ಗುಣವಂದ ಕಳುವರಲ್ಲದೆ |
ಹಣಕಳುವರೆ, ಕಳೆದ ಬಳಿಕ ಚೂಡಾರತ್ನಾ ||
ಸೌಮ್ಯ:- (ಸಂತೋಷದಿಂದ) ಆಯಾ, ಸುಮುಖನೆ ಸತ್ಪುರು ಷರ ಸಂಗತಿಯೇ ಸರ್ವಾರ್ಥಸಿದ್ದಿ ಪದವೆಂದು ಬಲ್ಲ ವರಾಡುವರು. 5 ಆದುದರಿಂದ ಪ್ರಜ್ಞಾಶಾಲಿಯಾದ ನಮ್ಮ ರಮಾನಂದ ಕುಮಾರನ ಸಹವಾಸಲಾಭದಿಂದ, ನಾವೂ ಧನ್ಯರಾಗುವುದರಲ್ಲಿ ಸಂದೇಹವೇನು? ಹೇಗೆಂದರೆ_
ಕಂದ||ಸಾರಗುಣಿಯೊಡನೆ ದುರ್ಗುಣಿ|
ಸೇರಲ್ ಸಲೆಪೂಜ್ಯನಹನದೆಂತೆನೆಮುಡಿಯೊಳ್ ||
ಸೌರಭ್ಯ ಕುಸುಮಸಂಗದೆ|
ನಾರುಂಸಲುವಂತೆ ಸುಗುಣರತ್ನಕರಂಡಾ||
ಇದೇ ಸಾಕಾದ ಸಮಾಧಾನವಲ್ಲವೆ?
ಸುಮುಖ:- ಅವೆಲ್ಲ ವೂ ಸರಿಯೆ; ಇರಲಿ, ( ರಮಾನಂದನನ್ನು ಕುರಿತು) ಆಯ್ಯಾ, ರಮಾನಂದ! ನಿನ್ನೆ, ನೀನು ನಿನ್ನ ಅಣ್ಣನಿಗೆ ಏನಾದರೂ ಹಿತವನ್ನು ಹೇಳಿದೆಯೇನು?
ರಮಾ :- ಹೇಳಿದೆನು-ಸೋಮಾರಿಗಳೊಡನಾಡಿ, ಸಾರವಾದ ವಿದ್ಯಾಧನವನ್ನು ಕಳೆದುಕೊಳ್ಳುವುದು ಸರಿಯಲ್ಲ ವು- ಎಂದು ಹೇಳಿ ದೆನು, ಏಕೆ?
ಸುಮುಖ:- ಅದರಿಂದ ಆತನಿಗೆ ಆಗ್ರಹವುಂಟಾಗುವುದಿಲ್ಲವೆ? 20 ಹಾಗೇಕೆ ಹೇಳಿದೆ ?
ರಮಾ:- (ಕಿರುನಗೆಯಿಂದ) ತಿಳಿದೇ ಇದೆಯಷ್ಟ, “ಖಂಡಿತ ವಾದಿ ಲೋಕವಿರೋಧಿ' ಎಂಬುದು, ಸಾರಾಸಾರ ವಿವೇಚನೆಯುಳ್ಳ ವನಿಗೆ ನನ್ನ ನುಡಿಯಿಂದ ಆಗ್ರಹವೆಳ್ಳಷ್ಟೂ ಉಂಟಾಗುವುದಿಲ್ಲ.
ಒಂದುವೇಳೆ ಆತನು ವಿವೇಕವನ್ನು ಬಿಟ್ಟು ಕೋಪಿಸಿಕೊಂಡರೆ, ನನ್ನ 25 ನ್ನು ಏನು ಮಾಡಬಲ್ಲ ನು?