ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೫೬ MM wrwwwmmwrew ನಿನ್ನನ್ನು ಇದಿರೊಳ್ಳಲು ಬಂದೆನಲ್ಲಾ ಎಂದು ನನ್ನ ಮನಸ್ಸಿಗೆ ಬಲು ಕೊರತೆಯುಂಟಾಗಿದೆ. ಎಲೆ ಭೂದೇವೇಂದ್ರನೇ ! ಅರಣ್ಯವಾಸಿಗಳಾದ ತಾಪಸು - ತೆರೆಯನ್ನೆಲ್ಲ ತೆಗೆದುಕೊಂಡಬಳಿಕ ದಂಟಿನಿಂದ ಮಾತ್ರವೇ ನಿಂತಿರುವ ಪೈರಿನಹಾಗೆ, ಸತ್ಪಾತ್ರಗಳಲ್ಲಿ ಸಂಪದಗಳನ್ನೆಲ್ಲ ವಿನಿಯೋ ಗಿಸಿದ ನೀನು ಶರೀರಮಾತ್ರದಿಂದ ಉಳಿದು ಬೆಳಗುತಲಿದ್ದೀಯೆ, ಆದರೂ ಚಿಂತೆಯಿಲ್ಲ. ನೀನು ಇದಿರಾಳಿಲ್ಲದ ಅರಸನನಿಸಿ, ಯಾಗದಲ್ಲಿ ನಡೆಸಿದ ಭೂರಿದಾನದಿಂದುಂಟಾಗಿರುವ ಹೆಚ್ಚಿದ ಬಡತನವನ್ನು ವ್ಯಕ್ತಪಡಿಸು ವುದು ಬಹು ಶ್ಲಾಘವಾಗಿದೆ. ಕೃಷ್ಣಪಕ್ಷದ ಮಾತೃ ಮೊದಲ್ಗೊಂಡು ದಿನಕ್ರಮದಲ್ಲಿ ದೇವತೆಗಳು ಪಾನಮಾಡುವುದರಿಂದ ಚಂದಿರನ ಕಳೆಗಳ (ಕೊರತೆಯು) ತಗ್ಗಲು, ಮುಂದಿನ (ಏಳಿಗೆಗಾಗಿ) ಹೊರವಿಗಾಗಿ ಶ್ಲಾ ೯ ತರವೆನಿಸುವುದಿಲ್ಲವೆ ? ಆದಕಾರಣ ಬೇರೊಂದು ಕೆಲಸವಿಲ್ಲದ ಈ ನಾನುಮತ್ತೊಬ್ಬ ದಾತನಿಂದ ಗುರುಧನವನ್ನು ಸಂಪಾದಿಸಲಿಕ್ಕೆ ಪ್ರಯತ್ನಿಸು ವೆನು, ನಿನಗೆ ಶುಭವಾಗಲಿ ! ಹೊರಡುತ್ತೇನೆ. ಚಾತಕ ಪಕ್ಷಿಯನೀರುತುಂಬಿಲ್ಲದ ಶರತ್ಕಾಲದ ಮೋಡವನ್ನು ಬೇಡುವುದಿಲ್ಲವ ? ಎಂದಿಮ್ಮನ್ನು ಹೇಳಿ, ಬಂದ ದಾರಿಯನ್ನು ಹಿಡಿಯಲಿಕ್ಕೆ ಹೊರಟ ಮಹರ್ಷಿ ಶಿಷ್ಯನನ್ನು ಮಹೀಪತಿಯು – ತಡೆದು, ಎಲೈ ಪ್ರಾಜ್ಞನೇ ! ಗುರುವಿಗೆ ನೀನು ಕೊಡಬೇಕಾಗಿರುವ ವಸ್ತು ವಾವುದು ? ಮತ್ತು - ಎಷ್ಟು ಕೊಡಬೇಕಾಗಿದೆ ? ಎಂದಾತನನ್ನು ಬೆಸಗೊಂಡನು. ಬಳಿಕ - ವರ್ಣಗಳಿಗೂ, ಆಶ್ರಮಗಳಿಗೂ ನಿಯಾಮಕನೆನಿಸಿ, ವಿಧಿಪ್ರಕಾರ ಯಾಗವನ್ನಾಚರಿಸಿ, ಹೆಮ್ಮೆಯಿಲ್ಲದೆ ತಗ್ಗಿ ರುವ ಆ ಧರಾನಾ ಥನಿಗೆ, ಬಲು ಜಾಣನಾದ ಸೌತ್ಸಬ್ರಹ್ಮಚಾರಿಯು ಪುಕೃತ ಕಾರವನ್ನು ಹೇಳತೊಡಗಿದನು - - ಎಲೈ ಹಮಾನಾಥನೇ ! ಲಾಲಿಸು - ಗುರುವಿನ ಬಳಿಯಲ್ಲಿ ಸಾಂಗ ವಾಗಿ ವಿದ್ಯೆಗಳನ್ನೆಲ್ಲ ಕಲಿತೆನು, ಬ೪ಕ - ಗುರುವೇ ! ಗುರುದಕ್ಷಿಣೆ ಯನ್ನು ಸ್ವೀಕರಿಸಬೇಕು ಎಂದು ಬಿನ್ನವಿಸಿದೆನು. ಅದಕ್ಕೆ ಆತನು - ಬಹುಕಾಲದಿಂದ ನಾನು ಕಮ್ಮಪಟ್ಟು ತಪ್ಪದಾಚರಿಸಿದ ಸೇವೆಯನ್ನೇ ಮುಂದುಮಾಡಿಕೊಂಡು « ನಿನ್ನ ಅಸಾಧಾರಣವಾದ ಭಕ್ತಿಯಿಂದಲೇ ನಾನು ಸಂತುಷ್ಟನಾಗಿದ್ದೇನೆ, ಇನ್ನು - ಬೇರೆ ದಕ್ಷಿಣೆಯೇಕೆ ? ೨೨