ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೮೯

 ಲ್ಪಟ್ಟ ಕಾಗದಗಳೂ ಮತ್ತು ನೀನು ನಾಟಕ ಶಾಲಾಧಿಕಾರಿಗೆ ಕೊಡಬೇಕಾಗಿದ್ದಂತೆ ಸೂಚಿಸಿ, ಸಾಲದ ತಗಾದೆಗೆಂದು ಆತನಿಂದ ಬರೆಯಲ್ಪಟ್ಟು ಬಂದ ಕಾಗದವೂ ಇವೆಲ್ಲವೂ ಗುರು ಪತ್ನಿಯ ಬಳಿಯಲ್ಲಿರಿಸಲ್ಪಟ್ಟಿದ್ದು , ಅವು ನನ್ನ ಪರಾಮರ್ಶಕ್ಕೆಂದು ಕೊಡಲ್ಪಟ್ಟುವು, ನಾನು ಅವೆಲ್ಲವನ್ನೂ ನೋಡಿ ಅವರಿಗೆ ನಂಬಿಕೆಯಾಗುವಂತೆ ನಾಲ್ಕಾರು 5 ಮಾತುಗಳನ್ನಾಡಿದುದಲ್ಲದೆ, ಇದರ ನಿಜಾಂಶವು ಇಷ್ಟರಲ್ಲಿಯೇ ಹೊರಬೀಳುವಂತೆ ಮಾಡುತ್ತೇನೆಂದೂ ಹೇಳಿ ಬಂದೆನು, ಗುರುಪತ್ನಿಯು ನಿನ್ನನ್ನು ಈಗಲೇ ತಮ್ಮ ಬಳಿಗೆ ಕರೆತಂದು ಬಿಡಬೇಕೆಂದೂ, ತಾವೇ ನಿನ್ನನ್ನು ಮೊದಲು ಕೆಲವು ವಿಚಾರವನ್ನು ಕೇಳಬೇಕೆಂದೂ ಹೇಳಿದುದಲ್ಲದೆ, ನಿನ್ನ ಮೇಲೆ ಬಿದ್ದಿರುವ ಈ ಅಪವಾದದ ಹೊರೆಗಾಗಿ ಪರಿತಪಿಸಿದರು. ಗುರುಗಳಂತೂ ಅತ್ಯಂತ ವ್ಯಾಕುಲದಿಂದ ಅನ್ನ ನಿದ್ರೆಗಳನ್ನೂ ಒಲ್ಲದೆ, ನಿಮ್ಮ ತಂದೆಯ ಬಳಿಯಲ್ಲಿ ತಾವು ಕೊಟ್ಟ ಮತು ಕೆಟ್ಟು ಹೋಯಿತೆಂದು ಮರುಗುತ್ತಿರುವರಂತೆ! ಗುರು ಪತ್ನಿಯು ಪತಿಯ ವ್ಯಾಕುಲಕ್ಕೂ ನಿನ್ನ ವಿಷಯಕವಾದ ಅಪವಾದಕ್ಕೂ ಬಹುವಾಗಿ ಚಿಂತಿಸುತ್ತಿರುವರು, ದೇವರು ನಿನಗೆ ಸಹಾಯಕನಾಗಿದ್ದು 15 ರಕ್ಷಿಸಲಿ, ನೀನು ಈಗಲೇ ಹೋಗಿ ಗುರುಪತ್ನಿಯನ್ನು ಕಾಣಿಸಿಕೊಳ್ಳಬೇಕು; ಮರೆಯಬೇಡ.
ರಮಾನಂದ;-ಆಗಲಿ; ಹೋಗುವೆನು, ನೀನೆಲ್ಲಿಗೆ ಹೋಗುವೆ?
ಸುಮುಖ:- ನಾನು ನಮ್ಮ ತಂದೆ (ಕ್ಷೇಮದರ್ಶಿ) ಯ ಬಳಿಗೆ | ಹೋಗಬೇಕಾಗಿದೆ. ಭದ್ರ! ರಾತ್ರಿಯಲ್ಲಿ ಹೊರಗೆ ಹೆಚ್ಚು ಹೊತ್ತು 20 ನಿಂತಿರಬೇಡ, ಬೇಗ ಹೊರಡು.

(ಎಂದು ಹೊರಟುಹೋಗುವನು.)

ಯುವಾನ;- ರಮಾನಂದ | ಗುರುಪತ್ನಿ ಯವರಲ್ಲಿಗೆ ನಾವೂ ಬರಬೇಕೇ ?
ರಮಾ: ಸುಮುಖನು ಮತ್ತೇನನ್ನೂ ಹೇಳಲಿಲ್ಲ, ನೀವೂ ಜತೆ 25