ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೪೧

ಅಪರಾಧಿಯಾಗಿ ಪರಿಗಣಿಸಲ್ಪಟ್ಟು ದಂಡನೆಗೆ ಗುರಿಯಾಗುವಂತೆ ಯೂ ಮಾಡಬೇಕಾದ ಹಲವು ಭೇದೋಪಾಯಗಳನ್ನು ಪ್ರಯೋಗಿಸ ಬೇಕೆಂಬುದೇ ನನ್ನ ಆಲೋಚನೆಯಾಗಿದೆ.
ಕಳಿಂಗ:-ಅಹುದಹುದು, ಹಾಗೆಯೇ ಮಾಡಬೇಕು. ಆ ದುರಭಿಮಾನಿಯು ಸಹಾಧ್ಯಾಯಿಗಳೊಡನೆ ಸರಸ ಪ್ರಸಂಗದಲ್ಲಿ 5 ನಲವೇರಿ ಮೈ ಮರೆತು ಕುಳಿತಿರುವಾಗ, ಆತನ ತರ್ಕ, ವ್ಯಾಕರಣ, ದಂಡನೀತಿ ಶಾಸ್ತ್ರ ಪುಸ್ತಕಗಳನ್ನು ಅಪಹರಿಸಿ ಬೈತಿಡುವುದೂ, ಆತನ ಬರೆವಣಿಗೆಯಲ್ಲಿ ಕೊಳೆಯನ್ನು ತುಂಬುವುದೂ, ಆತನ ನಡೆನುಡಿ ಯಲ್ಲಿ ಕಲಂಕವುಂಟಾಗುವಂತೆ ಇತರ ಮಾಯಾಜಾಲಗಳನ್ನೊಡ್ಡು ವುದೂ, ಇವೆಲ್ಲವೂ ಆತನನ್ನು ಸುಲಭವಾಗಿ ಬಲೆಯೊಳಕ್ಕೆ ಕಡಹ 10 ಕಕ್ಕುವುಗಳಾಗಿವೆ.
ರವಿ:-(ಕಳಿಂಗನ ಬೆನ್ನು ತಟ್ಟಿ) ಭಲೆ ಭಲೆ ಮಿತ್ರನೆ! ಒಳ್ಳೆಯ ಸಲಹೆಬಲು ಒಳ್ಳೆಯ ಮಾಟವನ್ನೇ ತೋರಿಸಿದೆ. ಒಪ್ಪಿತು; ನನಗೆ ಇದು ಚೆನ್ನಾಗಿಯೂ ಒಪ್ಪಿತು. ಇನ್ನು ವೈರಿಯು ನಮ್ಮ ಬಲೆಗೆ ಬಿದ್ದನೆಂದೇ ತಿಳಿದು ಸಮಾಧಾನ ಹೊಂದುವೆನು.
15(ತೆರೆಯಲ್ಲಿ ಕುಮಾರನೆ! ಶಾಲೆಗೆ ಹೊತ್ತು ಮೀರುತ್ತಿಲ್ಲವೇ? ಇದೇಕೆ ? ಅಲ್ಲಿಗೆ ತಡೆತಡೆದು ನಿಲ್ಲುತ್ತಿರುವೆ?
ರವಿ:- (ಆತುರದಿಂದ) ಇದೊ ಇದೊ-ಆತನೇ ಇಲ್ಲಿಗೆ ಬರುತ್ತಿ ರುವನು.
ನಳ:- (ತೆರೆಯಕಡೆ ನೋಡಿ) ಆತನು ಸಹಧ್ಯಾಯಿಗಳೊಡನೆ 2 ಬಾಲೋದ್ಯಾನದಿಂದ ಶಾಲೆಗೆ ಬರುತ್ತಿರುವನು, ಕಪಟತಂತ್ರವನ್ನೇ ತಿಳಿಯದ ಪಶುಪ್ರಾಣಿಯಾದ ಇವನನ್ನು ನಾವು ಜಯಿಸುವುದೇನೂ ಕಷ್ಟವಾಗಿ ಕಾಣುವುದಿಲ್ಲ,
ಕಳಿಂಗ:- ಕಷ್ಟವಾಗಿಲ್ಲ ದಿದ್ದರೂ, ಮುಂದೆ ನಾವು ನಿರ್ದೊ ಷಿಗಳಾಗಿಯೇ ಪರಿಗಣಿಸಲ್ಪಡಬೇಕಲ್ಲವೆ ? ಅದಕ್ಕಾಗಿ ಈತನಲ್ಲಿ 25