೧೨] ರಘುಕುಲಚರಿತಂ ರ್ಇ - ಸುಲಭವಾಗಿ ತುಂಡುಮಾಡಿ ಕೆಡಹಿದನು. ಧನುರ್ಧರರೊಳಗೆ ಅದ್ವಿತೀಯ ನೆನಿಸಿರುವ ರಾಮನು -ಕೂಡಲೆ ತನ್ನ ಹೃದಯದಲ್ಲಿ ನಟ್ಟಿರುವ ನೀತಾ ಶೋಕನೆಂಬ ಶಲ್ಯವನ್ನು ಕಿತ್ತೆಸೆಯತಕ್ಕ ಮಹಷಧವೆನಿಸಿದ ಬ್ರಹ್ಮಾ ಸ್ವವನ್ನು ಹಗೆಯಮೇಲೆ ಪ್ರಯೋಗಿಸಲು ಬಿಲ್ಲಿನಲ್ಲಿ ಅಭಿಮಂತ್ರಿಸಿದನು. ಆಕಾಶದಲ್ಲಿ ಬಹುವೇಗದಿಂದ ಹೊರಟು, ಉರಿಯುತಲಿರುವ ಮುಖಗಳು ೪ುದಾಗಿರುವ ಆ ಬ್ರಹ್ಮಾಸ್ತವು - ವಿಷಜ್ವಾಲೆಗಳನ್ನು ಕಾಗುವಂತ ನೂರು ಪ್ರಕಾರವಾಗಿ ಹೆಡೆಗಳನ್ನು ಹರಡಿರುವ ಮಹಾಶೇಷನಹಾಗೆ ಬೆಳ ಗುತಲಿದ್ದಿತು ಅಗಸ್ಯ , ಮಂತ್ರ ಪ್ರಭಾವದಿಂದ ಅ 5ರಿಮಿತ ಸ ವ ನ್ನೊಳಗೊಂಡಿದ್ದ ಆ ಅಸ್ತವು - ಎಂದೂ ಗಾಯದ ನೋವನ್ನು ಅನುಭವಿ ಸದಿದ್ದ ಆ ರಾವಣನ ತಿಗಳ ಸಾಲನ್ನು, ಈಗಲೂ ವ್ರ ಇದವೇಧೆಯನ್ನು ಅರಿಯದಿರುವಂತೆಯೇ ನಿಮಿಷ ಮಾತ್ರದಲ್ಲಿ ಇಳುಹಿ, ರಲಕ್ಷ್ಮಿಗೆ ಅರ್ಪಿ ನಿತು, ರಾಕ್ಷಸೇಂದ್ರನ ಶರೀರದಿಂದ ರಭೂಮಿಗುರುಳುತಲಿರುವ ಶಿರ ಗಳ ಪರಂಪರೆಯು - ಕೊಳದ ಜಲದಲ್ಲಿ ಅಲೆಗಳಿಂದ ಸಾಲಾಗಿ ಕಾಣಬ ರುವ ಬಾಲಸೂನ ಪ್ರತಿಬಿಂಬಗಳಂತೆ ಕಂಗೊಳಿಸುತಲಿದ್ದಿತು. ರಾವ ಇನ ತಲೆಯು ಬುರುಡೆಗಳು ರಣಾಂಗಣದಲ್ಲಿ ಬಿದ್ದು ರುಳಿದ್ದರೂ, ಬ್ರಹ್ಮನ ವರದಾನದ ಶಂಕೆಯಿಂದ ಮರ್ಧಗಳು ಮರಳಿ ಎಲ್ಲಿ ಮೊಳೆಯು ವುವೋ ಎಂದು, ಬಹಳ ಹೊತ್ತಿನವರೆಗೂ ಅವನ ಮರಣದಲ್ಲಿ ಅಮರರ ಮನವು ಸಂಪೂರ್ಣವಾದ ನಂಬುಗೆಯನ್ನು ಪಡೆಯಲಿಲ್ಲ.
- ತರುವಾಯ - ಲೋಕಕಂಟಕನಾಗಿದ್ದ ರಾವ ಇನ ಸಂಹಾರದಿಂದ ಸಂತುಷ್ಟರಾದ ಸುರರು - ಸವಿಾಪಿಸಿರುವ ರಾಜ್ಯಾಭಿಷೇಕದ ಕಂಕಣ ಬಂಧವನ್ನೊಳಗೊಂಬ ಮಣಿಕಟ್ಟಿನಿಂದ ಮನೋಹರವಾದ ರಾಘವನ ಶಿ-ದಮೇಲೆ ಕಲ್ಪತರು ಕುಸುಮವೃಷ್ಟಿಯನ್ನು ನರ್ಮಿಸಿದರು, ಕ ಪೋ ಲಗಳಲ್ಲಿ ಸಂಚರಿಸುವುದರಿಂದ ಮದೋದಕ ಭಾರವನ್ನಾಂತ ರೆಕ್ಕೆಗಳಿಂದ ಬೆಳಗುತಲಿರುವ ದುಂಬಿಗಳು - ದಿಕ್ಕಾಲರ ದಿಗ್ಗಜಗಳ ಗಂಡಸ್ಥಲಗಳನ್ನು ಬಿಟ್ಟು ಸುವಾಸನೆಯಿಂದ ಸೆಳೆಯಲ್ಪಟ್ಟು, ಮಂಗಳನಾದದಿಂದೊಡಗೂಡಿ, ಹೂವಿನವಳೆಯನ್ನನುಸರಿಸಿದ್ದುವು.