ಎಂದು ಪುನಃ ಗಡ್ಡವನ್ನು ಸವರಿಕೊಳ್ಳುತ್ತ ಆ ಮೇಷ್ಟ್ರು ನಿಂತುಕೊಂಡನು.

'ಆಪ್ಪಣೆಯಾದರೆ ಏನು ಮಾಡ್ತೀರಿ ಮೇಷ್ಟೆ ? ಕ್ಷೌರದವನನ್ನು ಕರೆಸುತ್ತೀರಾ ?