ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ 13 ಪರರ ರೂಪವನ್ನು ನೋಡುವುದು ಹೇಗೆ ? ನಾನು ನನ್ನ ಸ್ವಂತಸ್ವರೂಪವನ್ನೇ ಯಾವಾ ಗಲೂ ನೋಡಿದವಳಲ್ಲ, ರೂಪ ! ರೂಪ ! ನನ್ನ ರೂಪ ಎಂತಹದುದು ? ಈ ಭೂಮಂಡಲ ಗಲ್ಲಿ ರಜನಿಯೆಂಬ ಹೆಸರುಳ್ಳ ಅಲ್ಪವಾದ ಒಂದು ಬಿಂದು ಹೇಗೆ ಕಂಡಿತು ? ನನ್ನನ್ನು ನೋಡಿದರೆ ಯಾರಾದರೂ ಯಾವಾಗಲಾದರೂ ಪುನಃ ನೋಡಬೇಕೆಂದು ಇಷ್ಟವುಳ್ಳವ ಕಾಗುವುದಿಲ್ಲವೆ? ಈ ಪ್ರಪಂಚದಲ್ಲಿ ನೀಚಾಶಯನಾದ ಅಲ್ಪ ಮನುಷ್ಯನೇ ಆಗಲಿ ನನಲ್ಲಿ ಸೌಂದಯ್ಯವನ್ನು ಕಂಡವವನು ಯಾರೂ ಇಲ್ಲವೇ? ನಯನಗಳಿಲ್ಲದಿದ್ದರೆ ನಾರಿಯು ಸುಂದರಿಯಾಗಳು, ನನಗೆ ನಯನಗಳಿಲ್ಲ, ಹಾಗಾದರೆ ಶಿಲ್ಪಿಯು ಕಲ್ಲನ್ನು ಕಡೆದು ಕಣ್ಣಿದ ಮೂರ್ತಿಯನ್ನು ಏತಕ್ಕೆ ಮಾಡುತ್ತಾನೆ ? ಹಾಗಾದರೆ ವಿಧಾತನು ಈ ಪಾಷಾಣದ ಮಧ್ಯದಲ್ಲಿ ಈ ಸುಖದುಃಖಗಳಿಂದೊಡಗೂಡಿದ ಪ್ರಣಯದಲ್ಲಿ ಆಶಾಪರ ವಶವಾದ ಹೃದಯವನ್ನೇತಕ್ಕೆ ಹುಗಿದಿಟ್ಟನು ? ಪಾಷಾಣಕ್ಕೆ ಉಂಟಾಗಬೇಕಾದ ದುಃಖ ವನ್ನು ಅನುಭವಿಸಿದೆನು, ಪಾಷಾಣಕ್ಕೆ ಬರಬೇಕಾದ ಸುಖವೇತಕ್ಕೆ ಹೊಂದಲಿಲ್ಲ ? ಈ ಜಗತ್ತಿನಲ್ಲಿ ಈ ತಾರತಮ್ಯವೇತಕ್ಕೆ ? ಅನಂತವಾದ ದುಪ್ರಾಸವನ್ನು ಮಾಡುವವರು ಕೂಡ ಕಣ್ಣುಗಳಿಂದ ನೋಡುತ್ತಾರೆ, ನಾನು ನೋಡುವುದಕ್ಕೆ ಜನ್ಮಾಂತರದಲ್ಲಿ ಏನು ಪಾಪವನ್ನು ಮಾಡಿದೆ ? ಇಹಸಂಸಾರದಲ್ಲಿ ವಿಧಾತನೂ ಇಲ್ಲ; ವಿಧಾನವೂ ಇಲ್ಲ; ವಾಸಪುಣ್ಯಕ್ಕೆ ದಂಡ ಪುರಸ್ಕಾರಾಳಿ , ನಾನು ಪಣವಿಡುವೆನು. ನನ್ನ ಈ ಜೀವನದಲ್ಲಿ ಅನೇಕ ವರುಷಗಳು ಕಳೆದುಹೆವೀದವು. ಇನ್ನು ಅನೇಕ ವರುಷ ಗಳು ಬರುವ ಸಂಭವವುಂಟು, ವರುಷನುಷ ಬಹು ದಿನಗಳು, ದಿನ ದಿನಕ್ಕೂ ಒಹ ದಂಡ ಳು, ರುದಂಡ ಬಹು ಮುಹೂರ್ತಗಳು, ಅವುಗಳಲ್ಲಿ ಒಂದು ಮಹೂರ್ತಕಾಲ, ಒ೦ದು ಕರೆಪ್ಪೆ ಮುಚ್ಚುವ ಹೊತ್ತು ನನ್ನ ಕಣ್ಣು ಗಳು ನೋಡಲ ರವೆ ? ಒಂದು ಮಹತಕೆಲ ಕಣ್ಣ ತೆರೆದು ನೋಡುವದಾದರೆ ಸ್ಪರ್ಶಮಯವಾದ ಈ ವಿಶ್ವಸಂಸಾರವೆನು, ನಾನೇನು, ಶಶೀಂದ್ರನು ಯಾರು ? ಎಂದು ನೋಡಿಕೊಳ್ಳುವೆನು, ನಾಲ್ಕನೆಯ ಪರಿಚ್ಛೇದ. ನಾನು ನಿತ್ಯವೂ ಹೂವನ್ನು ತೆಗೆದುಕೊಂಡು ಹೋಗುತಲಿದ್ದೆ; ಚಿಕ್ಕ ಬಾಬುವಿನ

  • ಮಾತಿನ ಶಬ್ದ ಶ್ರವಣವು ಸಿತ್ಯವೂ ಉಂಟಾಗಲಿಲ್ಲ ಒಂದೊಂದ ದಿನ ಶ್ರವಣ ವಾಗು೬ಲಿತ್ತು. ಅದನ್ನು ಕೇಳಿದ ಆಹ್ಲಾದವನ್ನು ಹೇಳಲಾರೆ. ವೆಘವು ಜಲದಿಂದ