ನಳ:- ಹಾಗಯೇ ಊಹಿಸಿರಬಹುದು, ಆದರೆ, ಆತನು ಮುಖ್ಯ ಪಾಠವನ್ನು ಎಂದರೆ- ಇಂದಿನ ನಿಯಮಿತ ಕಾರ್ಯವನ್ನು ಹೃದ್ಗತ ಮತ್ತು ಕಂಠಪಾಠ ಮಾಡಿಕೊಂಡಿದ್ದರೋ ? , ಅದರಿಂದ ನಮ್ಮ ಪ್ರಯತ್ನಕ್ಕೆ ಆತ೦ಕವಲ್ಲ ವೋ ?
ರವಿ:- ಅಲ್ಲದ ಸಲ್ಲದ ಸಂದೇಹಗಳನ್ನು ಕಟ್ಟಿಕೊಂಡು ಹೆಂಗಸರಂತೆ ಹಲುಬುವುದು ನಮ್ಮ ಕೆಲಸವಲ್ಲ. ಹಾಗೂ ಒಂದು ವೇಳೆ, ಅದರಿಂದ ತಪ್ಪಿಸಿಕೊಂಡ ರೂ ಉಳಿದ ಉಪಾಯಗಳಿಗಾದರೂ ಬಲಿ ಬೀಳಲೇಬೇಕು.
ನಳ:- ಆದರೂ, ಪ್ರಬಲಸಹಾಯಸಂಪತ್ತಿಯೂ ಸೂಕ್ಷ್ಮ ದೃಷ್ಟಿ ಗಳಾದ ಸಹಾಧ್ಯಾಯಿಗಳ ಬೆಂಬಲವೂ ಇರುವಾಗ, ನನ್ನ ಕೃತಿ
ಸಂಧಾನಕ್ಕೆ ಜಯವಾಗುವದೆಂದು ಹೇಳಲಾಗುವದಿಲ್ಲ.
ರವಿ:-ನಿನ್ನ ಅಭಿಪ್ರಾಯವೂ ಸಹಜವೇಸರಿ, ಅದಕ್ಕೆಂದೇ ಪ್ರಬಲಸಹಾಯ ಸಂಪತ್ತಿಗಳಿಂದ ಅವನನ್ನು ಪ್ರತ್ಯೇಕಿಸುವಂತೆ ಮಾ
ಡಲು, ಹಲವು ಮಾಟಗಳನ್ನು ಕಲ್ಪಿಸಿಟ್ಟು ಬಂದಿರುವುದು.
( ತೆರೆಯಲ್ಲಿ ) ನಡೆಯಿರಿ, ನಡೆಯಿರಿ, ಗುರುಗಳು ಬರುವವೇಳೆಯಾಗು
ತಿದೆ.
ಕಳಿಂಗ:-ಇದೊ, ಬಂದನಪ್ಪ ಮಹಾರಾಯ! ಏನು ಇವನ ಹೆಚ್ಚುಗಾರಿಕೆಯೋ ? ಎಷ್ಟರ ಹೆಮ್ಮೆಯೋ ? ನೋಡಿ ಹೇಳಿ ಮುಗಿ
ಸುವಂತಿಲ್ಲ.
ರವಿ:-ಆಗಲಿ, ಆಗಲಿ, ಎಷ್ಟು ದಿನಗಳ ಹಾರಾಟವೋ
ನೋಡುವ ಈವರೆಗೂ ಅವನ ಕಡೆಯಲ್ಲಿ ದೈವಬಲವಿತ್ತು. ಈಗ ಆತನ ದುರಭಿಮಾನದಿಂದ ದೈವಬಲವು ಅವನನ್ನು ಬಿಟ್ಟು ಕಾಲಬಲ ದಲ್ಲಿ ಸೇರಿ, ನಮ್ಮ ಕಡೆಯಲ್ಲಿ ರುವುದು,
ಕಳಿಂಗ:- ಹೂಂ, ಇನ್ನು ತಡೆಯಿರಿ, ಅವರು ಬಂದರು.
25
( ಸಹಾಧ್ಯಾಯಿಗಳೊಡನೆ ರಮಾನಂದನ ಪ್ರವೇಶ.)
ಪುಟ:ರಮಾನಂದ.djvu/೭೩
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಸತೀಹಿತೈಷಿಣಿ