ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ರಜನೀ shown ನಾನು - ಶಚೀಂದ್ರನೆಂಬ ನಮ್ಮ ಮಗನೊಬ್ಬನು ಇದ್ದಾನೆ. ನಾನು ನಿನಗೆ ಶಚೀಂದ್ರ ದಾನ ಮಾಡುತ್ತೇನೆ. ನಿನ್ನೆ ಸ್ವಾಮಿಯ ಸ್ವರೂಪವಾಗಿ ನೀನವನನ್ನು ಪರಿಗ್ರಹ ಮಾಡಬೇಕು, ನೀನು ಅವನನ್ನು ಗ್ರಹಣ ಮಾಡಿದರೇನೇ ನಾನು ನಿನ್ನ ಆಸ್ತಿಯನ್ನು ಗ್ರಹಣ ಮಾಡುವೆನು, - ರಜನಿ ಯು ಅದುವರೆಗೆ ನಿಂತಿದ್ದವಳು ಮೆಲ್ಲ ಮೆಲ್ಲಗೆ ಕೂತುಕೊಂಡು ಅಂಧ ನಯನಗಳನ್ನು ಮುಚ್ಚಿ ಕೊಂಡಳು. ಅನಂತರ ಅವಳಾಮುದಿತವಾದ ನಯನಗಳಿ೦ದ ಜಲಧಾರೆಯು ಅವಿರಳವಾಗಿ ಸುರಿಯಲಾರಂಭಿಸಿತು. ಕಣ್ಣಿನ ನೀರು ಸುರಿಯುವುದು ಇನ್ನೂ ಪೂರೈಸಲಿಲ್ಲ. ನಾನು ಈ ಆ್ಯಂತ ವಿಷಮವಾದ ವಿಪತ್ತಿನಲ್ಲಿ ಬಿದ್ದೆ, ರಜನಿಯು ಮಾತನಾಡಳು. ಸುಮ್ಮನೇ ಅಳುತ್ತಾಳೆ, ನಾಪ, ಏತಕ್ಕೆ, ರಜನಿ ! ಇಷ್ಟು ಅಳುತ್ತಿ ? ಎಂದೆನು ರಜನಿಯ ಅಳುತಳು, ಆ ದಿನ ನಾನು ಗಂಗೆಯಲ್ಲಿ ಬಿದ್ದು ಸಾಯುವುದಕ್ಕೆ ಹೋಗಿದ್ದೆ. ಮುಣುಗಿಹೋಗಿದ್ದೆ. ಜನರು ಬಂದು ಹಿಡಿದು ಎತ್ತಿದರು. ಅದು ಶಚೀಂದ್ರನಿಗೋಸ್ಕರ, ನೀನು ಹೇಳುವಿಯೇನೆಂದರೆ :-ನೀನು ಅಂಧಳು, ಕಣ್ಣು ಬರುವಹಾಗೆ ಮಾಡುತ್ತೇನೆಂದು ಹೇಳುವೆ ನನಗೆ ಕಣ್ಣು ಬೇಡ. ನನಗೆ ಶಚೀಂದ್ರ ಬೇಕು ಶಚೀಂದ್ರನನ್ನು ಹೊರತು ನನಗೆ ಈ ಪ್ರಪಂಚದಲ್ಲಿ ಮತ್ಯಾವುದೂ ಬೇಡ. ನನ್ನ ಪ್ರಾಣವು ಅವನಲ್ಲಿದೆ. ದೇವರಲ್ಲಿ ಪುಷ್ಪವು ಮಾತ್ರ ಅವನ ಚರಣದಲ್ಲಿ ಸ್ಥಾನ ಸಿಕ್ಕಿದರೆ ಸಾರ್ಥಕ, ಅಂಧಳ ದುಃಖವನ್ನು ಕೇಳುವವರು ಯಾರು ? ಎಂದಳು. ನಾನು: ರಜನಿಯ ಆ೩ರೋಕ್ತಿಯನ್ನು ಕೇಳಿ ಕಾತರಳಾಗಿ, ನಾನು ಕೇಳು ತೇನೆಂದನು. ಆಗ ರಜನಿಯು ಅಳುತಳುತ್ತ ಮನಸ್ಸು ಬಿಚ್ಚಿ ಎಲ್ಲಾ ಸಂಗತಿಯನ್ನು ವಿವರ ವಾಗಿ ಹೇಳಿದಳು. ಶಚೀಂದ್ರನ ಕಂಠಶ್ವರ, ಶಚೀಂದ್ರನ ಸ್ಪರ್ಶ, ಅಂಧಳಿಗೆ ಉಂಟಾದ ರೂಪೋನ್ಮಾದ ! ಅವಳು ಓಡಿಹೋದುದು, ಮುಣುಗಿಹೋದುದು, ಉದ್ದಾರವಾ ದುದು, ಇವುಗಳನ್ನೆಲ್ಲ ಹೇಳಿದಳು, ಅಳುತಳುತ್ತ, ಅಮ್ಮ, ಯಜಮಾನಿ | ನಿನಗೆ ಕಣ್ಣು ಇದೆ, ಕಣ್ಣುಗಳಿದ್ದರೂ ನೀನು ಇಷ್ಟು ಹೆಚ್ಚಾಗಿ ಪ್ರೀತಿಸುವೆಯಾ ? ಎಂದಳು. ನಾನು ಮನಸ್ಸಿನಲ್ಲಿ, ಅಯ್ಯೋ ! ಕುರುಡಿ ! ಪ್ರೀತಿಸುವದೆಂಬುದನ್ನು ನೀನೇನು ಬಟ್ಟೆ 1 ನೀನು ಲವಂಗೆಲತೆಗಿಂತ ಸಹಸ್ರಪಲು ಸುಖಿಯಾಗಿದ್ದೀಯೆ, ಎಂದಂದು ಕೊಂಡು, ಪ್ರಕಾಶ್ಯವಾಗಿ, ಇಲ್ಲ, ರಜನಿ! ನನ್ನ ಸ್ವಾಮಿಯು ವಯಸ್ಸಾದವರು, ನಾನು ಈ ನೂರಾರು ಕಂಡವಳಲ್ಲ. ಹಾಗಾದರೆ ನೀನು ಶಚೀಂದ್ರನನ್ನು ವಿವಾಹ ಮಾಡಿಕೊಳ್ಳುವುದು ಖಂಡಿತವಷ್ಟೆ ? ಎಂದು ಹೇಳಿದೆನು,