ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೬೩, ← ಆ• /+ AP" * * * ** * ** * * * * * * * * * *rry PIYP +4 ಬಳಿಕ - ಆಕಾಶಚರವಾದ ಆ ವಂಕಿಯು-ತನ್ನ ಮಹಿಮೆಯಿಂದ ಕೈಸೇರಿರುವ ಕಲ್ಪತರುಕುಸುಮಗಳನ್ನು ಸುಮಾರನ ಶಿರದಮೇಲೆ ಮಳೆಗರೆದು, ಮುಗುಳುನಗೆಯ ಬೆಳಕಿನಿಂದ ತನ್ನೆದೆಯ ತೋರವಾದ ಮುತ್ತಿನ ಹಾರಗಳನ್ನು ಬೆಳಗಿಸುತ, ಬಲು ಜಾಣತನದಿಂದ ಮಾತನಾ ಡತೊಡಗಿತು - ಎಲೈ ಅರಗುವರನೆ! ಮತಂಗನೆಂಬ ಮಹಾಮುನಿಯೋಗ್ರನುಂಟು, ನಾನೊಂದುವೇಳೆ ಆತನ ಬಳಿಯಲ್ಲಿ ಹೆಮ್ಮೆಯನ್ನು ತೋರಿದೆನು, ಆತನಿಗೆ ಸಿಟ್ಟು ಹತ್ತಿತು, ಮತಂಗನು ಮತಂಗಜದ ರೂಪವನ್ನು ಪಡೆವಂತನನ್ನನ್ನು ಶವಿಸಿದನು, ಅಂದಿನಿಂದ ಆ ರೂಪದಲ್ಲಿದ್ದೆನು, ನಾನು ಪ್ರಿಯದರ್ಶನನೆಂಬ ಗಂಧರ್ವ ರಾಜಕುಮಾರನು, ನನ್ನನ್ನು ಪ್ರಿಯಂವದನೆಂದು ಕರೆಯುತ್ತಾರೆ, ಶಾಪಗ್ರಸ್ತನಾದ ಆ ನಾನು - ತಪೋಧನನ ಅಡಿದಾವರೆಗಳಿಗೆರಗಿ, ಪರಿಹಾ ರವನ್ನು ಕರುಣಿಸಬೇಕೆಂದು ಕೇಳಿಕೊಂಡೆನು, ಮುನಿಯು ತಾಳ್ಮೆ ಯಿಂದ ಮೃದುವಾದನು, ಬೆಂಕಿಬಿಸಲುಗಳ ಸೋಂಕಿನಿಂದ ಬಿಸಿಯುಂ ಟಾದರೂ, ನೀರಿಗೆ ಶೈತವೇ ಸ್ವಾಭಾವಿಕವಾದ ಗುಣವಲ್ಲವೆ ? ಅಂತು ಶಾಂತನಾದ ತಪೋನಿಧಿಯ -IC ಇಕ್ಷಾಕುಕುಲ ಕುಮಾರನಾದ ಅಜನು ಎಂದು ನಿನ್ನ ಶಿರವನ್ನು ಅಲಗಿನಿಂದ ಭೇದಿಸುವನೋ, ಅಂದೇ ನಿನ್ನ ಸ್ವ-ಪವನ್ನು ಮಹಿಮೆಯೊಂದಿಗೆ ಪಡೆವೆ ,, ಎಂದು ನನಗೆ ಪರಿಹಾರ ಸಮಯವನ್ನು ಸೂಚಿಸಿದ್ದನು. ಬಹುಕಾಲದಿಂದ ನಿನ್ನ ಬರುವನ್ನು ಬಯಸಿ, ಇದಿರುನೋಡುತಲಿದ್ದ ನನ್ನಾ ರೂಪವು-ಸತ್ವಗುಣ ಸಂಪನ್ನನಾದ ನಿನ್ನಿಂದ ಪರಿಹರವಾದುದು. ಶಾಪಾಂತವನ್ನಾಂತೆನು, ನಿನ್ನಿಂದ ಪ್ರಿಯ ವನ್ನು ಪಡೆದ ಈ ನಾನು ನಿನಗೆ ಪ್ರತಿಕ್ರಿಯವನ್ನು ಮಾಡದೆ ಹೋದರೆ, ನನ್ನಿಪದವಿ ವಿಪದವಾಗುವುದಲ್ಲವೆ ? ಆದಕಾರಣ - ನನ್ನಲ್ಲಿ ಸಮ್ಮೋಹ ನವೆಂಬ ಒಂದು ಅಸ್ತ್ರವುಂಟು, ಅದನ್ನು ತೊಡುವುದಕ್ಕೂ, ತಡೆವುದಕ್ಕೂ ಮಂತ್ರ ಭೇದವಿದೆ, ಮತ್ತು - ಅದಕ್ಕೆ ಗಂಧರ್ವನೇ ದೇವತೆ, ಇದರ ಪ್ರಯೋಗದಿಂದ ಹಗೆಗಳಿಗೆ ಪ್ರಾಣಹಿಂಸೆಯೂ ಆಗುವುದಿಲ್ಲ, ಜಯವೂ ಕರಗತವಾಗಿರುವುದು, ಈ ಅಸ್ತ್ರವನ್ನು ಮಂತ್ರವತ್ತಾಗಿ ನೀನು ಪರಿ ಗ್ರಹಿಸು, ಇದೇ ನಿನ್ನ ಉಪಕಾರಕ್ಕೆ ಪ್ರತ್ಯುಪಕಾರವೆಂದು ಭಾವಿಸು ಪ್ರಾಣಹರಣದಲ್ಲುದ್ಯುಕ್ತನಾದ ಈ ನಾನು ಪ್ರತಿಪ್ರಿಯವನ್ನು ಹೇಗೆ