ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ1 ರಘುಕುಲಚರಿತಂ ဂန် ನಟ್ಟ ಶಲ್ಯವುಳ್ಳವನಾಗಿ ಸಂತವಿಸಿದನು. ತಟ್ಟನೆ ಕುದುರೆಯಿಂದಿಳಿದನು. ಹತ್ತಿರಕ್ಕೆ ಓಡಿಬಂದನು, ತಾನು ಪಾಪಕ್ಕೆ ಹೆದರತಕ್ಕವನೆಂಬುದನ್ನು ತಿಳಿಸಲಿಕ್ಕೆ ಪ್ರಖ್ಯಾತವಾದ ತನ್ನ ಪ್ರವರವನ್ನು ತಿಳಿಸಿದನು. ತನಗೆಲ್ಲಿ ಬ್ರಹ್ಮಹತ್ಯಾದೋಷವು ಬಂದೊದಗುವುದೋ ಎಂದು ಮಹಾಭಯದಿಂದ ಗಡಗಡನ ನಡ ಗುತ್ತಾ, ಕುಟುಕು ಜೀವದಿಂದ ಕುಂಭದಮೇಲೆ ಬಿದ್ದಿ ರುವಾತನ ವಂಶಕ್ರಮವನ್ನು ಕೇಳಿದನು. ನಾನು ಬ್ರಾಹ್ಮಣೇತರ ತಾಪಸಕುಮಾರನು ಎಂಬದಾಗಿ ತೊದಲಿತೊದಲಿ, ಒಂದೊಂದೇ ಅಕ್ಷರವ ಸ್ನಾಗಿ ಹೇಳಿದ ಆ ತಪಸ್ಸಿ ಪುತ್ರನ ನುಡಿಯನ್ನಾಲಿಸಿದನು. ಆ ಮುನಿತನಯನು-II ನನ್ನ ತಾಯಿತಂದೆಗಳಿಬ್ಬರೂ ಹುಟ್ಟು ಕುರುಡರು, ಮುಪ್ಪಿನ ಮುದುಕರು, ಅವರಿಗೆ ನಾನುಹೊರತು ಬೇರೆ ಗತಿಯಿಲ್ಲ. ಬಹು ದಾಹಗೊಂಡಿದಾರೆ, ಮೊದಲು ನನ್ನನ್ನು ಅವರ ಬಳಿಗೆ ಕರೆದೊಯ್ಲಿ ೨, ಎಂದು ಹೇಳುತ್ತಲೇ ಸುಮ್ಮನಾದನು, ಆಗಲೇ ದಶರಥನ ಜೀವವು ಹಾರಿಹೋದಂತಾಯಿತು, ಆ ಬಾಲಕನ ಎದೆಯೊಳಗೆ ನಿಲುಕಿರುವ ಶಲ್ಯವನ್ನು ಕಿತ್ತರೆ ರಕ್ತಪ್ರವಾಹವು ಹರಿದು, ಉಸಿರು ಹಾರಿ ಹೋಗುವುದು, ನೋಡೋಣ, ಮಾತಾಪಿತೃಗಳ ಸಮಿಾಪಕ್ಕೆ ಕೊಂ ಡೊಯ್ಯುವ, ಅದುವರೆಗೂ ಪ್ರಾಣವಾಯುವು ಇರುವುದೋ ಹೇಗೋ ಎಂದುಕೊಂಡು, ನಡುಗುತಲಿರುವ ಕರತಲದಿಂದ ಆ ಹುಡುಗನನ್ನು ಎತ್ತಿಕೊಂಡು, ವೃದ್ಧದಂಪತಿಗಳ ಸನಿಹಕ್ಕೆ ಕುಂಭಜಲದೊಡನೆ ಬೇಗನೆ ಬಂದನು. ಅಲ್ಲಿ ಆ ಕುವರನನ್ನು ಮೆಲ್ಲಗೆ ಇಳುಹಿದನು, ಆಗಲಾ ಕುರುಡು ಮುದುಕರ ಶೋಕವನ್ನು ಹೇಳಬೇಕೆ ? ಜನನೀಜನಕರಿ ಬ್ಬರೂ ಗೊಳೋ ಎಂದು ಅಳುತ್ತಾ, ಅಯ್ಯೋ ! cc ಎದೆಯೊಳಗೆ ಹೂತಿ ರುವ ಈ ಮೊಳೆಯನ್ನು ತೆಗೆಯಪ್ಪಾ ! ,, ಎಂದು ಮಗನ ಮೆಯನ್ನು ಕೈಗಳಿಂದ ತಡಹುತ್ತಾ ಹೇಳಿದರು. ಹೊಟ್ಟೆಯೊಳಗೆ ತುಂಬಿದ ದುಃಖ ಭಯಗಳ ಭಾರದಿಂದ ಬೆಪ್ಪಾದ ದೊರೆಯು - ಕೀಲನ್ನು ಮೆತ್ತಗೆ ಎತ್ತು ತಲಿರುವಾಗಲೇ ಆ ಕುಮಾರನ) ಸರಾಸುವಾದನು, ಆ ಮುನಿವೃದ್ದನು - ಉಕ್ಕಳಿಸುವ ಶೋಕದಿಂದ ಬೊಗಸೆಯಲ್ಲಿ ತುಂಬಿದ ಕಣ್ಣೀರುಳ್ಳವನಾ ಗುತ್ತಾ ಎಲೈ ದೊರೆಯೇ ! ನೀನೂ - ಮುಪ್ಪಿನಲ್ಲಿ ಮಗನ