ಈ ಪುಟವನ್ನು ಪ್ರಕಟಿಸಲಾಗಿದೆ



೧೨೨
ಸತೀಹಿತೈಷಿಣೀ

ನನ್ನನ್ನು ಧನ್ಯನೆನ್ನಿಸುವಂತೆಯ ಅನುಗ್ರಹಿಸಬೇಕು. ನಮ್ಮ ದೇಶ ಬಾಂಧವರು ಅಸೂಯೆ, ಆಲಸ್ಯ, ಉದಾಸೀನ, ಮೋಸ, ವಿಷಯಲಾಲಸೆಗಳೇ ಮೊದಲಾದ ದುಷ್ಟರೋಗಗಳ ಬಾಧೆಗೆ ಒಳಗಾಗದೆ, ಸತ್ಯಾಚಾರನಿಷ್ಠತೆಯಿಂದ ಆರೋಗದೃಢಗಾತ್ರರಾಗಿ ಚಿರಸುಖಿಗಳಾಗಿರುವಂತೆ ಅನುಗ್ರಹಿಸಬೇಕೆಂದೂ ಪ್ರಾರ್ಥಿಸುವೆನು.

ವಿದ್ಯಾ:- ಪರಮಾತ್ಮನೇ ಅನುಗ್ರಹಿಸುವನು. ಆತನೇ ಸಕಲ ಚರಾಚರಾತ್ಮಕ ಪ್ರಪಂಚಕ್ಕೂ ಸ್ಪಿತಿಕರ್ತನಾದ ಜಗತ್ಪಿತನಾಗಿರುವನು. ಆತನ ಕೃಪಾಕಟಾಕ್ಷವೇ ಜಗನ್ಮಾತೆಯಾಗಿ ನಮ್ಮೆಲ್ಲರನ್ನೂ ನಿರಂತರವೂ ಸಲಹುತ್ತಿರುವುದು. ಆತನ ಗುಣಕಥನವೇ ನಮಗೆ ಸಮಸ್ತ ಕಲ್ಯಾಣಗಳಿಗೂ ಆಧಾರವು, ಎಲ್ಲಿ ಆ ಪರಮಾತ್ಮನನ್ನು ಕುರಿತು ಮಂಗಳವನ್ನು ಪಾಡುವ.

( ಎಲ್ಲರೂ ಬದ್ಧಾಂಜಲಿಪುಟರಾಗಿ ನಿಂತು ಮೇಲೆ ನೋಡಿ ಮಂಗಳವನ್ನು ಹಾಡುವರು )


ಮಂ ಗ ಳ.

ರಾಗ—


ಜಯಮಂಗಳಂ ಶ್ರೀ ರಘುಕುಲಾಬ್ಧಚಂದ್ರ-ಭವತುತೇ ಶುಭ ॥ಪ॥
ಕ್ಷೀರಶರಧಿಶಯನ । ಸುರುಕುಲ ಶರಣ । ಕರಿವರಗಮನ । ಮುರಹರ ॥
ಸುರವೈರಿಭಯಂಕರಮಾವರ (ಶ್ರೀ ಸರಸಿಜಾಕ್ಷ-ಸಾಧುಪಕ್ಷ-ದುರುಳ ಶೀಕ್ಷಶ್ರೀಕಟಾಕ್ಷ ॥ ಜಯ-ಮಂಗಳಂ ಶ್ರೀ ॥
ಭಾರ್ಗವ ಮದಹರಣ ಭವನುತ ಚರಣ । ಭವಿಜಾರಮಣ । ಭಯಹರ ॥
ಪವನಾತ್ಮಜ ಸಂಸೇವಿತಪದ (ಶ್ರೀ) ರವಿಕುಲಾನ್ವಯಲಲಾಮ-ಕವಿಜನಾಳಿ ಪೂರ್ಣಕಾಮ ॥ ಶುಭಮಂಗಳಂ ಶ್ರೀ ॥
ದಾಸಹೃದಯನಿವಾಸ ದಶಶಿರಧ್ವಂಸ-ಶಶಿನಿಭಹಾಸ । ಶುಭಕರ ॥
ಪಶುಪತಿಕಾರ್ಮುಕ ಭಂಜನ (ಶ್ರೀ) ವಸುಮತೀಶಕುಲವಿಭೂಷ.ಶೇಷಶೈಲಶಿಖರವಾಸ । ಜಯಮಂಗಳಂ ಶ್ರೀ ॥