# & ರಾಜಾರಾಮಮೋಹನರಾಯರ ಜೀವಿತ ಚರಿತ್ರೆ 28 ರಲ್ಲಿ ಹಿಂದೂ ದೇಶದ ಸ್ಥಿತಿಗಳನ್ನು ಕುರಿತು ಕೇಳಲ್ಪಟ್ಟ ಪ್ರಶ್ನೆಗಳಿಗೆ ಸದುತ್ತರವನ್ನು ಬರೆದನು. ಈ ವಿಷಯಗಳನ್ನೂ ಕುರಿತ ಆಕ್ಷೇಪಣೆಗಳನ್ನೆಲ್ಲಾ ಕ್ರಮವಾಗಿ ಉದಾಹರಿಸಿ ಅವುಗಳಿಗೆ ಈತನು ಕೊಟ್ಟ ಅಭಿಪ್ರಾಯಗಳನ್ನು ಎಷ್ಟು ಸಂಕ್ಷೇಪವಾಗಿ ಬರೆಯುತ್ತಾ ಬಂ ದರೂ ಪ್ರತ್ಯೇಕವಾಗಿ ಒಂದು ಪುಸ್ತಕವಾಗದೇ ಇರದು. ಆದುದರಿಂದ ಈ ಸಣ್ಣ ಪುಸ್ತಕ ದಲ್ಲಿ ಅವುಗಳನ್ನೆಲ್ಲಾ ಬರೆಯಲಿಕ್ಕೆ ಅವಕಾಶವಿಲ್ಲದೆ ನಿದರ್ಶನಕ್ಕಾಗಿ ಕೆಲವನ್ನು ಮಾತ್ರ ಇಲ್ಲಿ ಸಂಗ್ರಹವಾಗಿ ತಿಳಿಸುವೆವು:- 1 ಭೂಮಿಯ ಕಂದಾಯವನ್ನು ಕುರಿತು ಜರ್ಮೀಾದಾರರಿಗೆ ಶಾಶ್ವತವಾದ ತೆರಿಗೆ ಯನ್ನು ನಿರ್ಣಯಿಸಿದುದು ಬಹು ಉತ್ತಮವಾಗಿದೆ. ಭೂಮಿಗಳ ವ್ಯವಸಾಯಗಾರರಿಗೆ ಒಂದು ಕಾನೂನು ಇಲ್ಲದೆ ಇರುವುದರಿಂದ ಬ೩ಾನುದಾರರು ಆಗಾಗ್ಗೆ ಅನೇಕ ಬದಲಾವಣೆ ಗಳನ್ನು ಮಾಡುತ್ತಾ ಬರುವದರಿಂದ ರೈತರು ಹಲವಬಗೆಯ ತೊಂದರೆಗಳನ್ನು ಅನುಭವಿಸ ಬೇಕಾಗಿ ಬರುವುದು. ಆದುದರಿಂದ ಅವರಿಗೆ ಇಂತಹ ಸಂಕಟಗಳು ಉಂಟಾಗದಂತೆ ಬದ ಲಾಯಿಸಲ್ಪಡದೆಯೂ, ನ್ಯಾಯವಾಗಿ ಭೂಸ್ಥಿತಿಗೆ ತಕ್ಕುದಾಗಿಯೂ ಇರುವಂತೆ ಅವರು ತೆರಿ ಗೆಯನ್ನು ಸಲ್ಲಿಸಬೇಕಾದಂತೆ ಏರ್ಪಡಿಸುವುದು ಕರ್ತವ್ಯವಾಗಿರುವುದು, ಬಂಗಾಳಾ ರಾ ಜ್ಯದಲ್ಲಿ ಮಾಡಿದಂತೆ ದೇಶಗಳಲ್ಲೆಲ್ಲಾ ಶಾಶ್ವತವಾದ ಸಿಸ್ತುಗಳನ್ನೇರ್ಪಡಿಸಿ ಬಡರೈತರಿಗೆ ಹಿತ ವನ್ನುಂಟುಮಾಡತಕ್ಕುದು. 2 ಭೂಮಿಯ ಕಂದಾಯವನ್ನೂ ಇತರರೂಪಗಳಲ್ಲಿ ಬರುವ ಆದಾಯಗಳನ್ನೂ ಒರಮಾಡಿಕೊಳ್ಳಲು ಏರಟ್ಟಿರುವ ಉದ್ಯೋಗಸ್ಥರಿಗೆ ದಂಡನಾಧಿಕಾರವನ್ನು ಕೊಡಕೂಡದು, ಅವರಿಗೆ ಈ ಅಧಿಕಾರವನ್ನು ಕೊಟ್ಟರೆ ತಮ್ಮ ಕೆಲಸಗಳನ್ನು ತಾವೇ ವಿಮರ್ಶೆ ಮಾಡಬೇಕಾಗಿ ಬರುವುದು, ಆದುದರಿಂದ ಅವರು ತಾವು ಮಾಡಿದುದನ್ನು ಬದಲಾಯಿಸದೆ ನ್ಯಾಯವನ್ನು ಅಲಕ್ಷ್ಯ ಮಾಡುವರು. ಇವರ ಅನ್ಯಾಯಗಳನ್ನು ಕುರಿತು ಹೇಳಿಕೊಳ್ಳುವ ನ್ಯಾಯಸ್ಥಾನ ಗಳಲ್ಲ ಇವರು ಯಾವಾಗಲೂ, ಪ್ರತಿಕಕ್ಷಿಗಳಾಗಿಯೂ, ಉತ್ತರವಾದಿಗಳಾಗಿಯೂ ಇರತ ಕುದು, ಹೀಗಾದರೆ ಪ್ರತಿಮನುಷ್ಯನೂ ತನ್ನ ಮೇಲೆ ಯಾವ ಅನ್ಯಾಯ ನಡೆಸಿದರೂ ನಿರ್ಭಯವಾಗಿ ನ್ಯಾಯಸನಗಳವರಿಗೆ ಹೇಳಿಕೊಳ್ಳುವ ಸ್ವಾತಂತ್ರ್ಯವುಳ್ಳವನಾಗುವನು. 3, ಸಾವಿರಾರು ರೂಪಾಯಿಗಳ ಸಂಬಳ ಕೊಟ್ಟು, ಸಲ್ವಾಧಿಕಾರಿಗಳನ್ನು ಕಲೆಕ್ಟರ್ ಗಳ ವಶಮಾಡುವುದು ಅಕ್ರಮವಾಗಿಯೂ ಅನಾವಶ್ಯಕವಾಗಿಯೂ ಇದೆ. ಅವರಿಗೆ ದಂಡ ನಾಧಿಕಾರವನ್ನು ತಪ್ಪಿಸಿದರೆ ಮುನ್ನೂರು ನಾನೂರು ರೂಪಾಯಿಗಳ ವೇತನದಿಂದಲೇ ದೇಶೀ ಯರಿಂದ ಆ ಕೆಲಸಗಳನ್ನು ತುಂಬ ನಂಬಿಕೆಯಿಂದ ನಡೆಸಬಹುದು. 4 ನ್ಯಾಯಸಭೆಗಳ ನಿರ್ಮಾಣವನ್ನು ಕುರಿತು ಮಾಡಿರುವ ಏರ್ಪಾಡುಗಳು ಚೆನ್ನಾ ಗಿಯೇ ಇವೆ. ಆದರೆ ಇಷ್ಟು ವಿಸ್ತಾರವಾದ ದೇಶಕ್ಕೆ ಬಹು ಸ್ವಲ್ಪ ಸಂಖ್ಯೆಯ ನ್ಯಾಯಾ ಧಿಕಾರಿಗಳು ಸಾಲದು, ಸಾಧ್ಯವಾದಮಟ್ಟಿಗೆ ಪ್ರಜೆಗಳ ನಿವಾಸಕ್ಕೆ ನ್ಯಾಯಸ್ಥಾನಗಳು ಸಮಾ ಪದಲ್ಲಿದ್ದರೆ ಅವರು ತಮ್ಮ ಕಷ್ಟ ನಿಷ್ಟುರಗಳನ್ನು ಹೇಳಿಕೊಳ್ಳಲಿಕ್ಕೆ ಅನುಕೂಲವುಂಟಾಗುವುದು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.