ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಶ್ರೀ ಕಾ ರ ದಾ , ನಿನ್ನ ಮುಖಮಾರುತದ ಸುವಾಸನೆಯೊಡನೆ ಸಾಮ್ಯವನ್ನು, ಪರಗುಣದಿಂದ ಭಡೆಯಲೆಳಸುವಂತೆ ಕಾಣಬರುವುದು, ತರುಗಳಲ್ಲಿನ ಕೆಂಪಾದ ತ೪ರು ಗಳ ನಡುವೆವಿದ್ದು, ಬಿಳುಪಾದ ಮುತ್ತಿನ ಕಾಂತಿಯನ್ನೊಳಗೊಂಡಿರುವ ಹಿಮದ ಹನಿಯು - ನಿನ್ನಯ ಚಲುವಾದ ಕೆಳತುಟಿಯಲ್ಲಿ ಹಲ್ಲಿನ ಬೆಳಕಿ ನಿಂದೊಡಗೂಡಿರುವ ವಿನೋದದ ಮುಗುಳುನಗೆಯಂತೆ ಬೆಳಗುತಲಿದೆ. ಹೇರಳವಾದ ತಾಪಕ್ಕೆ ಗಣಿಯಾಗಿರುವ ರವಿಯು-ಮೂಡಣ ಮುಗಿಲಿನಲ್ಲಿ ಮೂಡುವುದಕ್ಕಿಂತ ಮೊದಲೇ ಅರುಣನು ಕತ್ತಲನ್ನು ತರಿದೋಡಿಸುತ ಅದಾನೆ. ಎಲೈ ವೀರನೇ ! ಕಾಳಗಗಳೊಳಗೆ ನೀನು ಮುಂದಾಳಾಗು ತಿರುವಲ್ಲಿ - ನಿಮ್ಮ ತಂದೆಯು ಸ್ವತಃ ಹಗೆಗಳನ್ನು ಸದೆಬಡಿವುದುಂಟೆ ? ಯೋಗ್ಯರಾದ ಮಕ್ಕಳಲ್ಲಿ ಆಡಳಿತದ ಭಾರವನ್ನೆಲ್ಲ ಹೊರಿಸಿರತಕ್ಕೆ ಯಜಮಾನರಿಗೆ ವ್ಯವಹಾರದ ಖೇದವಿರುವುದೆ ? ಎರಡು ಪಕ್ಕಗಳಲ್ಲಿಯೂ ಕ್ರಮವಾಗಿ ಮಲಗಿ ನಿದ್ದೆ ಯನ್ನು ಕಳೆದು, ನಿನ್ನ ಆನೆಗಳು - ಗಲಗಲನೆ ಸದ್ದು ಮಾಡುತಲಿರುವ ಸರಪಣಿಗಳನ್ನು ಎಳೆದಾಡುತ ಎಚ್ಚರಗೊಳ್ಳುತ ಲಿರುವುವು, ಎಳೆ ಬಿಸಿಲಿನ ಸಂಬಂಧದಿಂದ ಕೆಂದಾವರೆಯ ಮೊಗ್ಗೆ ಗಳಂ ತಿರುವ ಆ ಆನೆಗಳ ಕೊಡುಗಳು - ಕೆಂಗಾವಿಗಲ್ಲಿನಿಂದೊಡಗೂಡಿರುವ ಬೆಟ್ಟದ ಭಾಗದಂತೆ ಕಂಗೊಳಿಸುತಲಿವೆ. ಎಲೈ ವನಜನಯನನೆ ! ನೀಳ ವಾದ ಗೂಡಾರಗಳೊಳಗೆ ಕಟ್ಟಿರುವ ವನಾಯುದೇಶದ ಮಾಜಿಗಳು ನಿದ್ರೆಯಿಂದೆದ್ದು , ಇದಿರಿಗೆ ಅಣಿಮಾಡಿರುವ ಉಪ್ಪಿನ ಗೆಡ್ಡೆಗಳನ್ನು ತಮ್ಮ ಉಸಿರಿನ ಬಿಸಿಯಿಂದ ಮಲಿನಗೊಳಿಸುತಲಿರುವುವು. ನೀನು ಸಿಂಗರಿಸಿ ಕೊಂಡಿರುವ ಪುಷ್ಪಹಾರಗಳಲ್ಲಿನ ಹೂಗಳು ಬಾಡುತ ಬಂದುದರಿಂದ, ರಚನೆಯಲ್ಲಿ ಬಿಡುವು ಕಾಣಬರುತಲಿದೆ, ತೋರವಾದ ದೀವಿಗೆಗಳು ತಮ್ಮ ಸುತ್ತಲಿರುವ ಕಾಂತಿಮಂಡಲದಲ್ಲಿ ಹೊಳವು ತಗ್ಗಿ ದುದರಿಂದ ಕಳೆ ಗುಂದಿವೆ, ಮುದ್ದು ಮುದ್ದಾಗಿ ಮಾತನಾಡುವ ನಿನ್ನ ಪಂಜರದ ಅರಗಿ ಆಯು-ನಿನ್ನ ಎಚ್ಚರಿಕೆಗಾಗಿ ಹೇಳುತಲಿರುವ ನಮ್ಮ ನುಡಿಗಳನ್ನು ಅನು ಸರಿಸಿ ತಾನೂ ನುಡಿಯುತಲಿದೆ.- ಇಂತು-ಬಾಂದೊರೆಯ ಪುಳಿನದೊಳು ಪವಳಿಸಿದ್ದ ಸುಪ್ರತೀಕವೆಂಬ ಸುರಗಜವು - ಮದವೇರಿದಂಚೆಗಳ ನಿನದ೦ಗಳಿ೦ ದಳ ರಂಗೋಂಬಂತೆ,