ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಶ್ರೀ ಶಾ ರ ದಾ ಹಿಂದಕ್ಕೆ ಮುದುರುವ ಮತ್ತು ಮುಂದಕ್ಕೆ ನೀಡುವ ಲಾಘವವುಳ ಸೊಂಡಿಲಿನಿಂದ, ಮುಂದೆ ಹರಿಯುವ ದೊಡ್ಡ ದೊಡ್ಡ ತೆರೆಗಳನ್ನು ಬಡಿದೊಡೆಯುತ್ತಾ, ಗಜಶಾಲೆಯ ಬಾಗಿಲಿಗೆ ಅಡ್ಡವಾಗಿ ಹಾಕಿರುವ ಅಗುಳಿಯನ್ನೊಡೆವುದರಲ್ಲಿ ಪ್ರವರ್ತಿಸಿರುವುದರಂತೆ ತೋರುತಲಿದ್ದಿ ತು, ಬಳಿಕ - ಬೆಟ್ಟಕ್ಕೆಣೆಯಾದ ಆ ದಿರದವು – ಪಾವಸೆಯ ಪೊದೆಯನ್ನು ಎದೆಯಿಂದ ಸೆಳೆಯುತ್ತಾ, ಮೊದಲು ತಳ್ಳಿದ ಜಲರಾಶಿಯನ್ನು ತಡಿಗೆ ಕಳುಹಿ, ತರುವಾಯ ತಾನೂ ಬಂದಿತು. ಆ ತೋರವಾದ ಕಾಡಾನೆಗೆ ನೀರಿನೊಳಗೆ ಮುಳುಗಿದ್ದ ಕ್ಷಣಕಾಲಮಾತ್ರವೇ ವಿಶಾಲವಾದ ಕಪೋಲ ಗಳಲ್ಲಿ ಶಾಂತವಾಗಿದ್ದ ಮದಜಲಧಾರೆಯು ನಾಡಾನೆಗಳನ್ನು ನೋಡಿದ ಮಾತ್ರದಲ್ಲಿ ಮರಳಿ ಹರಿಯತೊಡಗಿತು. ಏಳಲೆ ಬಾಳಗಿಡಗಳ ಹಾಲಿನಂತೆ ವಾಸನೆಯುಳ್ಳ ಆ ಮದಜಲದ ಕಂಪನ್ನು ವಾನಿಸಿದ ಕೂಡಲೇ, ದಳದಲ್ಲಿರುವ ದ್ವೀಪಗಳು - ಮಾವ ಟಿಗರ ಕ್ರೂರವಾದ ಪ್ರಯತ್ನವನ್ನೆಲ್ಲ ಅತಿಕ ಮಿಸಿ, ಓಡಲಿಕ್ಕೆ ಮೊದಲಿಟ್ಟುವು, ಕಟ್ಟನ್ನು ಹರಿದು, ನೊಗಗಳನ್ನು ತಳ್ಳಿ, ಕುದುರೆಗಳುಪಲಾಯನವಾದುವು, ತೇರುಗಳ ಅಚ್ಚು ಮುರಿಯಿತು, ರಥಗಳು ಉರುಳುವಾಗ ಮೇಲೆ ಕುಳಿತಿದ್ದ ಹೆಂಗಸರಿಗೆ ಅಪಾಯವಾಗದಂತೆ ಭಟರು ಕಾಪಾಡಿಕೊಂಬುದು ಬಲು ಕಷ್ಟವಾಯಿತು, ಹೀಗೆ - ಆ ಆನೆಯಿಂದ ಪಡೆಯೆಲ್ಲ ಕಲ್ಲೋಲವಾಯಿತು. ತಡೆಯಿಲ್ಲದೆ ಮಿತಿಮೀಾರಿ ಹಸ್ತಿಯು ಮೇಲೆ ನುಗ್ಗುತ್ತಿರುವ ಸುದ್ದಿ ಯು ಅಜಕುಮಾರನಿಗೆ ತಿಳಿ ಯಿತು. ಅತಿಕ್ರಮಿಸದಂತೆ ಅದನ್ನು ಹಿಂದಿರುಗಿಸಬೇಕೆಂದು ನೆನೆದನು, ಹೆದೆಯನ್ನು ಹೇರಳವಾಗಿ ಸೆಳೆಯದೆ, ಅದರ ಶಿರದಮೇಲೆ ಮೃದುವಾದ ಪೆಟ್ಟು ಬೀಳುವಂತೆ ಸರಳನ್ನು ಇಟ್ಟನು. ಕಾಳಗವನ್ನುಳಿದವೇಳೆಯಲ್ಲಿ ಕರಿಯನ್ನು ಕೊಲ್ಲಬಾರದೆಂದು ಕುಮಾರನು ಕೇಳಿದ್ದನು. ಶರದಪೆಟ್ಟು ತಗಲಿದ ಮಾತ್ರದಲ್ಲಿಯೇ ದಂತಿಯ ದರ್ಶನವಿಲ್ಲವಾಯಿತು, ನಗಿಲಿನಲ್ಲಿ | ಕಾಂತಿರಾಶಿಯೊಂದು ನೆಲೆಗೊಂಡಿತು, ಸಭಾಮಂಡಲದ ನಡುವೆ ತೇಜೋಮಯವಾದ ಆಕಾರವೊಂದು ಅಕಸ್ಸಾ ತ್ಯಾಗಿ ಕಾಣಬಂದಿತ್ತು, ಅದು ಬಲು ಕಮನೀಯವಾಗಿದ್ದಿತು, ಶಿಬಿರದವರೆಲ್ಲ ನೋಡಿ ಬಲು ಅಚ ರಿಗೊಂಡರು.