ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨] ರಘುಕುಲಚರಿತಂ ••••• ಕೇಸರಿಯ ಆಕ್ರಮಣದಿಂದ ಆಕಳು ಕಾತರಿಸಿ, ಮಿಣುಮಿಣನೆ ಬಿಡುತಲಿರುವ ಕಣ್ಣುಗಳಿಂದ ನೋಡುತಲಿದೆ, ಅದನ್ನು ನೋಡುತಲಿರುವ ಅರಸಿಗೆ ಕನಿಕರವು ಉಕ್ಕುಳಿಸುತಲಿದೆ. ಆ ಮನುಜದೇವನು-ಮಾದೇವ ನನುಚರನಾದ ಹರಿದು ಮಾತನ್ನು ಕೇಳಿ ಮಗುಳಿಂತೆಂದನು | ಎಲೈ ಪಂಚಾನನನೇ ! ಮರೆಹೊಕ್ಕವರನ್ನು ಗಾಯಪಡದಂತೆ ಕಾಪಿಡುವವನು, ಎಂಬರ್ಥದಿಂದಲ್ಲವೆ ಲೋಕದಲ್ಲಿ ಉದಾರವಾದ ಕತ್ರಶಬ್ದ ವು ಬಳಕೆಗೆ ಬಂದಿದೆ ? ಅದಕೆ ತಲೆಕೆಳಕಾದ ನಡತೆಯಲ್ಲಿರುವ ನನಗೆ ಸಾಮ್ರಾಜ್ಯದಿಂದಾಗಲಿ, ಜಿಹಾಸೆಗೊಳಗಾಗಿ ಮಲಿನಗಳೆನಿಸಿದ ಹರಣಗಳಿಂದಾಗಲಿ ಉಪಯೋಗವೇನು ? ಜಾತಿ ಧರ್ಮವನ್ನು ತೊರೆವು ದಕ್ಕಿಂತಲೂ ಜೀವನವನ್ನು ತೊರೆವುದೇ ಮೇಲಲ್ಲವೆ ? ಬೇರೆ ಗೋವುಗ ಳನ್ನು ಕೊಟ್ಟು, ಮಹಾಮುನಿಯ ಮುನಿಸನ್ನು ಇಳಿಸೋಣವೆಂದರೆ, ಸರ್ವಥಾ ಸಾಧ್ಯವಲ್ಲ. ಈ ಆಕಳು ಸಾಧಾರಣವಾದ ಆಕಳಲ್ಲಿ, ಕಾಮ ಧೇನುವಿಗಿಂತ ಕಿಂಚಿತ್ತಾದರೂ ಕಡಮೆಯೆನಿಸಿದುದಲ್ಲವೆಂದು ತಿಳಿ, ಮಹೇಶರನ ಮಹಿಮೆಯಿಂದಲೇ ಇದರಲ್ಲಿ ನಿನ್ನ ಪೆಟ್ಟು ಬಿದ್ದು ದು, ಈ ಪಯಸ್ವಿನಿಗೆ ಪ್ರತಿಯಾಗಿ ನನ್ನ ದೇಹವನ್ನು ನಿನಗೆ ಒಪ್ಪಿಸಿ, ನಿನ್ನಿಂದ ಇದನ್ನು ಓಡಿಸತಕ್ಕುದೆ: ಸರಿ. ಹಾಗಾದರೆ ನಿನ್ನ ಆರೋಗಣೆಗೂ ಕೊರತೆಯುಂಟಾಗುವುದಿಲ್ಲ. ಮಹರ್ಷಿಯ ಹೋಮವೇ ಮೊದಲಾದ ಸತ್ಯಕ್ಕೂ ನ್ಯೂನತೆಯುಂಟಾಗದು. ನಾನು ದ್ರೋಹಿಯಾಗುವುದೂ. ಇಲ್ಲ. ಸ್ವಾಮಿಭಕ್ತಿಯೂ ನಿನಗೂ ಈ ವಿಷಯವು ಚೆನ್ನಾಗಿ ಗೊತ್ತಿದೆ. ಅದರಿಂದಲೇ ಈ ದೇವದಾರು ತರುವನ್ನು ಪೊರೆವುದ ರಲ್ಲಿ ಪರಿಪೂವಾದ ಪ್ರಯತ್ನವುಳ್ಳವನಾಗಿದ್ದೀಯೆ. ಕಾವಲುಗಾರನು -ಗಾಯಪಡದೆ, ಸಂತ ಕ್ಷಿಸುತಕ್ಕುದಾದ ಸ್ವತ್ತನ್ನು ನಾಶಗೊಳಿಸಿ, ಬರಿಗಯೀಂದ ಸ್ವಾಮಿಡು ಇದಿರಿಗೆ ಹೋಗಿ ನಿಲ್ಲುವುದು ಶಕ್ಯವಲ್ಲ. ತೊಂದರೆಯನ್ನುಂಟುಮಾಡು ನನ್ನನ್ನು ಉಳುಹಬೇಕೆಂದು ನಿನಗೆ ಕನಿಕರವಿದ್ದು ದೆ ಆದರೆ, ನನ್ನ ಕಿರಿದೇಹವನ್ನು ನಿಲ್ಲಿಸುವುದರಲ್ಲಿ ನಿನ್ನ ದಯಾಳುತೆಯನ್ನು ತೋರು. << ಪಾಂಚಭೌತಿಕ ಶ ಗಳು ನಾಶವನ್ನು ಪಡೆಯತಕ್ಕುವು,,ಎಂಬುದುಸಿದ್ದವಾಗಿವಲ್ಲಿ, ನನ್ನಂಥವರಿಗೆ ಅವುಗಳೊಳಗೆ ದಿಟವಾಗಿ ಎಂದಿಗೂ ಆದರವುಂಟಾಗುವುದಿಲ್ಲ.