ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೫೧ ಊರೊಲಿಸೆ ಸದ್ದು ರುವಂ | ಮೀರದಿರೆ ಮಾನ್ಯರನೂ || (ಛಂದಸಾರ) ಹೀಗೆಂದು ನಾನು ನಮ್ಮ ಪರಮಪೂಜ್ಯರಾದ ತಾಯ್ತಂದೆಗೆ ಇಂದ ಉಪದೇಶಹೊಂದಿರುವೆನು. ಇದನ್ನು ಹೇಗೆ ಮೀರಿ ನಡೆಯು ಕಾದೀತು? ಸೌಮ್ಯ:-ಅದೇನೋ ಯುಕ್ತವೇ ಅಹುದು, ಆದರೆ ನೀತಿಯು 5 ಹೇಳುವದೇನೆಂಬುದನ್ನು ನೋಡು ಕಂದು ಬೇವಿನ ಸಸಿಯಂ ತಂದಿಟ್ಬಾ ! ವಿನ ಮೊಲೆವಾಲ ನೆರೆದು ಸಲಹಿದೊಡದು ಶಾಂ | ಬೇವಲ್ಲ ದಮ್ಮತವಾಗದು | - ಗಾವಿಲರೊಡನಾಡಿ ಗುಣವನರಸಿದರುಂಟೇ ॥' (ಪ, ಸಾ ) 16 ರನಾ:- ಸನ್ನಿತರೇ! ನಿಮ್ಮ ಹಿತಸೂಚನೆಯು ವಿಹಿತವ ಗಿಯೇ ಇರುವುದು, ಆದರೂ ಕೇಳಿರಿ, ಲೋಕದಲ್ಲಿ ತಾಯಿತಂದೆ ಗಳು ಮಕ್ಕಳಾಗಬೇಕೆಂದು ಕೋರುವರೇಕೆ? ಮುಂದೆ ತಮ್ಮ ಕುಲಕೀರ್ತಿ-ಸಂಪತ್ತಿಗಳ ಅಭ್ಯುದಯಕ್ಕೆ ಕಾರಣರಾಗಿ, ನಲವಡಿಸುವರೆಂದ ಲ್ಲವೇ? ಹಾಗೆ ಅವರನ್ನು ಸಂತೋಷಪಡಿಸುವುದೇ ಪುತ್ರರಾದ ನಮ್ಮ 15 ಕರ್ತವ್ಯವಲ್ಲ ವೆ? ಹೀಗೆಂದು ತಿಳಿದ, ಆ ಪರದೈವಸ್ವರೂಪರು ದು:ಖ ಭಾಜನರಾಗಿರುವುದನ್ನು ನೋಡಿಯ ಸುಮ್ಮನಿರುವುದಾದರೆ, ನಾವು ಕೃತಘ್ನು ರಲ್ಲದೆ ಮತ್ತೇನು? ಹೇಗಾದರೂ ಆ ನಮ್ಮ ಸಾಕಾರಬ್ರಹ್ಮ ಸ್ವರೂಪರಾದ ತಾಯಿತಂದೆಗಳ ಮನ:ಸ್ಸಂತೋಷ ಪಡುವಂತ ಅಣ್ಣ ನನ್ನು ಆತನ ಅನುಚರರೊಡನೆ ವಿವೇಕಮಾರ್ಗಕ್ಕೆ ತರಬೇಕೆಂಬುದೇ 20 ನನ್ನ ದೃಢಸಂಕಲ್ಪವಾಗಿದೆ. ಇದಕ್ಕೆ ಆ ಗುರುಜನರ ಪೂರ್ಣಾನುಗ್ರ ಹವೂ, ಭಗವತ್ಪಹಾಯವೂ, ಸುಹೃದರಾದ ನಿಮ್ಮ ಹಿತ ಸೂಚನೆಗಳೂ ಸಹಕರಿಸುತ್ತಿರಬೇಕೆಂಬುದೇ ನನ್ನ ನಿರ೦ತರದ ಪ್ರಾರ್ಥನೆ. ಸುಮುಖ:- ಸತ್ಯ ಸ೦ಕಲ್ಪನಾದ ರಮಾನಂದನೆ! ನಿನ್ನ ಉಚ್ಛ ಭಾವನೆಗೆ ಭಗವಂತನು ಸಹಾಯಕನಾಗಿಯೇ ಇರುತ್ತಾನೆಂಬುದರಲ್ಲಿ 25