ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ. ೧೩ ನೂರುವರ್ಷಗಳ ಕಾಲವೂ ಬದುಕುತ್ಯ,ಸುಖದಿಂದಿರುವುದಕ್ಕೆ ನಿನ್ನ ತಪೋ ಮಹಿಮೆಯೇ ನಿಮಿತ್ತವು, ಬ್ರಹ್ಮನ ಮಾನಸಪುತ್ರನೂ ಆಚಾರ್ನೂ ಆಗಿರುವ ನೀನು-ಹೀಗೆ ನನ್ನ ಯೋಗಕ್ಷೇಮಗಳನ್ನು ಯಾವಾಗಲೂ ವಿಚಾರಿಸಿಕೊಳ್ಳುತಲಿರುವಲ್ಲಿ, ನನ್ನ ಸಂಪತ್ತುಗಳಿಗೆ ಯಾವುದೆಂದು ಕು೦ ದೂ ಇಲ್ಲದಂತಾಗಿದೆ. ಆದರೆ_ಸಕಲೈಶರವೂ ಇಷ್ಟು ಅಣಿಯಾಗಿರುವಲ್ಲಿ, ನೀನೀಗ ಆ ಲ್ಲಿಗೆ ಬರಲು ಕಾರಣವೇನು ಎಂಬೆಯೋ ? ಬಿನ್ನವಿಸುವೆನು ಲಾಲಿಸು-- ಎಲೆಗುರುವೇ ! ನಿನ್ನ ಸೊಸೆಯಾದ ಈ ಸುದಕ್ಷಿಣೆಯಲ್ಲಿ ಸಂತಾನದ ಮು ೩ವನ್ನು ಕಾಣದಿರುವುದರಿಂದ ಸಪ್ತದೀಪಗಳಿಂದೊಡಗೂಡಿದ ವಸುಮತಿ ಯು-ರತ್ನಗಳನ್ನೇ ಬೆಳೆದುಕೊಡುತಲಿದ್ದ ರೂ ನನಗೆ ಸುಷಿಕರವಾಗಿಲ್ಲವು, ಏತಕೆಂದರೆ-ನನ್ನ ಅನಂತರದಲ್ಲಿ ವಿಂಡದಾನವು ದೊರೆಯುವುದಿಲ್ಲವೆಂಬ ಶಂ ಕೆಯಿಂದ ಪಿತೃದೇವತೆಗಳು-ಶಾದ್ದಗಳಲ್ಲಿ ನಾನು ಕೊಡುವ ವಿಂಡಗಳನ್ನು ಹೊಟ್ಟೆ ತುಂಬ ತಿನ್ನದೆ, ಸ್ವಲ್ಪ ಸ್ವಲ್ಪವಾಗಿ ಉಳಿಸಿಟ್ಟು ಕೊಳ್ಳುತಿರುವರಲ್ಲಾ ಎಂದು ದುಃಖಿಸುತ್ತೇನೆ, ಮತ್ತು-ನನ್ನ ತರುವಾಯ ತಮಗೆ ತರ್ಪಣೋ ದಕ ಪಾನವು ದುರ್ಲಭವೆಂದು ತಿಳಿದು,ಹಬ್ಬ ಹರಿದಿನಗಳಲ್ಲಿ ನಾನುಕೊಡುವ ತರ್ಪಣ ಜಲವು-ಸಂಕಟದ ನಿಟ್ಟುಸಿರಿನಿಂದ ತುಸ ಬಿಸಿಯಾಗಲು, ಅದನ್ನೇ ಕುಡಿಯುತಲಿರುವರೆಂದು ವ್ಯಥೆಪಡುತಲಿದೇನೆ. ಇದಲ್ಲದೆ-ಯಜ್ಞ ಯಾಗಾ ದಿಗಳನ್ನಾಚರಿಸಿ, ದೇವಋಣದಿಂದ ಬಿಡುಗಡೆಯನ್ನು ಹೊಂದಿ,ಶುದ್ದ ಚಿತ್ರ ನಾಗಿದೇನೆ, ಸಂತತಿಯ ಮುಖವನ್ನು ಕಾಣದೆ ಪಿತೃಋಣದಿಂದ ಮುಕ್ತ ನಾಗದೆಯಿರುವ ಕೊರತೆಯಿಂದ ಮಲಿನಾತ್ರನಾಗಿರುವನು. ಈ ಕಾರ ಣದಿಂದಲೇ ಒಂದೆಡೆ ಬೆಳಗುತಲೂ, ಮತ್ತೊಂದೆಡೆ ಬೆಳಗದೆಯೂ ಇರುವ ಲೋಕಾಲೋಕಪರ್ವತದಂತಿರುವೆನು. ಎಲೆ ಸರ್ವಜ್ಞನಾದ ಆಚಾ ಈನೇ ! ತಪಸ್ಸು, ದಾನ, ಮುಂತಾದ ಸತ್ಕರಗಳಿಂದೊಗೆವ ಸುಕೃತವುಪರಲೋಕದಲ್ಲಿನ ಸುಖವನ್ನು ಕಲ್ಪಿಸುವುದು, ಸತ್ತುಲದೊಳುದಿಸಿದ ಸಂತಾನವು- ಇಹಪರಸುಖಗಳೆರಡನ್ನೂ ಅನುಗೊಳಿಸುವುದಲ್ಲವೆ ? ಎಲೈ ಹಿತಚಿಂತಕನಾದ ಗುರುವೇ ! ಈ ನಿನ್ನ ತಪೋವನದಲ್ಲಿ ನೀನೇ ಒಂದು ಬಿತ್ಯವನ್ನು ನಟ್ಟು, ಗಿಡವಾದ ಬಳಿಕ ಅಕ್ಕರೆಯಿಂದ ನೀರೆರೆದು ಸಾಕುತ ಲಿದ್ದು, ತರುವಾಯ ಆತನುವು - ಹೂತು ಹಣ್ಣು ಬಿಡದೆ ಗೆಡ್ಡಾದರೆ,