ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಶ್ರೀ ಕಾ ರ ದ . ಇw ಹೊಳೆಗಳು ಹೆಚ್ಚೆಹರಿಯುವುದು ತಗ್ಗಿ ತು, ನಡಗೆಯಿಂದ ದಾಟಿಹೋಗಲು ತಕ್ಕುವಾದುವು, ಕಾಲುದಾರಿಗಳ ' ಕೆಸರೆಲ್ಲ ಒಣಗಿತ್ತು ಉತ್ಸಾಹಕ ಕಿಯು ರಾಜನನ್ನು ದಿಗ್ವಿಜಯಕ್ಕೆ ಹೊರಡುವಂತೆ ಪ್ರೇರಿಸುವುದಕಿಂತ ಮೊದಲೇ ಶರತ್ಕಾಲವು ಯಾತ್ರೆಗೆ ಎಚ್ಚರಿಸಿತು. ಅರಸು - ಹಗೆಗಳಮೇಲೆ ದಂಡೆತ್ತಿ ಹೋಗುವ ಸಮಯ ವೊದ ಗಿತೆಂದು ಅರಿತು, ಆನೆ ಕುದುರೆ ಮೊದಲಾದವುಗಳಿಗೆ ಆರತಿಮಾಡುವ ಹಬ್ಬವನ್ನು ನಡೆಸಿದನು, ಆಗ - ಅಗ್ನಿ ಪ್ರತಿಪ್ಪೆಮಾಡಿ ಕಟ್ಟಲೆಯಂತೆ ಹವನಮಾಡಿದನು, ಅಗ್ನಿಯಿಂದ ಉರಿಯು ಬಲಮೊಗನಾಗಿ ಸುತ್ತಿ, ಮೇಲಕ್ಕೆ ಬರುತಲಿದ್ದಿತು, ಇದರಿಂದ ಅಗ್ನಿಯು-ಅರಸನಿಗೆ ಕಯ್ಯ ಜಯವನ್ನು ಕೊಡುವಂತೆ ಕಂಗೊಳಿಸುತಲಿದ್ದಿತು. ಬಳಿಕ - ಮೊಟ್ಟ ಮೊದಲು ಒಳನಾಡಿಗೆ ಹೋಕಬಾರದಂತೆ ಭದ್ರಪಡಿಸಿದನು, ಕೋಟೆಗೆ ಸರಿಯಾದ ಕಾವಲಿಟ್ಟನು, ಬೆಂಗಡೆಯ ನಾಡುಗಳ ಹಾವಳಿಯಿಲ್ಲದಹಾಗೆ ಅಣಿಮಾಡಿದನು, ಆಮೇಲೆ ಶುಭಕರಗಳನ್ನು ಆಚರಿಸಿ, ಶಕುನ ಮುಂತಾ ದವುಗಳನ್ನು ನೋಡಿಕೊಂಡು, ರಾಜನು ದಿಗ್ವಿಜಯವನ್ನು ಬಯಸಿ ಹೊರಟನು. ರಾಜಬೀದಿಯಲ್ಲಿ ಬರುತಲಿರುವಾಗ ಊರ ಮುತ್ತೆ ದೆ ಯರು ವಾಡಿಕೆಯನ್ನನುಸರಿಸಿ ಎರಚತುಲಿರುವ ಅರಳು - ಅರಸನ ಶಿರದ ಮೇಲೆ ಬೀಳುತಲಿದ್ದುದು, ಹಿಂದೆ ಬಿಡುಗಣ್ಣರೂ ರಕ್ಕಸರೂ ಪಾಲ್ಗಡ ಲನ್ನು ಕಡೆವಾಗ-ಮಂದರ ಪರ್ವತದಿಂದ ಮೇಲಕ್ಕೆ ಹಾರಿದ ತೆರೆಗಳ ತುಂತುರುಗಳು - ಪಕ್ಕದಲ್ಲಿ ಸವಳಿದಿರುವ ನಾರಾಯಣನಮೇಲೆ ಬೀಳು ವಂತಿದ್ದಿ ತು. ಬಿಡುಗಣ್ಣರೊಡೆಯನಿಗೆಣೆಯೆನಿಸಿದ ಪೊಡವಿಯಾಬ್ಬನು-ಮೊದಲು ಮೂಡಲಕಡೆಗೆ ಪಯಣಮಾಡಿದನು. ದಂಡಿನಾಳುಗಳು ದಾಳಗಳನ್ನು ಎತ್ತಿ ಹಿಡಿದಿದ್ದ ರು, ಗಾಳಿಯಿಂದ ಅಲುಗುವ ತುದಿಯ ಬಟ್ಟೆಗಳು ಹಗೆಗ ಳನ್ನು ಬೆದರಿಸುವಂತೆ ಬೆಳಗುತಲಿದ್ದುವು, ತಿರೆಯಾಣ್ಮನ ಪರುಪದ ಹಸರುವಾಸಿಯು ಮುಂದರಿಯಿತ್ತು, ದಂಡಿನ ಕೋಲಾಹಲವು ಅದರಹಿಂದೆ ಹೊರಟಿತು, ಸೇನೆಯ ಧೂಳಿಯು ಅದನ್ನು ಹಿಂಬಾಲಿಸಿತು, ಚತು ರಂಗದ ಪಡೆಯು ಅದನ್ನು ಹಿಂದಟ್ಟಿತು, ಇಂತು ಆ ಸೈನ್ಯವು - ನಾಲ್ಕು ಹೆಗಲುಳ್ಳುದರಂತೆ, ಇಲ್ಲವೆ ನಾಲ್ಗೊಗದ ರಚನೆಯುಳ್ಳುದರಹಾಗೆ