ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೩೧

ವಸುಮತಿ:- ಆರ ಪುತ್ರ! ಮಧ್ಯಾಹ್ನ ಕಾಲವು ಸಮಾಹಿತವಾಗಿದೆಯೆಂದು ಸೂಚಿಸುವ ಭೇರೀತಾಡನವಿದೇ ಕೇಳುತ್ತಿರುವದು. ಸುಕುಮಾರರು ಗುರುಕುಲವಾಸಕ್ಕಾಗಿ ತೆರಳುವವರಾಗಿರುವರು. ಪರಮಕಲ್ಯಾಣಗುಣಸ್ವರೂಪರಾಗಿ ಸಾಕ್ಷಾತ್ಕರಿಸಿರುವ ಈ ಮಹನೀಯರನ್ನು ಈ ವೇಳೆಯಲ್ಲಿ ಹಾಗೆಯೇ ಬೀಳ್ಕೊಡುವುದು ಸರಿಯಾಗಿ ಕಾಣುವುದಿಲ್ಲ. ಶಿಷ್ಯರೊಡನೆ ಗುರುವರ್ಯರೂ ಆಹ್ನಿ ಕಕ್ರಿಯೆಗಳನ್ನು ನೆರೆವೇರಿಸಿ, ಭಗವದಾರಾಧನೆಯನ್ನು ಯಧಾವಿಧಿಯಾಗಿ ನಡೆಯಿಸಿ, ನಮ್ಮ ಸತ್ಕಾರವನ್ನೂ ಸ್ವೀಕರಿಸಿ, ಆ ಬಳಿಕ ಪ್ರಯಾಣವನ್ನು ಬೆಳೆಯಿಸ ಬಹುದೆಂಬುದು ನನ್ನ ಪ್ರಾರ್ಥನೆಯಾಗಿದೆ.
ಶ್ರೀಮಂತ:- (ವಿದ್ಯಾವಾಗೀಶನ ಕಡೆಗೆ ತಿರುಗಿ) ದೇವಿಯ ಪ್ರಾರ್ಥನೆಯನ್ನು ಅಂಗೀಕರಿಸಬೇಕೆಂದು ಕೋರುವೆನು.
ವಿದ್ಯಾ :- (ಸಂತೋಷದಿಂದ) ಹಾಗೆಯೇ ಆಗಲಿ, ನಡೆಯಿರಿ; ಎಲ್ಲರೂ ಒಟ್ಟಾಗಿ ದೇವರ ಪ್ರಾರ್ಧನೆಯನ್ನು ನಡೆಯಿಸುವ.

(ಎಲ್ಲರೂ ತೆರಳುವರು.)

ಭಗವತ್‌ ಪ್ರಾರ್ಥನೆ.

ರಾಗ ( ಸಾಕೇಳೀದೂರು, ಛೀಕೆಲ )

ಸಾಕೇತಾಧಿಸ-ಶ್ರೀಕರರೂಪ-ಜಿತಕೊಪ-ಸತ್ವ ಸ್ವರೂಪ ||ಪ||

ಕರಧೃತಜಾಪ-ಖಂಡಿತತಾಪ |

ಕವಿಜನಾಲಾಪ-ಫಾಹಿಪರಂತಪ ||-ಸಾಕೇತಾ ||೧||

ಅರಿಜನ ಭೀಕರ-ಕರಿವರ ಶ್ರೀಧರ |

ವರದಾಭಯಕರ_ಪರಮ ಕೃಪಾಕರ ||-ಸಾಕೇತಾ ||೨||

ಇನಕುಲ ಮಂಡನ- ವನರುಹಲೋಚನ |

ಭವಬಂಧ ಮೋಚನ- ಭಕ್ತಾರ್ತಿ ಭಂಜನ |-ಸಾಕೇತ ||೩||

ಕ್ರೀನಾಥರಾಘವ- ಸತತಸು ಭವ |

ಸುತಶೇಷಗಿರೀಧವ-- ವಿಜಿತಮನೋ ಭವ|| -ಸಾಕೇತಾ ||೪||

-ಇಷ್ಟಕ್ಕೆ ಪ್ರಥಮಾಂಕವು-