ಈ ಪುಟವನ್ನು ಪ್ರಕಟಿಸಲಾಗಿದೆ



ರಮಾನಂದ

೩೩

ಭಕ್ತ ಮುಂದಾರನೆ, ಭಗವಂತನಾದ ಭಾಸ್ಕರನೆ, ತ್ರಿಕಾಲವಂದ್ಯನಾದ ನಿನಗೆ ಇದೆ ಇದೆ ಈ ದೀನನ ಕೋಟಿ ಕೋಟಿ ವಂದನೆಗಳು ! ಉದಯಾದ್ರಿಶಿಖರದಲ್ಲಿ ಅಧಿಷ್ಠಾತನಾಗಿರುವ ನಿನ್ನಲ್ಲಿ ಇದೇ ಈ ನಮ್ಮ ದೈನ್ಯ ಪ್ರಾರ್ಥನೆ, ಪ್ರಭಾಕರನಾದ ನಿನ್ನ ಉದಯವು ನಮ್ಮೆಲ್ಲರಿಗೂ ಸುಪ್ರಭಾತವೇ ಆಗಿ, ನಮ್ಮ ಮೋಹಾಂಧಕಾರವನ್ನು ಹೋಗಲಾಡಿಸಿ, ಜ್ಞಾನೋದಯದಿಂದ ಪರಿಷ್ಕರಿಸಲ್ಪಡುವಂತಾಗಲಿ, ನಿನ್ನೀ ಪವಿತ್ರ ತಮವಾದ ಕಿರಣಾಳಿಯು, ನಮ್ಮ ಹೃದಯಾಕಾಶದಲ್ಲಿ ವಿವೇಕಸೂರ್ಯನು, ಸಾರಾಸಾರ ವಿವೇಚನೆಯಿಂದ ಸ್ಥಿರ ಪ್ರಕಾಶವನ್ನು ಹೊಂದುವಂತೆ ಮಾಡಲಿ, ನಿನ್ನ ವಿಶ್ವ ರೂಪವು ನಮ್ಮ ಜಡಚೇತನಕ್ಕೆ ಚೈತನ್ಯ ವಿತ್ತು, ಇಹಜೀವನ ಪರಾಕಾಷ್ಠೆಯನ್ನು ಕಾಣಲು, ಕರ್ತವ್ಯಕರ್ಮ ತತ್ಪರತೆಯನ್ನು ಹೊಂದುವಂತೆ ಸದಾಕಾಲ-ಸರ್ವಾವಸ್ಥೆಗಳಲ್ಲಿಯೂ ಸಂರಕ್ಷಿಸುತ್ತಿರಲಿ.-

( ಕೆಳಗೆ ನೋಡಿ-ಭಕ್ತಿಯಿಂದ )

"ಮಾತೆ, ವಸುಂಧರೆ! ಕ್ಷಮಿಸು, ಉದಯದಿಂದ ಅಸ್ತಮಯ ಪರ್ಯ೦ತವೂ, ನಮ್ಮಿಂದ ಮಾಡಲ್ಪಡಬಹುದಾದ ಸಮಸ್ತ ದೋಷಗಳನ್ನೂ ಕ್ಷಮಿಸಿ, ಪುತ್ರವಾತ್ಸಲ್ಯದಿಂಡ ಅನುಗ್ರಹಿಸಿ, ರಕ್ಷಿಸು.
ತಾಯೆ! ನಿನ್ನ ಅನಂತಸಂತಾನದಲ್ಲಿ ನಾನು ಕೇವಲ ಅಣು ಮಾತ್ರವಾಗಿರುತ್ತೇನೆ. ಇಂತಹ ಅಖಂಡವಾದ, ಅತ್ಯದ್ಭುತವಾದ, ಅಕ್ಷಯವಾದ ನಿನ್ನ ಈ ವಿಶ್ವರೂಪವನ್ನು ಸೇವಿಸುವ ಶಕ್ತಿಯು ನನಗೆ ನಿನ್ನ ದಯೆಯಿಂದಲೇ ದೊರೆಯಬೇಕಲ್ಲದೆ, ಮತ್ತೇತರಿಂದಲೂ ದೊರೆಯಲಾರದಲ್ಲವೆ? ದೇವಿ! ವೀರಪ್ರಸವಿನಿಯಾದ ನಿನ್ನ ಅ೦ತ:ಕರಣದ ಆಶೀರ್ವಾದವು ನಮ್ಮನ್ನು ನಿರಂತರವೂ ಎಡೆಬಿಡದೆ ರಕ್ಷಿಸುತಿರುವಲ್ಲಿ, ನಮಗೆ ಮತ್ತಾವ ಭೀತಿಗೇ ಆಗಲಿ ಕಾರಣವೆಲ್ಲಿಯದು? ಪ್ರಿಯಮಾತೆಯಾದ ನಿನ್ನ ಸೇವೆಯೊಂದರಲ್ಲಿಯೇ ನಮ್ಮ ಚಿತ್ತವು ನಿರತವಾಗಿರಬೇಕಲ್ಲದೆ, ಇತರ ದುರ್ವ್ಯಸನರೋಗದಿಂದ ವ್ಯರ್ಥ 25