ಈ ಪುಟವನ್ನು ಪ್ರಕಟಿಸಲಾಗಿದೆ

ಪುಸ್ತಕಗಳು ಅತಿತ್ವರೆಯಾಗಿ ಬೇಕಾಗಿರುವದರಿಂದಲೂ ಶಾಲಾ ಪುಸ್ತಕವಾಗಿ ಏರ್ಪಟ್ಟಿರುವದರಿಂದಲೂ ಯಾವ ಬದಲಾವಣೆಗಳನ್ನೂ ಮಾಡಲಾಗಲಿಲ್ಲ. ಇದರಲ್ಲಿ ಕೊಡದೆ ಬಿಟ್ಟಿರುವ ಕೆಲವು ಭಾಗಗಳೊಡನೆ ತೃತೀಯ ಮುದ್ರಣವು ಭಗವದನುಗ್ರಹದಿಂದ ಜಾಗ್ರತೆಯಾಗಿಯೇ ಆಗುವದೆಂದು ನಂಬಿರುವೆವು.

ನಮ್ಮ ನಿವೇದನದಂತೆ ಪ್ರೌಢ ಶಿಕ್ಷಣದ ಅರ್ಹತೆಯನ್ನು ಹೊ೦ದಬೇಕಾದ ವಿದ್ಯಾರ್ಥಿಗಳ ಅಭ್ಯಾಸಕ್ಕೆಂದೇ ಈ ಪುಸ್ತಕವನ್ನು ಪಠ್ಯ ಪುಸ್ತಕವಾಗಿರಿಸಿದ ನಮ್ಮ ಮೈಸೂರು ವಿದ್ಯಾಂಗದ ಅಧ್ಯಕ್ಷರಿಗೂ, ಪಠ್ಯಪುಸ್ತಕಗಳ ಪರೀಕ್ಷಾಕರ್ತರಿಗೂ, ಈ ಕಾರ್ಯದಲ್ಲಿ ನಮಗೆ ಅತ್ಯಂತ ಸಹಕಾರಿಗಳಾಗಿರುವ ಸುಹೃದರಿಗೂ ಈ ಮೂಲಕ ನಮ್ಮ ಕೃತಜ್ಞಾಪೂರ್ವಕ ವಂದನೆಗಳನ್ನರ್ಪಿಸುವದಲ್ಲದೆ, ಭಗವತ್ಸನ್ನಿಧಿಯಲ್ಲಿ ಅವರೆಲ್ಲರ ನಿರಂತರ ಶ್ರೇಯ: ಪ್ರಾರ್ಥನೆಯನ್ನೂ ಮಾಡುತ್ತಿರುವೆವು.

ಮಾತೃ ಮಂದಿರ
ನಂಜನಗೂಡು ಇತಿ ದೇಶಭಗಿನಿ
ಮಾಘ ಬಹುಳ ಸಪ್ತಮಿ ಹಿತ್ಯಷಿಣೀ
೧೨-೨-೧೯೧೭,