ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಘಜನಿ* wwwwwwww wwwwwwoowwwwwwwwwww ತಾಯಿಗೆ ಎಲ್ಲವೂ ನಿಯಮಾಧೀನವೆಂದು ತಿಳಿಯಹೇಳಿದ್ದನು. ಮನುಷ್ಯನ ಜೀವನವು ಕೇವಲ ಆ ನಿಯಮದ ಫಲವೇನು ? ಯಾವ ನಿಯಮದಿಂದ ಪುಷ್ಪವು ಅರಳುವುದೋ ಮೇಘವು ಹಾರುವುದೋ, ಚಂದ್ರನು ಉದಯನಗುವುನೋ, ಯಾವ ನಿಯಮದಿಂದ ನೀರಿನ ಗುಳ್ಳೆಯು ತೇಲಿ, ಆಡಿ, ನಕ್ಕು, ಪುನಃ ನೀರಿಗೆ ಸೇರಿಹೋಗುವುದೋ, ಯಾವ ನಿಯಮದಿಂದ ಧೂಳಿಯು ಮೇಲಕ್ಕೆ ಏಳುವುದೋ, ತೃಣವು ಸುಡುವುದೋ, ಎಲೆಯು ಕಸದು ಬೀಳುವುದೋ ಆ ನಿಯಮದಿಂದಲೇ ಈ ಸುಖದುಃಖಮಯವಾದ ಮನುಷ್ಯ ಜೀವನವು ಕಟ್ಟಲ್ಪಟ್ಟು, ಪೂರ್ಣತೆಯನ್ನು ಹೊಂದಿ, ವಿಲೀನವಾಗುವುದೇನು ? ಯಾವ ನಿಯಮಕ್ಕೆ ಅಧೀನವಾಗಿ ಈ ನದಿಯ ಗರ್ಭದಲ್ಲಿರುವ ಕುಂಭೀರವನ್ನು ಸಿಕಾರಿ ಮಾಡುವವರು ಹುಡುಕುತ್ತಾರೋ, ಯಾವ ನಿಯಮಕ್ಕಧೀನವಾಗಿ ಈ ದ್ವೀಪದಲ್ಲಿ ಅಲ್ಪವಾದ ಕೀಟಗಳೆಲ್ಲ ಬೇರೆ ಕೀಟಗಳನ್ನು ಹುಡುಕುತ್ತ ಓಡಾಡುತ್ತವೆಯೋ, ಆ ನಿಯಮಕ್ಕೆ ಅಧೀನಳಾಗಿ ಶಚೀಂದ್ರನಿಗೋಸ್ಕರ ಪ್ರಾಣತ್ಯಾಗಮಾಡಲು ಕುಳಿತಿದ್ದೇ ನೇನು ? ಪ್ರಾಣತ್ಯಾಗವನ್ನು ಧಿಕ್ ! ಪ್ರಣಯವನ್ನು ಧಿಕ್ ! ಮನುಷ್ಯನ ಜೀವನ ವನ್ನು ಧಿಕ್ ! ಏತಕ್ಕೆ ಇದನ್ನು ಈ ಗಂಗಾಜಲದಲ್ಲಿ ಪರಿತ್ಯಾಗ ಮಾಡುವುದಿಲ್ಲ ? ಜೀವನವು ಅಸಾರವಾದುದು.-ಸುಖವಿಲ್ಲವೆಂದು ಆಸಾರವಾದುದಲ್ಲ. ಬರ ಗದಮರದಲ್ಲಿ ಒರಗದ ಹೂವೇ ಬಿಡುವುದೆಂದು ಅವನ್ನು ಅಪಾರವಾದುದೆಂದು ಹೇಳ ಲಾಗದು. ದ.8ಖಮಯವಾದ ಜೀವನದಲ್ಲಿ ದುಃಖವೆ: ಇದೆಯೆಂದು ಅದನ್ನು ಅಸಾರ ವಾದುದೆಂದು ಹೇಳಬೇಡಿ. ಆದರೆ ಅಸಾರವೆಂದು ಹೇಳುವುದೇತಕ್ಕೆ೦ದರೆ, ದುಃಖವೇ ದುಃಖದ ಪರಿಣಾಮವಾಗಿದೆ, ಅದರ ಆಚೇ ಏನೂ ಇಲ್ಲ. ನನ್ನ ಆಂತರವಾದ ಮರ್ಮಭೇದಿಕಾರಿಯಾದ ದುಃಖವನ್ನು ನಾನೊಬ್ಬಳೇ ಅನುಭವಿಸಿದೆನು. ಮತ್ಯಾರೂ ತಿಳಿಸಲ್ಪಡಲಿಲ್ಲ. ಯಾರೂ ತಿಳಿಯಲಿಲ್ಲ. ದೂಃಖವನ್ನು ಪ್ರಕಾಶಮಾಡಿ ಹೊರಪಡಿ ಸಲು ಭಾಷೆಯ ಸಾಲದಾದದ ಂದ ರೆ ಡಿಸ೮ಾರದೆ ಹಸಿದೆನು, ಕೇಳುವವರು ಇಲ್ಲವಾದುದರಿಂದ ತಿಳಸಲಾರದೆ ಹೋದೆನು. ಸಹೃದಯರಾದ ಬೆತ್ಸತು (wise men) ಇಲ್ಲದುದರಿಂದ ತಿಳಿಯ ಹೇಳಲಾರ: , ಒ:ದಿ ಬೂರಗದ ಮರ ದಿಂದ ಸಾವಿರಾರು ಬೂರಗದ ಮರಗಳು ಆಯ'ವೆ. ಆ: ನಿನ್ನ ದುಃಖದಿಂದ ಮತ್ತೆಷ್ಟು ಜನರಿಗೆ ದುಃಖವುಂಟಾಗುತ್ತದೆ ? ಪರರ ಅಂತಃಕರಣದಲ್ಲಿ ಅದು ಪ್ರವೇಶ ಮಾಡಲಾಪದು. ಆದರೆ ಅಂತಹ ಪರರಾದವರು ಭೂಮಿಯಲ್ಲಿ ಎಷ್ಟು ಜನರು ಹುಟ್ಟಿ ದಾರೆ ? ಸೃದ್ಧಿಯಲ್ಲಿ ಅಂಧಳಾದ ಪುಷ್ಪನಾರಿಯ ದುಃಖವನ್ನು ತಿಳಿದುಕೊಳ್ಳುವವರು ಯಾರಾದರೂ ಹುಟ್ಟಿದ್ದಾರೆಯೇ ? ಈ ಸಣ್ಣದಾದ ಹೃದಯದಲ್ಲಿ ಪ್ರತಿಮಾತಿನಲ್ಲಿಯೂ,