ಈ ಪುಟವನ್ನು ಪ್ರಕಟಿಸಲಾಗಿದೆ
೧೬
ಸತೀಹಿತಷಿಣೀ.

ನೀನೇ ವಿದ್ಯಾಧೀಶ್ವರಿಯ ಕೃಪಾಪಾತ್ರನಾದವನು. ಮೆಚ್ಚಿದೆ! ನಿನ್ನ ತಂದೆಯ ಹಿತವಾದವನ್ನು ಮರೆಯದಿರು.

ರಮಾನಂದ:- ( ಭ್ರಾಂತನಂತೆ ನೋಡುತ್ತ,) 'ಆರ್ಯರೆ! ವಿದ್ಯಾ ಸ್ವರೂಪ-ಸ್ವಭಾವಗಳನ್ನು ಸ್ವಲ್ಪ ಮಾತ್ರವೂ ತಿಳಿಯಲಾರದಿರುವ ನನಗೆ ಇಷ್ಟರ ಹೊಗಳಿಕೆಯೇಕೆ!

ವಿದ್ಯಾ:- (ಸಂತೋಷದಿಂದ) ಸುಕುಮಾರ ಇದೇ-ಈ ವಿನಯ ಗುಣವೇ ನಿನಗೆ ಭೂಷಣವಾಗಿರಬೇಕು, ನಿಜ, ಈ ವಿನಯದಿಂದಲೇ ನೀವು ಅರ್ಥ ಸಿದ್ಧಿ ಹೊಂದಬೇಕು, ನಿಮ್ಮಲ್ಲಿ ನೂತನಶಕ್ತಿಯುತ್ಪನ್ನವಾಗುವಂತೆ ಪ್ರೋತ್ಸಾಹಿಸುವದೇ ನಮ್ಮ ಗುಣವಾಗಿರಬೇಕು, ಅದಿರಲಿ; ವಿದ್ಯಾ ಪ್ರಭಾವವನ್ನು ಕೇಳಿದೆಯಲ್ಲವೆ? ಹಾಗಾದರೆ ಕೇಳು

“ಮುರಿದು ನರಾಧಿಪಂಗೆ ಕೊಳಬಾರದು,.-ಕಿಚ್ಚಿನೊಳೆಯ್ಲಿ ಬೇಯದಿ।
ಇರೆ ಮಗುಟ್ಟುತ್ತರೋತ್ತರದೆ ಪೆರ್ಚುವುದಕ್ಕರ ವಿದ್ಯೆ ನೀರೊಳುಂ ॥ ನೆರೆಯದು ಗಾಳಿಯಿಂಕಿಡದು ತಸ್ಕರಭಾಧೆಗಸಾಧ್ಯ ನಿಂತಿದಂ ।
ಮರೆಯದೆ ನಿಚ್ಚಮೋದುವುದು, ಓದಲಿಹಕ್ಕೆ ಪರಕ್ಕೆ ಸಾಧನಂ ॥”(ಪ.ಸಾ.)

ಇಂತಹ ಸುಖಾಧಾರವಾದ ವಸ್ತುವನ್ನು ಪಡೆದು, ಆತ್ಮಾನಂದ ಸಾಮ್ರಾಜ್ಯದಲ್ಲಿ ನಲಿದಾಡಬೇಕೆಂಬುದು ಪ್ರತಿಯೊಬ್ಬರಿಗೂ ಇರಬೇಕು. ಈ ಅಭಿಲಾಷೆಯಿಲ್ಲದೆ, ಬರಿಯ ಊಟ ನಿದ್ರೆಗಳಲ್ಲಿಯೇ ಬೆರೆದಿರುವವರಾರೋ, ಅವರನ್ನು ಯಾರೂ ಮನುಷ್ಯರೆಂದು ಹೇಳಬಾರದು. ಏಕೆಂದರೆ- "ವಿದ್ಯಾವಿಹೀನಃ ಪಶುಃ " ಎಂದಿರುವುದು.

ರಮಾ:- ಪೂಜ್ಯರೆ ಗುರುಜನರಲ್ಲಿ ನಾನು ಮತ್ತೆ ಮತ್ತೆಯ ಕೇಳತಕ್ಕುದೇನು? ನನ್ನ ಅಭ್ಯುದಯಕ್ಕೆ ತಾವುಗಳೇ ಕಾರಣರಾಗಿ ರುವಿರಲ್ಲವೆ!

ದ್ವಾರಪಾಲಕ:- (ಓಡಿಬಂದು) ಪ್ರಭುಗಳಿಗೆ ಶುಭವರ್ತಮಾ ನವ, ರವಿವರ್ಮ ಕುಮಾರರು ಈಗಲೇ ಬರುತ್ತಿರುವರು.

ಶ್ರೀಮಂತ:- (ಚಕಿತನಾಗಿ) ಹಾಗೆಂದರೇನು? ನೆನೆದಂತೆ ಬಂ