ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ರಘುಕುಲಚರಿತಂ r೩ ಗೋಪಾಲಕೃಷ್ಣ (ಚರ್ಚೆ) ೧ ೧ • • • • •••• ಬರಬೇಕೆಂಬ ತನ್ನ ಗರ್ಭದ ಬಯಕೆಯನ್ನು ನನ್ನೊಂದಿಗೆ ತಿಳಿಸಿ ಆದಾ ಳ, ಅದರಿಂದ ನೀನು ಅದನ್ನೇ ನೆಪಮಾಡಿಕೊಂಡು, ಆಕೆಯನ್ನು ರಥದಿಂದ ಕರೆದೊಯ್ದು , ವಾಲ್ಮೀಕಿ ತಪೋವನದಲ್ಲಿ ಬಿಟ್ಟು ಬಿಡು ಎನಲು,ಲಕ್ಷಣ ನು - ತಂದೆಯಾದ ಜಮದಗ್ನಿಯ ಶಾಸನದಿಂದ ಭಾರ್ಗವನು - ಹಗೆಯು ಶಿರವನ್ನಿರಿದಂತೆ ಹೆತ್ತತಾಯ ಕತ್ತನ್ನುತ್ತರಿಸಿದನು ಎಂಬುದನ್ನು ಕೇಳಿ ಇದ್ದನು, ಅದರಿಂದಲೇ ಅಣ್ಣನಪ್ಪಣೆಯನ್ನೊಪ್ಪಿಕೊಂಡನು. ಗುರ್ವಾ ಜ್ಞೆಯು ಅವಿಚಾರಣೀಯವಲ್ಲವೆ ? ಮತ್ತು ಅನುಲ್ಲಂಘನೀಯವಲ್ಲವೆ ? ತರುವಾಯ ಸೀತೆಯು - ತನ್ನ ಆತ್ಮವನ್ನು ಪತಿಯು ನೆರವೇರಿ ಸುವನೆಂದು ಕೇಳಿ ಸಂತುಷ್ಕೃಳಾಗಿದ್ದಳು. ಸುಮಂತನು ಬೆದರದ ಕು ದುರೆಗಳನ್ನು ಹೂಡಿ, ಕಡಿವಾಣಗಳನ್ನು ಹಿಡಿದು, ರಥದ ಮೂಕಿನಲ್ಲಿ ಕು ಆತನು, ಸಾವಿತ್ರಿಯು ಸೀತೆಯನ್ನಾರಥದಲ್ಲಿ ಕುಳ್ಳಿರಿಸಿ ಹೊರಟನು ಬಳಿಕ ವೈದೇಹಿಯ) ತೆರಳುತ - ಅಲ್ಲಲ್ಲಿ ಮನೋಹರ ಪ್ರದೇಶಗಳನ್ನು ಅವಲೋಕಿಸುತ್ತಾ, ಪ್ರಿಯನು ತನಗೆ ಪ್ರಿಯಂಕರನಾಗಿರುವನೆಂದು ಆನೆಂ ದಿಸುತಲಿದ್ದಳು, ಆದರೆ - ಆ ಪ್ರಿಯವು ತನ್ನ ವಿಷಯದಲ್ಲಿ ಕಲ್ಪದ್ರುಮ ವಾಗದೆ, ಹತ್ತಿರಕ್ಕೆ ಬಂದವರನ್ನು ಕತ್ತರಿಸುವ ಅನಿಪವೃಕ್ಷವಾಗಿ ಪರಿಣಮಿಸಿರುವುದನ್ನು ಅರಿಯಲಿಲ್ಲ. ಲಕ್ಷಣನೂ ದಾರಿಯಲ್ಲಿ ಅತ್ತಿಗೆ ಗೆ ಮುಂದೆ ಒದಗುವ ದುಃಖದ ಸುದ್ದಿಯನ್ನು ಮುಂದಾಗಿ ತಿಳಿಸಲಿಲ್ಲ. ಆದರೆ ಮುಂದೆ ಪ್ರಿಯನ ಸಂದರ್ಶನವು ಸಂಪೂರ್ಣವಾಗಿ ಲೋಪಿಸುವ ಗುರುತರವೆನಿಸಿದ ಭವಿಷ್ಯದ್ದುಃಖವನ್ನು, ಅದಿರುತಲಿರುವ ಎರಡಗಣ್ಣು ಹೇಳಿಬಿಟ್ಟಿತು, ಆ ಅಪಶಕುನದಿಂದ ಜಾನಕಿಗೆ ಬಹಳ ವಿಷಾದವುಂಟಾ ಯಿತ್ತು, ಕೂಡಲೆ ಮುಖಕಮಲವು ಬಾಡಿತ್ತು, ಅನುಜರಿಂದೊಡಗೂಡಿದ ರಾಮನಿಗೆ ಶುಭವಾಗಲೆಂದು ಅಂತಃಕರಣ ಧ್ಯಾನಗಳಿಂದ ಪುನಃಪುನಃಪಾ ರ್ಥಿಸುತ್ತಿ ದ್ದಳು, ಗರತಿಯೆನಿಸಿ, ಗರ್ಭಿಣಿಯೂ ಆಗಿರುವ ಅಬಲೆಯಾದ ಸೀತೆಯನ್ನು ಅಣ್ಣನಪ್ಪಣೆಯಿಂದ ಅರಣ್ಯದಲ್ಲಿ ಬಿಟ್ಟು ಬಿಡಬೇಕೆಂದಿರುವ ಲಕ್ಷ್ಮಣನನ್ನು, ಇದಿರಿಗೆ ಹರಿದು ಬರುತಲಿರುವ ಜಾಹ್ನವಿಯು – ತನ್ನ