ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ 98 ಸಹಾಯಕನಾಗಿರಲಿ ! ರವಿ:-(ತಾಯಿಯ ಮುಖವನ್ನು ನೋಡಿ ತಲೆದೂಗುತ್ತ) ಅಮ್ಮ! ನಿಮ್ಮ ಮನಸ್ಸಿನಲ್ಲಿ ಹೀಗಿರುವುದು ನಿಜವಾದರೆ, ಅದು ಫಲಕಾರಿಯೇ ಆಗು ವುದರಲ್ಲಿ ಏನೂ ಸಂಶಯವಿಲ್ಲ. ಆದರೆ ನೋಡಿರಿ! ನಾನು ಇಲ್ಲಿಗೆ ನಿಮ್ಮಿಂದ ಕರೆಯಿಸಲ್ಪಡದೆಯೇ ಬಂದೆನೆಂಬ ಆಗ್ರಹವು, ಅಪ್ಪನಿಗೆ 5 ಉಂಟಾಗಿರಬಹುದು. ಆದರೆ ನಾನೇನು ಮಾಡಲಿ? ನನಗೆ ಅಲ್ಲಿ ರ ಲಾಗಲಿಲ್ಲ. ಸೋದರಮಾವನು ನಮ್ಮಲ್ಲಿ ಅಭಿಮಾನಿಯಾಗಿದ್ದರೆ, ಆತನ ಪತ್ನಿಪರಿವಾರದವರೂ ನಮ್ಮಲ್ಲಿ ಅಭಿಮಾನಿಗಳಾಗಿರುವರೆಂದು ಹೇಗೆ ನಂಬಬಹುದು? ನೀನೇ ಯೋಚಿಸಬಾರದೇ? ನಿಮ್ಮನ್ನು ಬಿಟ್ಟು, ಪರಸ್ಥಳದಲ್ಲಿ -ಪರಾಧೀನದಲ್ಲಿ ನರಳಬೇಕಾಯಿತೆಂಬ ಕೊರತೆಯ, 10 ಅವರಿವರಾಡುವ ಅಪವಾದಗಳಿಂದ ಅಂತಸ್ತಾಪ ಹೊ೦ದಿ ಕೃಶರಾಗು ವುದೂ ಇವೆರಡೇ ಫಲವಲ್ಲ ದೆ, ಪರಸ್ಥಳದಲ್ಲಿದ್ದ ನನಗೆ ಮತ್ತಾವ ಲಾಭವುಂಟಾಯಿತು? ಸ್ವಾಭಿಮಾನಿಗಳಿಗೆ ಪರಾಧೀನಕ್ಕೆ ಹೆಚ್ಚಾದ ನರಕಾನುಭವವಿರುವುದೇ-ಹೇಳಲಾರಿರೇನಮ್ಮ? ವಸು:-ನೀನು ಹೇಳುವುದೆಲ್ಲವೂ ನಿಜವೇ! ಆದರೂ ಮೊದ 15 ಲಿಂದಲೂ ಅತಿಯಾದ ಲಾಲನೆಯಿಂದ ಬೆಳಯಿಸಿದಕಾರಣ, ನಮ್ಮಲ್ಲಿ ಹೆಚ್ಚಿನ ಸಲಿಗೆಯುಂಟಾಗಿ, ವ್ಯಾಸಂಗದಲ್ಲಿ ಅಭಿರುಚಿಯು ಕಡಿಮೆ ಇಯಾಗುತ್ತಿದ್ದುದರಿಂದ ನಾಲ್ಕಾರು ತಿಂಗಳ ಮಟ್ಟಿಗಾದರೂ ಬೇರೆಯಾಗಿ ರಿಸಿ, ಅದರಿಂದ ನಿನ್ನ ಮನಸ್ಸಿನಲ್ಲಿ ವಿಚಾರಶಕ್ತಿ, ಅನುವರ್ತನ ಗುಣ ಗಳನ್ನುಂಟುಮಾಡುವ ಕಷ್ಟ ಸಹಿಷ್ಣುತೆಯು, ಅದಕ್ಕೆ ತಕ್ಕ ಧೈರ 20 ಸ್ಮರಗಳೂ ನಿನಗೆ ಲಭಿಸುವಂತೆ ಮಾಡಬೇಕೆಂಬುದೇ ನಮ್ಮ ಉದ್ದೇಶವಾಗಿತ್ತಲ್ಲದೆ ಬೇರಿಲ್ಲ. ಅದು ಹಾಗಿರಲಿ; ಮಹಾಮಹೋ ಪಾಧ್ಯಾಯರು ಬಂದಿರುವರೆಂದು ಕೇಳಿದೆನು; ನಿಜವೆ? ರವಿ:-ಬಂದಿರುವುದೂ ನಿಜ; ಅವರಲ್ಲಿ ವಿದ್ಯಾಭ್ಯಾಸ ಮಾಡಲು ನಮ್ಮಿಬ್ಬರನ್ನೂ ಒಪ್ಪಿಸಿದುದೂ ನಿಜ; ಅಲ್ಲದೆ, ಇಷ್ಟರಲ್ಲಿ ಯೇ ಅವರ 25