ಐದನೆಯ ನರಿಯದ 81 MKA /* *** *** ** * Away kAy ' hr A ' 10 m
- *n #kanAA PYAARAAM
ಈ ಭವಸಂಸಾರದಲ್ಲಿ ಮತ್ಯಾವ ಕೂಲ ಕಿನಾರೆ ಸಿಕ್ಕದೆ ಗತ್ಯಂತರ ರಹಿತನಾಗಿ ಪ್ರಕೃತ ತನ್ನ ಅಕ್ಕನಾದ ಚಂಪಕೆಯ ಶೀರೆ ಸೆರಗನ್ನು ಹಿಡಿದುಕೊಂಡು ಕುಳಿತಿದ್ದನು. ಚಂಪಕೆಯು ಶಮ್ಮನನ್ನು ಸ್ವಕಾರೋದ್ದಾರಕ್ಕೊಸ್ಕರ ನಿಯಮಿಸಿದಳು. ಹೀರಲಾಲನು ಅಕ್ಕನ ಹತ್ತಿರ ಸಮಾಚಾರವನ್ನೆಲ್ಲಾ ವಿವರವಾಗಿ ತಿಳಿದುಕೊಂಡು, ರೂಪಾಯಿನ ಮಾತೇನೋ ನಿಜವಷ್ಟೆ; ಈ ಕುರುಡಿಯನ್ನು ಮದುವೆಮಾಡಿಕೊಂಡವನಿಗೆ ಆ ರೂಪಾಯಿ ಸಿಕ್ಕುತ್ತದೋ ? ಎಂದು ಕೇಳಿದನು. ಚಂಪಕೆಯು ಆ ವಿಚಾರವನ್ನು ಕುರಿತು ಸಂದೇಹವನ್ನು ಹರಿಸಿದಳು. ಹೀರಾ ಲಾಲನಿಗೆ ದುಡ್ಡಿನ ಅಗತ್ಯ ಬಹಳವಾಗಿತ್ತು. ಅವನು ಆ ಕೂಡಲೆ ನಮ್ಮ ತಂದೆಯ ಮನೆಗೆ ಬಂದು ದರ್ಶನವನ್ನು ಕೊಟ್ಟನು. ತಂದೆಯು ಮನೆಯಲ್ಲಿದ್ದನು, ನಾನು ಅಲ್ಲಿಯೇ ಇರದೆ ಪಾರ್ಶ್ವದಲ್ಲಿ ಕೊಠಡಿಯಲ್ಲಿದ್ದನು. ಅಪರಿಚಿತನಾದವನು ಬಂದು ತಂದೆಯ ಸಂಗಡ ಮಾತನಾಡುವ ಧ್ವನಿಯನ್ನು ಕೇಳಿ ಕಿವಿಗೊಟ್ಟು ಅವರವರ ಮಾತು ಕಧೆ ಯನ್ನು ಕೇಳುತ್ತಿದ್ದೆನು, ಹೀರಾಲೆ: ಲನ ಕಂಠಸ್ವರವು ಅತಿ ಕರ್ಕಶವಾಗಿ ಕೇಳು ವುದಕ್ಕೆ ಕಠೋರವಾಗಿತ್ತು, ಹಿರಾಲಾಲ-ಸವತಿಯಾಗುವುದಕ್ಕೆ ಮಗಳನ್ನು ಕೊಡುವುದೇತಕ್ಕೆ ? ತಂದೆಯು ದುಃಖಭಾವದಿಂದ, ಏನು ಮಾಡಲಿ! ಕೊಡಿದಿದ್ದರೆ ಅವಳಿಗೆ ಮದುವೆ ಯಾಗುವುದಿಲ್ಲ. ಇಷ್ಟು ವಯಸ್ಸಾದರೂ ಆಗಲಿಲ್ಲ ! ಎಂದು ಹೇಳಿದನು, ಹೀರಾಲಾಲ- ನಿಮ್ಮ ಮಗಳಿಗೆ ಮದುವೆಯಾಗುವುದಕ್ಕೆ ಯೋಚನೆ ಏತಕ್ಕೆ? ತಂದೆಯು ನಕ್ಕು ನಾನಾದರೋ ಬಡವ, ಹೂವನ್ನು ಮಾರಿ ಕಾಲಹಾಕು ತೇನೆ. ನನ್ನ ಮಗಳನ್ನು ಯಾರು ಮದುವೆಮಾಡಿ ಕೊಳ್ಳುತ್ತಾರೆ ? ಅದರಲ್ಲಿಯೂ ಅವಳು ಕಣ್ಣು ಇಲ್ಲದ ಹುಡುಗಿ, ಮತ್ತು ಮುಸ್ಸು ಕೂಡ ಹೆಚ್ಚಾಗಿಹೋಗಿದೆ ಎಂದನು. ಹೀರಾ-ವರನಿಗೆ ಅಭಾವವೇನು ? ನನಗೆ ಹೇಳಿದರೆ ನಾನೇ ಮದುವೆಮಾಡಿ ಕೊಳ್ಳುತ್ತೇನೆ, ಈಗಿನ ಕಾಲಗಲ್ಲಿ ಜನರು ವಯಸ್ಸಾದ ಹೆಣ್ಣನ್ನೇ ಅಪೇಕ್ಷಿಸುತ್ತಾರೆ. ನಾನು « ದಿ. ಲನೇರಿರ್ಯ ಟೈಂಸ್ ' ಎಂಬ ನ್ಯೂಸಪೇಪರಿಗೆ ಎಡಿಟರಾಗಿದ್ದಾಗ ಹೆಣ್ಣ ಹುಡುಗರಿಗೆ ಹೆಚ್ಚು ವಯಸ್ಸಾಗಿ ದೊಡ್ಡವರಾದ ಮೇಲೆ ವಿವಾಹವನ್ನು ಮಾಡ ಬೇಕೆಂದು ಎಷ್ಟೋ ಆರ್ಟಿಕಲಗಳನ್ನು ಬರೆದಿದ್ದೇನೆ. ಓದಿ ಆಶಾಶದ ಮೇಘವೇ ಗರ್ಜಿ ಸುವುದಕ್ಕೆ ಪಾರಂಭವಾಯಿತು. ಬಾಲ್ಯ ವಿವ! ! ಛೇ! ಹಣ್ಣು ಹುಡುಗರನ್ನು ದೊಡ್ಡವರನ್ನಾಗಿ ಮಾಡಿಯೇ ವಿವಾಹವು ವR Cಬೇಕು ; ಬನ್ನಿ! ದೇಶದ ಉನ್ನತಿ ಗೋಸ್ಕರ ನನ್ನನ್ನು Example (ಎಗ್ಯಾಂಪಲ್-ಉದಾರಣ ಸ್ವರೂಪವಾಗಿ) Set (ಏರ್ಪಾಡು) ಮಾಡು, ನಾನೇ ಈ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತೇನೆ,