ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] | ರಘುಕುಲಚರಿತಂ ೯೧ MMIMwwwurv•••www+MMIMMMMM ಕುದುರೆಯನೇರಿದವನೂ, ಅನೆಯ ಮಾವಟಿಗನನ್ನು ಆನೆಯ ಮಾವಟ ಗನೂ ಕ್ರಮವಾಗಿ ಇದಿರಿಸಿ, ಸಮಬಲದ ಭಟರ ಬವರವು ಬೆಳೆಯಿತು. ರಣವಾದ್ಯಗಳು ಮೊಳಗತೊಡಗಿದುವು, ಬಿಲ್ಲಾಳುಗಳೊಳಗೆ ಒಬ್ಬರ ನುಡಿಯು ಬೇರೊಬ್ಬರಿಗೆ ಕೇಳಬರುತಲಿರಲಿಲ್ಲ, ತಂತಮ್ಮ ಮನೆತನದ ಹೆಸರುವಾಸಿಯನ್ನು ಯಾರೂ ಹೇಳಿಕೊಳ್ಳಲೇ ಇಲ್ಲ, ಒಬ್ಬರಮೇಲೊ ಬರ ಅಂಬುಗಳು ಬಂದು ಬಿದ್ದ ಕೂಡಲೆ, ಆ ಬಾಣಗಳ ಮೇಲಿರುವ ನಾಮಾಕ್ಷರಗಳಿಂದ ಇದಿರಾಳನ ಪ್ರಖ್ಯಾತಿಯನ್ನರಿತು, ಬಿಲ್ಲಾಳುಗಳ ಬ್ಲೊಬ್ಬರನ್ನೊಬ್ಬರು - ಪೌರುಷದ ಪರಿಯಂಕುರಿತು ಕೊಂಡಾಡಿಕೊಳ್ಳು ತಲಿದ್ದರು. ಕಾಳಗದಲ್ಲಿ ಕುದುರೆಗಳ ತುಳಿತದಿಂದೆದ್ದ ಧೂಳಿಯು - ತೇರುಗಳ ಚಕ್ರದ ಪಟ್ಟೆಗಳಿಂದ ಹಾರಿದ ರಜದಿಂದ ದಟ್ಟವಾಗಿ, ಆನೆಗಳ ಅಗಲವಾದ ಕಿವಿಗಳಿಂದ ಬೀಸಲ್ಪಟ್ಟು, ಹರಡಿ, ಬಟ್ಟೆಯಂತಾಗಿ, ರವಿ ಮಂಡಲಕ್ಕೆ ಹೊದಿಕೆಯಾಯಿತು. ದಳದಲ್ಲಿ ಎತ್ತಿ ಹಿಡಿದಿರುವ ದಾಳಗಳ ತುದಿಯಲ್ಲಿನ ಬಟ್ಟೆಗಳೊಳಗೆ ಚಿತ್ರಿಸಿರುವ ಮಿಾನುಗಳು - ಗಾಳಿಯ ಬಿರುವಿನಿಂದ ಬಾಯ್ಸಳನ್ನು ತೆರೆದು, ಮೇಲಕ್ಕೆ ಹಾರಿಬಂದ ಪಡೆಯ ಧೂಳಿಯನ್ನು ಕುಡಿದು, ಮುಂಗಾರು ಮಳೆಯ ಹೊಸದಾದ ಬಂಡು ನೀರನ್ನಿಂಟಿ, ಮಲಿನವಾಗಿರುವ ನಿಜವಾದ ಮಿಾನುಗಳಂತೆ ಬೆಳಗುತಲಿ ಈು ವು. ಆಗಸದ ಅಂಗಳವೆಲ್ಲ ಧೂಳಿಯಿಂದ ತುಂಬಿರಲು, ಬಂಡಿಯ ಗಾಲಿಯ ದನಿಯಿಂದ ಇದು ತೇರೆಂದು ತಿಳಿಯಬರುತಲಿದ್ದಿತು. ಕೊರಳ ಗಂಟೆಯ ಗಣಗಣನೆಂಬ ಸದ್ದಿ ನಿಂದ ಗಜವೆಂದು ಗೊತ್ತಾಗುತಲಿದ್ದಿ ತು. ತಂತಮ್ಮ ದೊರೆಯ ಹೆಸರನ್ನು ಹೇಳುವುದರಿಂದಲೇ ಧೂಳಿಯಲ್ಲಿ ಮುಳು ಗಿರುವ ಆಳು ಇಂಥವರ ಕಡೆಯವನೆಂಬುದು ಅರಿವಿಗೆ ಬರುತಲಿತ್ತು. ಕಾಳಗದ ನೆಲದಲ್ಲಿ ಪಡೆಯ ಕಣ್ಣಿನ ನೋಟಕ್ಕೆ ತಡೆಯಾಗಿ ತುಂಬಿರುವ ಧೂಳಿಯು – ಎಲ್ಲೆಲ್ಲಿಯೂ ಆವರಿಸಿದ ಕತ್ತಲಾಯಿತು, ಬಿಲ್ಲಾಳುಗಳು ಬಿಡುವ ಅಂಬುಗಳ ಪೆಟ್ಟು ಬಿದ್ದು, ಆನೆ, ಕುದುರೆ, ಕಾಲಾಳುಗಳ ಮೈಗಾ ಯಗಳಿಂದ ಹೊರಡುವ ನೆತ್ತರಿನ ಹೊಳೆಯು-ಬಾಲಸೂರ್ಯನಾಗಿದ್ದಿತು. ಎಲ್ಲ ಕಡೆಗಳಲ್ಲಿಯೂ ಅಡರಿರುವ ಧೂಳಿಯು - ರಕ್ತಪ್ರವಾಹದಿಂದ ಬುಡವು ಕತ್ತರಿಸಿ ಹೋಗಲು, ಮೇಲ್ಬಾಗದಲ್ಲಿ ಗಾಳಿಯಿಂದ ಅಲು ಗುತಲಿರುವುದಾಗಿ, ಇದ್ದ ಲಾದ ಬೆಂಕಿಯಿಂದ ಮೊದಲು ಹೊರಟಿದ್ದ