ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ತಿಳೆ MMv ಒಂmme ಬಲುಜಾಣೆಯಾದ ಸುನಂದೆಯ-ಮಾನಸ ಸರೋವರದೊಳಗೆ ಗಾಳಿಯ ಪಟ್ಟಿ ನಿಂದ ಹುಟ್ಟಿದ ತೆರೆಗಳಸಾಲು - ನೀರಿನಲ್ಲಿ ತೇಲುವ ಅಂಚೆಯನ್ನು, ಬಂದು ತಾವರೆಯಿಂದ ಮತ್ತೊಂದು ತಾವರೆಯಬಳಿಗೆ ಕೊಂಡೊಯ್ಯು ವಂತೆ, ರಾಜಪುತ್ರಿಯಾದ ಇಂದುಮತಿಯನ್ನು, ಬೇರೊಬ್ಬ ರಾಜಕುಮಾ ರನಬಳಿಗೆ ಕರೆದೊಯ್ದು ಇಂತೆಂದಳು - ಎಲೌ ಕೋಮಲಾಂಗಿಯೇ ! ಈತನು - ಅಂಗದೇಶದ ಅರಸು, ಒಂದುವೇಳೆ ಇಂದ್ರನಿಗೆ ಸಹಾಯ ಮಾಡಲೋಸುಗ ಸ್ವರ್ಗಕ್ಕೆ ತೆರಳಿ ದನು, ಆಗ ಈತನ ಹರೆಯದ ಸೊಬಗನ್ನು ಕಂಡ ಸುರಾಂಗನೆಯರೂ ಮನಸೋತು ಈತನನ್ನು ಬಯಸಿದರು, ಮತ್ತು - ಒಂದಾನೊಂದು ಕಾಲದಲ್ಲಿ ದಿಗ್ಗಜಗಳೆಲ್ಲ ಶಾಪಕ್ಕೊಳಗಾಗಿ, ಕಾಡಾನೆಗಳಾಗಿ ಹುಟ್ಟಿ, ನಾಡುಗಳಿಗೆಲ್ಲ ಕೇಡನ್ನೆಸಗುತ ಬಂದುವು. ಆಗ - ದೇವರ್ಪಿಗಳು - ಗಜಶಾಸ್ತ್ರವನ್ನು ಬರೆದಿಟ್ಟರು, ಈ ಅಂಗನಾಥನು - ಆ ಶಾಸ್ತ್ರವನ್ನೆಲ್ಲ ಕಲಿತು, ಆನೆಗಳ ಹಾವಳಿಯನ್ನೆಲ್ಲ ಅಡಗಿಸಿದುದಲ್ಲದೆ, ಅವುಗಳನ್ನೆಲ್ಲ ಶಿ&ಸಿ ಸ್ವಾಧೀನಕ್ಕೆ ತಂದನು, ಈಗಲೀತನು-ಭೂಮಿಯಲ್ಲಿದ್ದ ರೂ, ಸ್ಪರ್ಭೂಮಿಯ ಸೌಭಾಗ್ಯವನ್ನು ಅನುಭವಿಸುತ ಭೂದೇವೇಂದ್ರನೆನಿ ಸದಾನೆ, ಮತ್ತೊಂದುವೇಳೆ- ದಿಗ್ವಿಜಯಾರ್ಥವಾಗಿ ಹೊರಟು, ಹಗೆಯ ರಸರನೆಲ್ಲ ಸದೆಬಡಿದನು, ಅರಸತಿಯರು - ತೋರವಾದ ಮುತ್ತುಗಳಂತ ಕಂಗೊಳಿಪ ಕಣ್ಣೀರಿನ ಹನಿಗಳನ್ನು ಎದೆಗಳಮೇಲೆ ಎಡೆಬಿಡದೆ ಕರೆಯು ತಲಿದ್ದರು, ಇದರಿಂದ ಈ ವಂಗನಾಥನು - ಆ ಅಂಗನೆಯರ ಕೊರಳುಗ ಳಲ್ಲಿ ಪೋಣಿಸುವ ದಾರವಿಲ್ಲದೆಯೇ ಮುತ್ತಿನ ಹಾರಗಳನ್ನು ಸಮರ್ಥಿಸು ವಂತಿದ್ದಿತು. ಎಲೌ ಕಲ್ಯಾಣಿಯೇ ! ನಿರಿಸರಸತಿಯರಿಬ್ಬರೂ ನಿತೃವೈ ರಿಗಳಾಗಿದ್ದ ರೂ, ದಾಕ್ಷಿಣ್ಯಪರನಾದ ಈತನಲ್ಲಿ ಗೆಳೆತನದಿಂದ ನೆಲೆಗೊಂಡಿ ರುವರು. ಕಾಂತಿ, ಸತ್ಯ, ವಿ.ಯವಾಕ್ಕು ಇವುಗಳೊಡನೆ ಮೂರನೆಯವ ಳೆನಿಸಿ, ಒಡನಾಡಿಯಾಗಿರಲು ನೀನೇ ತಕ್ಕವಳು ಎಂದಳು. ತರುವಾಯಕುಮಾರಿಯು – ಆ ಅಂಗರಾಜನಲ್ಲಿದ್ದ ದೃಷ್ಟಿಯನ್ನು ಕೆಳಗೆ ಇಳಿಸಿ, ಗೆಳತಿಯಾದ ಸುನಂದೆಯನ್ನು ಮುಂದರಿ ಎಂದಳು. ಆದರೆ - ಮಂಗ ೪ಾಂಗನಾದ ಅಂಗನಾಥನು - ಕಮನೀಯನೆನಿಸದೆ ಇರಲಿಲ್ಲ. ಸುಂದರಿ ಯಾದ ಇಂದುಮತಿಯೂ ಆತನ ಯೋಗ್ಯತೆಯನ್ನು ತಿಳಿಯಲಾರದವಳಾಗಿ 10