೧೦೦ ಶ್ರೀ ಶಾ ರ ದಾ , (ಅ ಸೀತೆಯನ್ನು ತಪೋವನದಿಂದ ಕರೆಯಿಸಿದನು, ಮಾರನೆಯ ದಿವಸ ರಘು ಪುಂಗವನು - ಪ್ರಕೃತಕಾರ ನಿರ್ವಾಹಕ್ಕಾಗಿ ತನ್ನ ಪುರಜನರನ್ನೆಲ್ಲ ಕರೆ ಯಿಸಿ, ಒಂದೆಡೆಯಲ್ಲಿ ಸೇರಿಸಿ, ಅಲ್ಲಿಗೆ ವಾಲ್ಮೀಕಿ ಮುನಿಯನ್ನು ಬರು ವಂತೆ ಹೇಳಿ ಕಳುಹಿಸಿದನು. ತರುವಾಯ - ಉದಾತ್ತಾದಿ ಸ್ವರದಿಂದಲೂ, ಶಬ್ದ ಶುದ್ದಿ ರೂಪ ವಾದ ಸಂಸ್ಕಾರದಿಂದಲೂ, ಒಡಗೂಡಿರುವ ಸಾವಿತ್ರೀಶಕ್ತಿನಿಂದ ತೇಜೋ ರಾತಿಯಾದ ಸೂರನನ್ನು ಹೇಗೋ ಹಾಗೆ, ವುಸಿಯು- ಪುತ್ರರಿಂದ ಸಹಿ ತಳಾದ ಸೀತೆಯಿಂದೊಡಗೂಡಿ ತೇಜಸ್ವಿಯಾದ ರಾಮನನ್ನು ಸೇವಿಸಿದನು ಉಟ್ಟಿರುವ ಕಾಷಾಯ ವಸ್ತ್ರದಿಂದಲೂ, ಹೆಜ್ಜೆಯಲ್ಲಿ ನಟ್ಟಿರುವ ದೃಷ್ಟಿ ಯಿಂದ ಒಡಗೂಡಿರುವ ನೀತೆಯು - ಶಾಂತವೂ ಪ್ರಸನ್ನವೂ ಆಗಿರುವ ಶರೀರದಿಂದಲೇ ಸಾಧ್ಯ ಶಿರೋಮಣಿಯೆಂದು ಎಲ್ಲರೂ ಊಹಿಸುತಲಿದ್ದರು ಮತ್ತು - ಆಕೆಯ ದೃಷ್ಟಿಪಥದಿಂದ ತಮ್ಮ ನೋಟಗಳನ್ನು ಹಿಂದಿರುಗಿಸಿ, ಮಾಗಿದ ಗೊನೆಗಳನ್ನೊಳಗೊಂಡಿರುವ ಬತ್ತದ ಪೈರುಗಳಂತೆ ಸರ್ವರ್ ಬಾಗಿದ ಮೊಗವಳ್ಳವರಾಗಿದ್ದರು, ಮುನಿಯು-ಒಂದು ದರ್ಭಾಸನದಮೇಲೆ ಬಂದು ಕುಳಿತನು, ಕೂಡ ಆ ಜಾನಕಿಯನ್ನು ನೋಡಿ, ಮಗ ! ಸೀತೆ ! ಪತಿಯ ಇದಿರಿಗೆ ನಿನ್ನ ಸತ್ಯದ ವಿಷಯದಲ್ಲಿ ಈ ಪ್ರಜೆಗಳಿಗಿರುವ ಸಂಶಯವನ್ನು ತೊಲಗಿಸಿ ಅವರನ್ನು ಮೆಚ್ಚಿಸು, ಎಂದು ಶಾಸನ ಮಾಡಿದನು. ಆ ಹಿಂದೆ ಭೂವಿಜೆಯು - ವಾಲ್ಮೀಕಿ ಮುನಿಶಿಷ್ಯನು ಕೊಟ್ಟ ಪುಣ ತೀರ್ಧದಿಂದ ಆಚಮನಮಾಡಿ, cc ವಿಶ್ವಂಭರೆಯೆನಿಸಿದ ಎಲ್ ಭೂ ದೇವಿಯೇ, ಈ ನಾನು - ಪತಿಯ ವಿಷಯದಲ್ಲಿ ಮಾತಿನಿಂದಲಾಗಲೀ, ಮನಸ್ಸಿನಿಂದಲಾಗಲಿ, ನಡತೆಯಿಂದಲಾಗಲೀ, ತಪ್ಪಿ ನಡೆದಿದ್ದು ದೇ ಸತ್ಯವಾಗಿದ್ದರೆ ನನ್ನನ್ನು ನಿನ್ನ ಗರ್ಭದಲ್ಲಿ ಧರಿಸು ' ಎಂದು ಸತ್ಯವಾಣಿ ಯನ್ನು ಉದಹರಿಸಿದಳು, ಸತೀಶಿರೋಮಣಿಯಾದ ಆ ಮಹಾದೇವಿ ಯು ಪಾಗೆಂದ ಕೂಡಲೆ, ಮಿಂಚಿನ ಹೊಳಲಿನಂತೆ ಬೆಳಕಿನ ರಾಶಿಯೊಂದು ಭೂಮಿಯ ರಂಧ್ರದಿಂದ ಮೇಲಕ್ಕೆದ್ದಿತು. ಆ ತೇಜೋಮಂಡಲದಲ್ಲಿ-ನಾಗ ರಾಜನ ಹೆಡೆಯಮೇಲಣ ಸಿಂಹಾಸನದಲ್ಲಿ ಕುಳಿತಿರುವ ಸಮುದ್ರರಶನೆಯ
- ದಿ