ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳ ಶ್ರೀ ಕಾ ರ ದ . ಪೂಜ್ಯನೆನಿಸಿದ ಆತನನ್ನು ಸೇವಿಸುತ್ತಿದ್ದಳು. ಮನು ಮೊದಲ್ಗೊಂಡು ಹಲವುಮಂದಿ ಮಹಾರಾಜರು ಆ ಮಹಿಯನ್ನು ಅನುಭವಿಸಿದ್ದು ದು ದಿಟ. ಆದರೂ - ಆ ವಸುಮತಿಯು ರಘುವಿನ ವಿಷಯದಲ್ಲಿ ಹೆರರ ಕೈಹಿಡಿಯದವಳಂತೆ ಇರುತ್ತಿದ್ದಳು, ಅರಸು – ದುರುಳರನ್ನು ದಂಡಿ ಸುತ್ತಲೂ ಸಾಧುಗಳನ್ನು ಮನ್ನಿಸುತಲೂ ಇದ್ದು ದರಿಂದ, ಬಲುಬಿಸಿಯೂ ತನುವೂ ಅಲ್ಲದ ತೆಂಕಲ ಗಾಳಿಯಂತೆ ಎಲ್ಲರ ಮನವನ್ನೂ ಸೆಳೆಯುತ ಲಿದ್ದ ನು. ತಂದೆಗಿಂತಲೂ ಗುಣವಂತನಾದನು, ಮಾವಿನ ಹೂವು - ಕಾಯಾಗಿ ಹಣ್ಣಾಗುತ ಬಂದಾಗ, ಹೂವಿನಲ್ಲಿ ಪ್ರೀತಿಯು ಕಡಮೆಯಾ ಗುತ ಬರುವಹಾಗೆ, ಪ್ರಜೆಗಳಲ್ಲಿ ದಿಲೀಪನ ಪ್ರೀತಿಯು ಹಳೆಯದಾ ಗುತ ಬಂದಿತು. (ಮುಂದಿನದು ಗುಣವುಳುದಾದರೆ ಹಿಂದಿನದನ್ನು ಮರೆ ಯಿಸುವುದು) ಈ ಹೊಸದೊರೆಯು ಬಂದಬಳಿಕ ರಾಜನೀತಿಯನ್ನು ಚೆನ್ನಾಗಿ ಬಲ್ಲವರು ಧರಾಧರ ಯುದ್ಧ ಗಳ ಎರಡು ದಾರಿಗಳನ್ನೂ ತಿಳಿಸಿದರು, ಆದರೆ - ಆತನಿಗೆ ಮೊದಲನೆಯದೇ ರುಚಿಸಿತು, ನೆಲ, ನೀರು, ಗಾಳಿ, ಬೆಳಕು, ಬೈಲುಗಳಲ್ಲಿನ-ಗಂಧ, ರುಚಿ, ಸ್ಪರ್ಶ, ತೇಜ, ಶಬ್ದ ಎಂಬ ಗುಣಗಳು ಹೆಚ್ಚಿಕೆಯನ್ನು ಪಡೆಯುತ್ತಿದ್ದುವು. ಇದರಿಂದ ದೊರೆಯು ಹೊಸಬನಾಗಲು, ಅವೂ ಹೊಸವಾದವೆಂಬಂತೆ ಕಾಣಬಂ ದುವು, ಜನರಿಗೆ ಹರ್ಷಗೊಳಿಸುವುದರಿಂದ ಚಂದ್ರನಹಾಗೂ, ತಾಪಗೊ ೪ಸುವುದರಿಂದ ತಪನನಹಾಗೂ, ಆ ರಾಜನೂ ತನ್ನ ಆಳ್ವಿಕೆಯಿಂದ ಪ್ರಜೆಗಳ ಮನವನ್ನು ಮೆಚ್ಚಿಸುತ ಬಂದುದರಿಂದ ಅರ್ಧಕ್ಕೆ ಸರಿಯಾದ ಹೆಸರುಳ್ಳವನಾದನು, ಆತನ ಕಣ್ಣುಗಳು ಕಿವಿಗಳವರೆಗೂ ಹರಡಿ, ಬಲು ಅಗಲವಾಗಿಯೇ ಅಂದವೆನಿಸಿಯೇ ಇದ್ದುವು, ಆದರೂ ಕೆಲಸಗಳ ನವುರನ್ನು ಕಾಣುವ ಕೆಲಸವು - ಶಾಸ್ತ್ರಗಳಿಂದಲೇ ಆಗುತಲಿದ್ದಿತು. ಆ ಪೊಡವಿಯೊಡೆಯನು-ಒಳನಾಡಿನ ಹಗೆಗಳನ್ನೆಲ್ಲ ಅಡಗಿಸಿದನು, ಪ್ರಜೆಗ ಳನ್ನೆಲ್ಲ ಮೆಚ್ಚಿಸಿದನು, ಆಡಳಿತವನ್ನೆಲ್ಲ ನೆಲೆಗೆತಂದನು, ಮನವು ಸಮಾ ಧಾನಕ್ಕೆ ಬಂದಿತ್ತು, ಅದುವರೆಗೆ ಕಮಲಧಾರಿಣಿಯಾಗಿ ಎರಡನೆಯ ರಾಜ್ಯಲಕ್ಷ್ಮಿಯು ಬರುವಂತೆ, ತಾವರೆಗೆ ಸುಗ್ಗಿ ಯಾಗಿರುವ ಆಶ್ವಯುಜ ಮಾಸವೂ ಬಂದಿತು, ಮಳೆಗಾಲದ ಮೋಡಗಳು ಚೆನ್ನಾಗಿ ಮಳೆಗರೆದು, ಹಗುರಗಳಾಗಿ ದಾರಿಕೊಟ್ಟುದರಿಂದ ಸೂರನಬಿಸಿಲು ಎಲ್ಲೆಲ್ಲಿಯಹರಡಿ