ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಸತೀಹಿತೈಷಿಣೀ,

 Invalid template invocation→ Invalid template invocation→ಶ್ರೀಮಂತ:- ಬಾಲ್ಯಶಿಕ್ಷಣವು ಎ೦ದರೆ-ಕುಮಾರನ ೭-೮ ವರ್ಷಗಳವರೆಗೆ ತಾಯಿಯ ಸುಶಿಕ್ಷಣೆಯೊಂದೇ ನಡೆಯುತ್ತಿದ್ದು, ಅಲ್ಲಿಂದೀಚೆಗೆ ನಮ್ಮ ಕ್ಷೇಮದರ್ಶಿಯ ಶಿಕ್ಷಣೆಯೂ, ನಮ್ಮಿಬ್ಬರ ವಿಚಾರಣೆಯೂ ನಡೆದಿರುತ್ತವೆ.

ವಿದ್ಯಾ :- ಹಾಗಿದ್ದರೆಯೇ ಮಕ್ಕಳು ಮಂದಿಗಳಾಗುವರು. ಇಲ್ಲವಾದರೆ, ಅವರ ಮೂರ್ಖರೋಗಕ್ಕೆ ಮದ್ದೇ ಇಲ್ಲವಾಗುವದು.
ಶ್ರೀಮಂತ:-(ನಿಟ್ಟುಸಿರಿಟ್ಟು) ನನ್ನ ಜೇಷ್ಠ ಪುತ್ರನು ಈ ಬಗೆಯ ಶಿಕ್ಷಣೆಗೆ ಒಳಪಡದಿದ್ದುದರಿಂದಲೇ ಅವಿಧೇಯನಾಗಿ ಕೆಡುತ್ತಿರುವುದು.
ವಿದ್ಯಾ:- ಅದು ಅವನ ತಪ್ಪೇನೂ ಅಲ್ಲ, ಮಕ್ಕಳ ದುರ್ವ್ಯತಿಗೆ ತಾಯ್ತಂದೆಗಳ ಅಥವಾ ಇತರ ಮುಖ್ಯ ಪೋಷಕರ ಅತಿಯಾದ ಲಾಲನೆ, ಅವಿಚಾರಗಳೇ ಕಾರಣಗಳು, ಇದಕ್ಕಾಗಿಯೇ “ ಸುತ ಕೆಡಗು, ಲಾಲನೆಗಳಲಿ " ಎಂಬ ರೂಢಿವಚನವಿರುವುದು.
ಶ್ರೀಮಂತ:- ನಿಜ! ಆಗ ನಮ್ಮ ಅಭಿಮಾನದಿಂದ ಬೆಳೆಯಿಸಿದ ಫಲವು, ಈಗ ಅನುಭವಿಸುವುದಕ್ಕೆ ಕಷ್ಟವಾಗಿದೆ, ಏನು ಮಾಡುವ? ಅವನನ್ನೂ ಇಲ್ಲಿಗೆ ಕರೆಯಿಸಿಕೊಳ್ಳಬೇಕೆಂದು ಯೋಚಿಸಿದ್ದೇನೆ.
ವಿದ್ಯಾ :- ಆಗಲಿ, ಸುಕುಮಾರ ರಮಾನಂದನನ್ನು ಬರಮಾಡ ಬಹುದಷ್ಟೆ!
(ಶ್ರೀಮಂತ. ಕರಣಿಕನ ಮುಖವನ್ನು ನೋಡುವನು, ಕರಣಿಕನು ಎದ್ದು ಹೋಗಿ, ಮತ್ತೆ ಕುಮಾರನೊಡನೆ ಪ್ರವೇಶಿಸುವನು. ) ರಮಾನಂದ:- (ಮುಂದೆ ಬಂದು ಶ್ರೀಮಂತನ ಬಳಿಯಲ್ಲಿ ನಿಂದು... ವಿನೀತನಾಗಿ ) ಪೂಜ್ಯರಿಗೆ ವಂದನೆ! ಅಪ್ಪಣೆಯೇನು ?
ಶ್ರೀಮಂತ:- (ಸಂಭ್ರಮದಿಂದ ಮಗನ ಕೈಹಿಡಿದು ): ಮಗುವೆ ! ಕುಲಕ್ಕೆ ರಂಜನನೇ ಕುಮಾರನು ' ಎಂದು ಬಲ್ಲ ವರಾಡುವರು. ವಂಶ ವರ್ಧನನಾದ ಸುಪುತ್ರನನ್ನಿಸಬೇಕಾದರೆ, ಆತನಲ್ಲಿ ಪ್ರಜ್ಞೆಯು ಚೆನ್ನಾಗಿರಬೇಕು, ಅದೂ ವಿದ್ಯಾರ್ಜನೆಯಿಂದಲೇ ದೊರೆಯತಕ್ಕದು, ವಿದ್ಯೆ