ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದ . « .ಹಾಗಾದರೆ-ಅಂತಹಕೈಲಾಗದ ಕೆಲಸಕ್ಕೆ ಏಕೆ ಪ್ರಯತ್ನಿಸಬೇಕು ಸುಮ್ಮನಿರಬಹುದಲ್ಲ, ಎನ್ನ ಬಹುದು, ಆದರೆ-ವಹದಬೈರಿಗೆಯಿಂದ ರತ್ನ ವನ್ನು ಕೊರೆದರೆ ಆ ತೂಬಿನಲ್ಲಿ ಬಾರವು-ಒಳಹೋಗಲು ದಾರಿಯುಂಟಪ್ಪೆ? ಹಾಗೆಯೇ, ಪೂರ್ವಿಕರಾದ ವಾಲ್ಮೀಕಿಮುಂತಾದ ಮಹಾಕವಿಗಳು - ಆ ರಘುಕುಲದರಸರ ಚರಿತೆಯನ್ನು ಸ್ವಲ್ಪಮಟ್ಟಿಗೆ ವಿವರಿಸಿ, ದಾರಿಯನ್ನು ಕಲ್ಪಿಸಿ (ತೋರಿ) ಇದಾರೆ. ನಾನೂ-ಅದೇ ಹಾದಿಯನ್ನು ಹಿಡಿದು ಮುಂದ ರಿಯಲುಅವಕಾಶವುಂಟು, ಅದರಿಂದ ಆ ಕೆಲಸವನ್ನು ಕೈಗೊಂಡಿರುವೆನು. ರಘುಕುಲದರಸರು ಸಾಮಾನ್ಯರಲ್ಲ;-ಹುಟ್ಟಿದಂದಿನಿಂದಲೂ ಬ ಹು ಪವಿತ್ರರಾದವರು, ಹಿಡಿದ ಕೆಲಸವು ಕೈಗೂಡುವವರೆಗೂ ಮಾಡಿ, ಮುಗಿಸತಕ್ಕವರಲ್ಲದೆ ನಡುವೆ ಅಳುಕಿನಿಂದ ಕೈ ಬಿಡತಕ್ಕವರಲ್ಲ, ನಾಲ್ಕು ಕಡಲುಗಳ ನಡುವೆ ಇರುವ ಪೊಡವಿಯ ಒಡೆತನವೆಲ್ಲ ಅವರದೇ ಅಲ್ಲದೆ ಬೇರೊಬ್ಬರದಲ್ಲ. ಒಳ್ಳಷ್ಟಗಳನ್ನೆಸಗಿ ಆರ್ಜಿಸಿದ ಧವೆಂಬ ತೇರನ್ನೆ ರಿ, ಸರ್ಗಕ್ಕೆ ತೆರಳುವಾಗ ಅವರಹಾದಿಗೆ ಅಡ್ಡಿಯೇ ಇಲ್ಲ. ವಿಧಿಯನ್ನ ನುಸರಿಸಿಯೇ ಯಜ್ಞ ಯಾಗಾದಿಗಳನ್ನು ಮಾಡುತಲಿದ್ದವರು, ಅವರ ಬಳಿಗೆ ಬಂದ ಯಾಜಕರು ತಮ್ಮ ಬಯಕೆಗೆ ವಿಾರಿದ ಫಲವನ್ನು ಈಡೇರಿಸಿಕೊಂಡು ತೆರಳುತಲಿದ್ದರಲ್ಲದೆ ಕೊರತೆಯಿಂದ ಹಿಂದಿರುಗುತಲಿ ರಲಿಲ್ಲ. ಅವರ ಆಳ್ವಿಕೆಗೊಳಪಟ್ಟ ಪ್ರಜೆಗಳಲ್ಲಿ ಅಪರಾಧಿಗಳು-ತಮ್ಮ ತಪ್ಪಿತಕ್ಕೆ ತಕ್ಕದಂಡನೆಯನ್ನು ಪಡೆಯುತಲಿದ್ದ ರು. ಆ ಪೊಡವಿಯಾ ರು-ಕಾಲವನ್ನರಿತು ಎಚ್ಚರದಪ್ಪದೆ ಹಂಚಿಕೆಯಿಂದ ಕೆಲಸಗಳನ್ನು ಮಾ ಡುತಲಿರುವರಲ್ಲದೆ, ಸೋಮಾರಿಗಳಾಗಿಯಾಗಲಿ, ಮದೋನ್ಮತ್ರರಾಗಿಯಾ ಗಲಿ ಇದ್ದವರಲ್ಲ. ಇಂತಾಮನುವಂಶದ ಮಹಾರಾಜರಲ್ಲಿ-ದೇವತಾರಾ ಧನೆ, ಅತಿಥಿಸತ್ಕಾರ, ಶಿಕ್ಷಣಕ್ರಮ, ಪ್ರಜಾಪಾಲನ ಸರಿಸಾಟಿ ಎಂಬಿವುಬಲು ಅಚ್ಚುಕಟ್ಟಿನಿಂದ ನೆಲೆಗೊಂಡು ಹೆಚ್ಚಳಗೊಳಿಸುತಲಿದ್ದುವು. ಆ ನ ರನಾಥರು ಗಳಿಸಿದ ಹಣವೆಲ್ಲ ಸತ್ಪಾತ್ರದಲ್ಲಿ ವಿನಿಯೋಗವಾಗುತಲಿದ್ದಿತ ಎದೆ ದುರಾರ್ಗದಲ್ಲಿ ವೆಚ್ಚವಾಗುತಲಿರಲಿಲ್ಲ. ಸತ್ಯಸಂರಕ್ಷಣೆಗಾಗಿ ಮಿತಭಾಷಣವು ಅವರಲ್ಲಿ ನೆಲೆಗೊಂಡಿದ್ದಿ ತಲ್ಲದೆ, ಹೆಮ್ಮೆಯಿಂದಾಗಲಿ, ಹೆರರನ್ನು ಅಸಡ್ಡೆ ಮಾಡಿಯಾಗಲೀ ಅಲ್ಲ. ಹಗೆಗಳನ್ನಡಗಿಸಲಿಕ್ಕೂ,