ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ કેન ಅನಂತರದಲ್ಲಿ ದಶರಥನ' – ಮೋಹದ ಮಗನ ಅಗಲಿಕೆಯನ್ನು ತಾಳಲಾರದೆ ಪೂರ್ವದಲ್ಲಿ ಅರಣ್ಯದೊಳಗೆ ತಾನು ಮಾಡಿದ ಕರ ದಿಂದುಂ ಟಾದ ಮುನಿಶಾಪವನ್ನು ನೆನೆಸಿಕೊಂಡು, ತನ್ನ ಮರಣವನ್ನೇ ಅದಕ್ಕೆ ಪ್ರಾಯಶ್ಚಿತ್ತವನ್ನಾಗಿ ಭಾವಿಸಿದನು. ಅದುವರೆಗೆ ಭರತಶತ್ರುಘರು ಸೋದರದ ವಾವನ ಮನೆಯಲ್ಲಿ ರುತ್ತಿದ್ದರು, ರಾಮಲಕ್ಷ್ಮಣರಾದರೆ ಕಾಡುಸೇರಿದರು, ದಶರಥನು ದಿವಂಗತನಾದನು. ಹೊಂಚುಹಾಕುತಲಿದ್ದ ಬಲಗಾರರಾದ ಹಗೆಗಳಿಗೆ ಸಂಚು ಸಿಕ್ಕಿದ್ದರಿಂದ ರಾಜ್ಯವು ಭೋಗ್ಯವಸ್ತುವಾಗುವ ಸಮಯ ಬಂದಿತು. ಆಗ ಅನಾಥರಾದ ಅಮಾತ್ಯರು - ಮಾತುಲನ ಮನೆಯೊಳಿದ್ದ ಭರತನನ್ನು ತಂದೆಸತ್ಯ ಸುದ್ದಿ ಯು ತಿಳಿಯದಹಾಗೆ ಆಪ್ತ ಮಂತ್ರಿಗಳ ಮೂಲಕ ಕರೆತರಿಸಿದರು, ಭರತನು- ತನ್ನ ತಂದೆಗೆ ಆ ವಿಧವಾಗಿ ಒದಗಿದ ಆಪತ್ತನ್ನು ಕೇಳಿದನು, ಆ ಮೇಲೆ – ತನ್ನ ತಾಯಿಗೆ ಪರಾಣ್ಮುಖನಾ ದುದಲ್ಲದೆ, ರಾಜಲಕ್ಷ್ಮಿಗೂ ವಿಮುಖನಾದನು, ಪರಿವಾರದೊಡನೆ ರಾಮದರ್ಶನಾರ್ಥವಾಗಿ ವನಕ್ಕೆ ಹೊರಟನು, ಕಾಡುಜನರಿಂದ ನೀತಾ ಲಕ್ಷಣಸಹಿತನಾದ ಅಣ್ಣನು ಇಳಿದುಕೊಂಡಿದ್ದ ಸ್ಥಳಗಳನ್ನು ಕೇಳಿ ತಿಳಿದು ನೋಡಿದನು, ಕಣ್ಣು ಗಳಲ್ಲಿ ಧಾರಾಳವಾಗಿ ನೀರು ಸುರಿಸುತ್ತಾ ಮುಂದೆ ಹೊರಟನು. ಚಿತ್ರಕೂಟದ ಬಳಿಗೆ ಬಂದನು, ಅಣ್ಣನನ್ನು ಕಂಡನು, ತಂದೆಯ ಸ್ವರ್ಗಪ್ರಯಾಣವನ್ನು ಅರಿಕೆ ಮಾಡಿದನು, ಎಂಜ ಲಾಗದ ಐಶ್ವರ್ಯದಿಂದೊಡಗೂಡಿರುವ ರಾಜ್ಯಲಕ್ಷ್ಮಿಯನ್ನು ಪರಿಗ್ರಹಿ ಸಲು ದಯೆಮಾಡಬೇಕೆಂದು ಸೆರಗೊಡ್ಡಿ ಬೇಡಿದನು, ಏಕಂದರೆ - ಭರತನು - ಸದಾಚಾರ ಸಂಪನ್ನನು, ಧರ್ಮಶಾಸ್ತ್ರವನ್ನೆಲ್ಲ ಚೆನ್ನಾಗಿ ಬಲ್ಲವನು, ಅದರಿಂದಲೇ ರಾಕ್ಷಿಯನ್ನು ಅಣ್ಣನು ಪರಿಗ್ರಹಿಸುವು ದಕ್ಕಿಂತ ಮೊದಲು ತಾನು ಸ್ವೀಕರಿಸಿದರೆ ಪರಿವೇತ್ತನಾಗುವೆನು ಎಂದು ಹೆದರಿದ್ದನು, ಆದರೆ – (ರ್ಗತನಾದ ತಂದೆಯ ಆಫ್ಲಾರೂಪವಾದ ಧರ ಪಾಶದಿಂದ ಬದ್ದನಾಗಿರುವ ಅಣ್ಣನ ಕಟ್ಟನ್ನು ಸಡಲಿಸಿ, ಅವನನ್ನು ಹೊರಗೆ ತೆಗಿಯಲಿಕ್ಕೆ ಭರತನಕೈಲಾಗಲಿಲ್ಲ. ಆ ಮೇಲೆ ರಾಜ್ಯಕ್ಕೆ ಅಧಿ ದೇವತೆಯಾಗಿರುವಂತೆ ಮಾಡಲು ಪಾದುಕೆಗಳನ್ನು ದಯಪಾಲಿಸಬೇಕೆಂದು