ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕಾ ರ ದ . w - • • ಕೂಡಲಿಕ್ಕೆ ಉಚಿತವಾದ ಪೀಠವನ್ನು ವಿದರ್ಭರಾಜನೇ ಮಾದೆಯಿಂದ ತೋರಿದನು, ಕೇಸರಿ ಕಿಶೋರವು - ಕಲ್ಲಿನ ಹಂತಗಳ ಹಾದಿಯಿಂದ ಬೆಟ್ಟದ ತುದಿಯನ್ನು ಹೇಗೋಹಾಗೆ, ಅಜಕುಮಾರನು - ಸೋಪಾನಗಳ ಸರಣಿಯಿಂದ ಮಂಚವನ್ನೇರಿದನು, ಬಗೆಬಗೆಯದೆನಿಸಿ, ಬೆಲೆಯಿಲ್ಲದ ಬಣ್ಣಗಳಿಂದೊಡಗೂಡಿರುವ ರತ್ನಗಳನ್ನು ಕೆತ್ತಿರತಕ್ಕ ಪೀಠದಲ್ಲಿ ಬಲು ಬಿಂಕದಿಂದ ಕುಳಿತ ಅಜಕುಮಾರನು - ನವಿಲ ಬೆನ್ನಿನಮೇಲೆ ಕುಳಿತಿ ರುವ ಕುಮಾರಸ್ವಾಮಿಯ ಬೆಡಗನ್ನಾಂತು, ಊಹಿಸಿ ತಿಳಿಯುವಷ್ಟು ಕಾಂತಿಯಿಂದ ಸಂಪನ್ನನಾಗಿದ್ದನು. ರವಿಯೊಬ್ಬನಾದರೂ ಕೊಳದೊಳ ಗಣ ಅಲೆಗಳೊಳಗೆಲ್ಲ ಕಂಗೊಳಿಸುವಂತೆ, ಪ್ರಭಾತಿಶಯದಿಂದ ನೋಡಲಸ' ದಳವೆನಿಸಿದ ಆ ಅಜಕುಮಾರನ ಸ್ವರೂಪವು - ರಾಜನ್ಯಕುಮಾರರ ಶ್ರೇಣಿಗಳೊಳಗೆಲ್ಲ ಸಾವಿರಾರು ಬಗೆಯಾಗಿ ಹರಡಿತು, ಅದರಿಂದ - ಮೋಡಗಳ ಸಂತಿಗಳೊಳಗೆ ವ್ಯಾಪಿಸಿರುವ ಮಿಂಚಿನಂತೆ ರಾರಾಜಿಸುತ ಅದ್ದಿ ತು. ಬೆಲೆಯಿಲ್ಲದ ಬಗೆಬಗೆಯ ಉಡಿಗೆಗಳನ್ನವಟ್ಟು, ಶ್ರೇಷ್ಠತ ರಗಳೆನಿಸಿದ ನಿಂಹಾಸನಗಳನ್ನಲಂಕರಿಸಿರುವ ಬಾಹುಜವೀರರೊಳಗೆ, ಕಲ್ಪತರುಗಳ ಮಧ್ಯದಲ್ಲಿ ಪಾರಿಜಾತ ವೃಕ್ಷದಂತೆ ರಘುನಂದನನೊಬ್ಬನೇ ತೇಜೋವಿಶೇಪದಿಂದ ವಿರಾಜಿಸುತಲಿದ್ದನು. ಆ ಸಭಾಮಂಟಪದಲ್ಲಿ ನೆರೆದಿರುವ ಪುರಜನರ ದೃಷ್ಟಿ ಸಮೂಹವು - ಕ್ಷತ್ರಿಯಕುಮಾರರನ್ನೆಲ್ಲ ತೊರೆದು, ಅಜಕುಮಾರನಲ್ಲಿಯೇ ಒಟ್ಟಿಗೆ ಇಳಿಯಿತು. ಹೂತಿರುವ ಮರಗಳನ್ನೆಲ್ಲ ಬರಿದಾಗಿ ಮಾಡಿ, ದುಂಬಿಗಳ ಹಿಂಡು - ಕಾಡಾನೆಯ ಮದಜಲಧಾರೆಯಿಂದ ತುಂಬಿರುವ ಗಲ್ಲದಲ್ಲಿ ಗುಂಪಾಗಿ ಬಂದು ಕುಳಿ ತಂತಿದ್ದಿ ತು. ಆ ಬಳಿಕ - ವಂಶಾವಳಿಗಳನ್ನೆಲ್ಲ ಚೆನ್ನಾಗಿ ಬಲ್ಲ ಹಳಬರಾದ ವಂದಿಗಳು – ಸೂರಚಂದ್ರವಂಶದರಸರ ಚರಿತ್ರೆಗಳನ್ನೆಲ್ಲ ಕ್ರಮವಾಗಿ ಹೊಗಳತೊಡಗಿದರು. ಗಮಗಮಿಸುತಲಿರುವ ಪರಿಮಳದ ಧೂಪವು - ಎಲ್ಲೆಲ್ಲಿಯೂ ಹರಡಿಕೊಂಡಿತು, ಧ್ವಜಪಟಗಳನ್ನೆಲ್ಲ ಸಾಲಾಗಿ ಎತ್ತಿ ಹಿಡಿದರು, ಮಯೂರ ನೃತ್ಯಕ್ಕೆ ನಿಮಿತ್ತವಾದ ಗುಡುಗಿನಂತೆ ದಿಗಂತಗಳಲ್ಲಿ ಮಂಗಳಶಂಖರಾವಗಳು ಮೊರೆಯಿಡುತಲಿದ್ದುವು, ಮಂಗಳವಾದ್ಯಘೋ ಪವು-ನಾಲ್ಕು ಕಡೆಗಳಲ್ಲಿಯೂ ತುಂಬಿಇದಿ ತು, ಪತಿಯನ್ನು ವರಿಸುವುದರಲ್ಲಿ mM