ವಾಸದಲ್ಲಿ ಸೇರಿ, ದುರ್ವಿಷಯರೋಗಕ್ಕೆ ಪಕ್ಕಾಗಿ, ತೃಷ್ಣಾ ಲೋಭಗಳಿ೦ದ ಉನ್ಮತ್ತನಂತಾಗಿ, ಮಾನ, ಧನ ಕೀರ್ತಿಗಳೆಲ್ಲ ಶತ್ರುವಾಗಿ, ತನ್ನ ಇಹಪರ ಸೌಖ್ಯ, ಸಂಪತ್ತಿಗೂ ಸಾಧನರೂಪವಾದ ಈ ಬಾಲ್ಯ ತಾರುಣ್ಯಗಳನ್ನು ಈ ಗುರುಕುಲವಾಸದ ವಿದ್ಯಾಭ್ಯಾಸಗಳಿಂದ ವಂಚಿಸಿ ವ್ಯರ್ಥವೆನ್ನಿಸಿಕೊಳ್ಳುತ್ತಿದ್ದನೇ ? ಇಲ್ಲ; ಹೀಗೆಂದಿಗೂ ಮಾಡುತ್ತಿರಲಿಲ್ಲ, ಅಲ್ಲಿ ಮಾವನನ್ನು ವಂಚಿಸಿ ಬಂದನು. ಇಲ್ಲಿ ತಾಯಿ ತಂದೆಗಳನ್ನು ವಂಚಿಸಿದನು, ಸಾಲದುದಕ್ಕೆ ನಿಮ್ಮನ್ನೂ ವಂಚಿಸಿದನು, ಕಡೆಗೆ, ಇವೆಲ್ಲಕ್ಕೂ ಅಡ್ಡಿಯಾಗಿರುವ ಕುಮಾರನನ್ನು ವಧಿಸಿ ಬಿಟ್ಟರೆ ನಿರಾತಂಕವಾಗಿ ಸುಖಿಸಬಹುದೆಂದು ಭಾವಿಸಿ, ಇಷ್ಟು ಮಾಯಾ ಜಾಲಗಳನ್ನೂ ಒಡ್ಡಿದ್ದನು, ಎಷ್ಟಾದರೇನು ? ಇವರಿಗೆ ದೈವ ವಿಲಾಸದಿಂದ ಎಲ್ಲವೂ ಪ್ರತಿಕೂಲವೇ ಆದವು. ನಾಟಕ ಸಂಘಾಧ್ಯಕ್ಷನು ಎಚ್ಚರಿಸಲ್ಪಟ್ಟನು, ಚಂಡಾಲಾಧಿಪತಿಯು ರಮಾನ೦ದನ ಸಕೃತ್ಸಹವಾಸದಿಂದ ಪ್ರಜ್ಞಾವಂತನಾದನು, ವಿಷಮಯುರೂಪಿಣಿಯಾದ ಮಧುಕರಿಯು ತನ್ನ ಅಕಾರ್ಯಕ್ಕಾಗಿ ರಾಜಾಜ್ಞೆಗೆ ಬದ್ಧಳಾಗತಕ್ಕವಳೆಂದು ಬಂಧನದಲ್ಲಿಡಲ್ಪಟ್ಟಳು. ಅವರ ಆರ್ಜಿತವಿತ್ತವೆಲ್ಲವೂ ರಾಜ ಭಂಡಾರವನ್ನು ಸೇರಿತು. ಈಗಲೀಗ ರಮಾನಂದನ ಕೀರ್ತಿ ಚಂದ್ರಿಕೆಯು ದಿಗಂತವಿಶ್ರಾಂತವಾಗಿ ಪ್ರಕಾಶಿಸುತ್ತಿರುವುದು.
ಇಷ್ಟಾದರೂ ಈ ಧೂರ್ತನ ದೆಸೆಯಿಂದ ಆ-ನಮ್ಮ ಶ್ರೀಮಂತನ ಮತ್ತು ಆತನ ಪತ್ನಿಯ ಅಂತಃಕರಣವು ಶೋಕಾಗ್ನಿ ಸಂತಪ್ತವಾಗುತ್ತಿರುವುದು .ಇನ್ನು ಇವನಿಗೆ ಸದ್ಬುದ್ಧಿಯುಂಟಾಗುವುದು ಹೇಗೆ? ಇದೊಂದು ಮಾತ್ರ. ಚಿಂತೆಯಾಗಿದೆ
.
ಉಪಾಧ್ಯಾಯ:- (ಕ್ಷೇಮದರ್ಶಿಯ ಕೈಗಳನ್ನು ಹಿಡಿದು ಆನಂದಬಾಷ್ಪ ವನ್ನು ಸುರಿಸುತ್ತ) ಸುಬ್ರಾಹ್ಮಣ! ನಿನ್ನ 'ಕ್ಷೇಮದರ್ಶಿ' ನಾಮವು ಈಗಲೀಗ ನಾರ್ಥಕವಾಯಿತು, ನಿನ್ನನ್ನು ಸಚಿವನನ್ನಾಗಿ ನಿಯಮಿಸಿಕೊಂಡ ನಮ್ಮ ಶ್ರೀಮಂತನ ಉದ್ದೇಶವು ಈಗಲೀಗ ಸಾಫಲ್ಯ ಹೊಂ
ಪುಟ:ರಮಾನಂದ.djvu/೧೩೨
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೧೩