32 ರಜಸೀಳಿ •••••••v - AvvAra v1 hr 1 ** *#*#sty• ,
- Andhr\hy'
ವಾಗಿ ಪ್ರಾಣವೇ ಹೊರಗೆ ಬಂದು ಶೂನ್ಯಮಾರ್ಗಕ್ಕೆ ಹೋಗಿಳಿಸುವಹಾಗಾಗು ಇದೆ. ಆದರೆ ಅದು ಎಂತಹ ದುಃಖವೋ ಅದನ್ನು ನೀವು ತಿಳಿದುಕೊಳ್ಳಲಾರಿರಿ. ನಿಮ್ಮ ದುಃಖವನ್ನೇ ನೀವು ತಿಳಿದುಕೊಳ್ಳಲಾರದವರು ಇತರರ ದುಃಖವನ್ನು ಹೇಗೆ ತಿಳಿಯು ವಿರಿ? ಇದೇನು ಸಾಮಾನ್ಯವಾದ ದುಃಖವೇ ? ನಾನು ಕಂಡು, ತಿಳಿದು, ದೈನ್ಯಳಾಗಿ ಒತ್ತಿ ಹೇಳುತ್ತೇನೆ, ಏನೆಂದರೆ, ಜೀವನವು ಅಪಾರವಾದುದು. ಯಾರ ಜೀವನವು ಇಷ್ಟು ದುಃಖಮಯವಾದುದೋ ಅದರ ರಕ್ಷಣೆಗೋಸ್ಕರ ಇಷ್ಟು ಭಯಪಡುತಲಿ ನೇತಕ್ಕೆ ? ನಾನು ಏತಕ್ಕೆ ಇದನ್ನು ತ್ಯಾಗಮಾಡಲಾರೆನು ? ಈಗ ಈ ಕುಲಕಲನಾದಿನಿಯಾದ ಗಂಗೆಯು ತರಂಗ ವಧ್ಯದಲ್ಲಿ ನಿಂತು ಇದ್ದೇನೆ. ಇನ್ನು ಒಂದೆರಡು ಹೆಜ್ಜೆಗಳು ಮುಂಜರಿದರೆ ಸಾಯಬಲ್ಲವಳಾಗಿದ್ದೇನೆ ? ಸಾಯುವ ದಿಲ್ಲ ವೇತಕ್ಕೆ ? ಈ ಜೀವನವನ್ನು ಇಟ್ಟು ಏನಾಗಬೇಕು ? ಸಾಯುವೆನು ! ನಾನು ಏತಕ್ಕೆ ಹುಟ್ಟಿದೆ ? ಏತಕ್ಕೆ ಅಂಧಳಾದೆ ? ಹುಟ್ಟಿದರೂ ಶಚೀಂದ್ರನಿಗೆ ಯೋಗ್ಯಳಾಗಿ ಹುಟ್ಟಲಿಲ್ಲವೇತಕ್ಕೆ ? ಶಚೀಂದ್ರನಿಗೆ ಯೋಗ್ಯಳಾಗಿ ಹುಟ್ಟಿದಮೇಲೆ ಅವನನ್ನು ಪ್ರೀತಿಸಿರನೇತಕ್ಕೆ ? ಏತಕ್ಕೋಸ್ಕರ ಶಚೀಂದ್ರನನ್ನು ಭಾವಿಸಿಕೊಂಡು ಗೃಹತ್ಯಾಗವನ್ನು ಮಾ ಇದೆ ? ನಿಸ್ಸಹಾಯ ೪ ದ ಆ೦ಧಳು ಗಂಗಾನದಿಯ ಮಧ್ಯದ ದಿಬ್ಬದಲ್ಲಿ ಪ್ರಾಣ ಬಿಡಲು ಬಂದೆನೇತಕ್ಕೆ ? ಭರತದ (Tide) ಬಾಯಿಗೆ ಸಿಕ್ಕಿದ ಹುಲ್ಲು ಕಡ್ಡಿಯಹಾಗೆ, ಸಂಸಾರ ಸೋತದಲ್ಲಿ ಅತೇಕ ದುಃಖಿಗಳಿದ್ದಾರೆ; ನಾನು ಎಲ್ಲರಿ ಗಿಂತಲೂ ಹೆಚ್ಚು ದುಃಖಿಯಾಗಿದ್ದೇನೇತಕ್ಕೆ? ಇದೆಲ್ಲಾ ರ್ಯಾಲೀಲೆ? ದೇವರ ಲೀಲೆಯೆ? ಜೀವನಿಗೆ ಇಷ್ಟು ಕಷ್ಟವನ್ನು ಕೊಡುವುದು ದೇವರಿಗೇನು- ಸುಖ? ಕಷ್ಟಪಡಿಸುವದಕ್ಕೆ ಸೃಷ್ಟಿ ಮಾಡುವುದೇನು ಸುಖ ? ಮೂರ್ತಿಮತ್ತಾದ ನಿರ್ದಯತೆಗೆ ಏತಕ್ಕೆ ದೇವತೆ ಯೆಂದು ಹೇಳಬೇಕು ? ಎತಕ್ಕೆ ನಿಷ್ಟುರತೆಯ ಪೂಜೆಮಾಡಬೇಕು ? ಮನುಷ್ಯನ ಇಷ್ಟು ಭಯಾನಕವಾದ ದುಃಖವು ಯಾವಾಗಲೂ ದೇವಕೃತವಲ್ಲ. ಹಾಗಿದ್ದರೆ ದೇವರು ರಾಕ್ಷಸರಗಿಂತಲೂ ಸಹಸ್ರಪಾಲು ನಿಕೃಷ್ಟವೇ ಸರಿ, ಹಾಗಾದರೆ ನನ್ನ ಕರ್ಮ ಫಲವೇನು ? ಯಾವ ಪಾಪಕ್ಕೊಸ್ಕರ ನಾನು ಜನ್ಮಾಂಧಳು ! ಒಂದೆರಡು ಹೆಜ್ಜೆಗಳನ್ನು ಇಡುತ್ತ ಮುಂದಾಗಲಾರಂಭಿಸಿದನು. ಸಾಯಬೇ ಕೆಂದು ! ಗಂಗೆಯ ತರಂಗವು ಕಿವಿಯಲ್ಲಿ ಶಬ್ದ ಮಾಡುತಲಿತ್ತು. ಇನ್ನೂ ಸಾಯಲಿಲ್ಲ ವೆಂದು ತಿಳಿದೆನು. ನನಗೆ ಸುಶಬ್ದವನ್ನು ಕೇಳಲು ಬಹಳ ಇಷ್ಟ ! ಇಲ್ಲ. ಸಾಯುವೆನು! ಕುತ್ತಿಗೆವರೆಗೆ ನೀರು ಬಂತು ! ಬಾಯಿಗೆ ಬಂತು ! ಇನ್ನು ಸ್ವಲ್ಪ ಮಾತ್ರ ಮಗು ಮುಣುಗಿತು ! ಕಣ್ಣು ಮುಣುಗಿತು ! ನಾನೇ ಮುಣುಗಿದೆ !