ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಜರಿತು ೧e MMwwwnMow+ ••••mmwwwMM ಮಕರಂದದ ಹನಿಗಳಿಂದ ಮಲಿನವಾದ ಮರಗಳನ್ನೂ ದುಖಿಃಸುತ ಲಿರುವವುಗಳನ್ನಾಗಿ ಮಾಡಿದನು. ಬಳಕ - ಬಂಧುವರ್ಗದವರು ಬಂದು, ಅಜನ ತೊಡೆಯಮೇಲೆ ಸವಳಿಸಿ, ಮರಣದಲ್ಲಿಯೂ ಬಹು ರಮಣಿಯರಾಗಿರುವ ಇಂದುಮತಿ ಯನ್ನು, ಬಿಡದೆ ಬಲವಾಗಿ ಹಿಡಿದಿರುವ ದೊರೆಯ ಕರದಿಂದ ಬಲಾತ್ಕಾ ರವಾಗಿ ಬಿಡಿಸಿ, ಅವಳ ಎದೆಯಮೇಲಿದ್ದ ಅಮರಕುಸುಮಮಾಲೆಯನ್ನೇ ಅವಳಿಗೆ ಅಂತ್ಪಾಲಂಕಾರವನ್ನಾಗಿ ಆಚರಿಸಿ, ಅಗರು ಚಂದನ ಮೊದಲಾದ ಕಾವ್ಯಗಳ ಚಿತಿಯಲ್ಲಿನ ಅಗ್ನಿಗೆ ಆಹುತಿಯನ್ನಾಗಿ ಸಮರ್ಪಿಸಿದರು. << ಧೀರನಾಗಿದ್ದ ದೊರೆಯು ವಿವೇಕಿಯಾದರೂ ಶೋಕಕ್ಕೀಡಾಗಿ, ಮಡದಿಯೊಡನೆ ಮಡಿದುಹೋದನ, ೨೨ ಎಂಬ ಅಪಖ್ಯಾತಿಗೆ ಅಂಜಿ, ಅಜನು ಅರಸಿಯೊಡನೆ ತನ್ನ ಶರೀರವನ್ನು ಅಗಿಗೀಡುಮಾಡಲಿಲ್ಲ? ಅಪ್ಪೆಹೊರತು ಜೀವಿತದ ಆಶೆಯಿಂದಲ್ಲ. ಆಮೇಲೆ - ವೀರ ಕ್ಷತ್ರಿಯನೂ, ಶಾಸ್ತ್ರಜ್ಞನೂ, ಸ್ಪಧುನಿರತನೂ ಆಗಿರುವ ಅಜನು - ಗುಣಗಳಿಂದ ಮಾತ್ರವೇ ಉಳಿದಿರುವ ಇಂದುಮು ತಿಯನ್ನು ಉದ್ದೇಶಿಸಿ, ದಶಾಹದಮೇಲೆ ಮಾಡಬೇಕಾದ ವಿಧಿಗಳನ್ನೆಲ್ಲ ಸಮೃದ್ಧಿಯಿಂದ ಕ್ರಮವಾಗಿ ಪುರೋದ್ಯಾನದಲ್ಲಿಯೇ ಆಚರಿಸಿ ಮುಗಿ ಸಿದನು.' ಹೀಗೆ ಇಂದುಮತಿಯನ್ನು ಕಳೆದುಕೊಂಡು, ಕ್ಷಣದೆಯು ಕಳೆಯಲು ಉಳಿದ ಚಂದಿರನಂತೆ ಕಾಣಬರುವ ಆ ಅಜನು - ತನ್ನ ಶೋಕದ ಕಡಲಿನ ಕಾಲುವೆಗಳನ್ನು ಪುರಸುಂದರಿಯರ ಕಣ್ಣುಗಳಲ್ಲಿ ನೋಡುತ್ತಾ ಪುರಪ್ರವೇಶಮಂ ಗೈದನು, ಅದುವರೆಗೆ ಈತನ ಕುಲ ಗುರುವಾದ ವಶಿಷ್ಠ ಮುನಿಯು – ತನ್ನ ತಪೋವನದಲ್ಲಿ ಯಜ್ಞದೀಕ್ಷೆ ಯನ್ನು ಕೈಗೊಂಡಿದ್ದನು. ಅಜನ ನೆನಪು ಬಂದಿತು, ಧ್ಯಾನದೃಷ್ಟಿ ಯಿಂದ ನೋಡಿದನು, ಅವನು ಅಕಾಲದಲ್ಲಿ ಆರತಿಗೀಡಾದನೆಂಬ ಸಂಗ ತಿಯ ತತ್ತ್ವವು ಅರಿವಿಗೆ ಬಂದಿತು, ತನ್ನ ಪ್ರಿಯಶಿಷ್ಯನಸಂಗಡ ಹೇಳಿ ಕಳುಹಿಸಿದನು, ವಶಿಷ್ಠ ಮಹರ್ಷಿಯ ಅಂತೇವಾಸಿಯು-ಅಜನನಗರಿ ಗೈತಂದನು. ಮಹಾರಾಜನಂ ಕರಡು, ಉಚಿತಸತ್ಕಾರವನ್ನು ಪಡೆದು ಆತನನ್ನು ಕುರಿತು ಇಂತಂದನು. - ಆ ಈ” ವಿ' €