ಈ ಪುಟವನ್ನು ಪ್ರಕಟಿಸಲಾಗಿದೆ



ರಮಾನಂದ,

೮೧

ರಮಾ:- ( ಬೆದರಿನೋಡುತ್ತ ) ಏನು ಏನು ? ಈಗ ನಟ್ಟಿರುಳೆ ? ಹಾಗಿದ್ದರೆ ನಡೆ ಹೋಗುವ,

ಸೌಮ್ಯ:-ಪ್ರಿಯ ಮಿತ್ರನೇ ಮತ್ತೊಂದು ಮಾತು.

ರಮಾ:-ಏನು? ಹೇಳಲು ತಡೆಯೇಕೆ ?

ಸೌಮ್ಯ:-ಮತ್ತೇನೂ ಇಲ್ಲ, ನೀನು ಇಲ್ಲಿ ಮತ್ತಾರ ಜತಯಲ್ಲಾದರೂ ಮಾತನಾಡುತ್ತಿದ್ದೆಯೇನು?

ರಮಾ:- ನಾನು ಇಲ್ಲಿಗೆ ಬಂದು ಸ್ವಲ್ಪ ಹೊತ್ತಿನಲ್ಲಿಯೇ ಈ ಪಟ್ಟಣದಲ್ಲಿ ಮಧುಕರಿಯೆಂಬವಳೊಬ್ಬಳಿರುವಳೆಂದೂ, ಅವಳಿಂದ ಕಳುಹಲ್ಪಟ್ಟು ಬಂದಿರುವ ದಾಸಿಯೇ ತಾನೆಂದೂ ಹೇಳಿಕೊಂಡು ಬಂದಿದ್ದ ಸ್ತ್ರೀಯೊಬ್ಬಳು ಆತುರದಿ೦ದ ಕೂಗಿಕೊಂಡುದರ ಮೇಲೆ, ನಾನು ಅದೇನೆ೦ದು ಹೋಗಿ ಕೇಳಿದೆನು, ಅವಳದಕ್ಕೆ ಏನೇನನ್ನೂ ಹೇಳಿದಳು ನಾನವನ್ನು ಕೇಳಲಾರದೆ ತಿರಸ್ಕರಿಸಿ ಹೊರಟುಬಂದೆನು. ಏಕೆ ಕೇಳಿದೆ? ಏನಾಯ್ತು ?

ಸೌಮ್ಯ:-ಸತ್ಯಸೇನನು ಯಾವಳೋ ಹೆಂಗಸಿನೊಡನೆ ಮಾತನಾಡುತ್ತಿದ್ದನೆಂದು ಹೇಳಿದುದರಿಂದ ಹಾಗೆ ಕೇಳಿದೆನು. ಅಷ್ಟೆ, (ತೆರೆ 15 ಯಲ್ಲಿ) "ಕುಮಾರ, ರಮಾನಂದ! ರಮಾನಂದ!! ಎಲ್ಲಿರುವೆ |"

ಸೌಮ್ಯ:- (ಗಾಬರಿಯಿಂದ) ಇದೇನಿದು? ರಮಾನಂದ! ಇದೇನು? ಯುವಾನನು ಕೂಗುತ್ತ ಬರುವಂತಿದೆ.

ರಮಾನಂದ:-(ತೆರೆಯ ಕಡೆಗೆ ತಿರುಗಿ ಗಟ್ಟಿಯಾಗಿ) ಇಲ್ಲಿರುವೆನು ಇಲ್ಲಿರುವೆನು.

(ಯುವಾನನು ಬಂದು, ಮುಂದೆ ಬೆರಗಾಗಿ ಸಿಲ್ಕು ವನು.)

ರಮಾ:-( ಯುವಾನನ ಕೈಹಿಡಿದು ಬಳಿಯಲ್ಲಿ ಕುಳ್ಳಿರಿಸಿಕೊಂಡು ) ಯುವಾನ್! ಇದೇಕೆ? ಹೀಗಾಗಿರುವೆ? ಸಮಾಚಾರವೇನು?

ಯುವಾನ:- (ನಿಟ್ಟುಸಿರಿಟ್ಟು) ಭಗವಂತ ! ಕುಮಾರನನ್ನು ಕಾಪಾಡಿ, ನಮ್ಮೆಲ್ಲರನ್ನೂ ಉದ್ಧರಿಸು.