ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, (1) ಯರೋಸಿಯನರು ಹಿಂದೂದೇಶದಲ್ಲಿ ಹಿಂದುಗಳ ಜತೆಯಲ್ಲಿ ನಿವಾಸ ವನ್ನು ಏರ್ಪಡಿಸಿಕೊಂಡಲ್ಲಿ ಅವರಿಂದ ವ್ಯವಸಾಯವೂ, ಬೆಳೆಗಳೂ, ಅಭಿವೃದ್ಧಿಗೆ ಬರುವ ಮಾರ್ಗಗಳನ್ನು ಬೋಧಿಸುವ ಶಾಸ್ತ್ರಗಳೂ, ಈ ದೇಶದಲ್ಲಿ ಚೆನ್ನಾಗಿ ವ್ಯಾಪಿಸುವುದು ಮಾತ್ರವಲ್ಲದೆ ವ್ಯಾಪಾರಿಗಳೂ ಕೂಡ ಅನೇಕ ಮಾರ್ಗಗಳಲ್ಲಿ ಅಭಿವೃದ್ಧಿಗೆ ಬರುವುವು. (2) ಯರೋಪಿಯನರು ಹಿಂದೂ ದೇಶದ ಹಲವು ಪಂಗಡದ ಜನರೊಂದಿಗೆ ಔರತು ಕೆಲಸಮಾಡುವ ಅಭ್ಯಾಸ ಬೀಳುವುದರಿಂದ ಅವರ ಸ್ನೇಹದಿಂದ ಹಿಂದುಗಳ ಅಭಿ ವೃದ್ಧಿಗೆ ವಿಘ್ನಗಳಾಗಿರುವ ಮತವಿಷಯವಾದ ಅನೇಕ ಮೂರ್ಖಾಚಾರಗಳೂ ಹಟಗಳೂ ತೊಲಗಿ ಹೋಗುವವು. (3) ಯುರೋಪಿಯನರ ಅಗತ್ಯಕ್ಕೋಸ್ಕರ ಸಕ್ಕಾರದವರು ತಮ್ಮ ಪ್ರಸ್ತುತ ರಾಜ್ಯಾಂಗದ ನಿರ್ಬಂಧಗಳನ್ನೆಲ್ಲ ತೊಲಗಿಸಿ, ದೊರೆಗಳಿಗೆ ಸೌಖ್ಯಗಳನ್ನೀಯುವ ಅನೇಕ ಸಂಸ್ಕಾರಗಳನ್ನು ಮಾಡಬೇಕಾಗಿ ಬರುವುದು, ಅದರಿಂದ ಹಿಂದುಗಳಿಗೆ ಕೂಡ ಸ್ವಲ್ಪಮ ಟ್ವಿಗೆ ಲಾಭವುಂಟಾಗುವುದು. () ಯೂರೋಪಿಯನರು ಕೂಡ ತಮ್ಮ ಜತೆಯಾಗಿರುವುದರಿಂದ ಜಾನು ಬಾರರಿಂದ ವ್ಯವಸಾಯಗಾರರಿಗೆ ಉಂಟಾಗುವ ಬಾಧೆಗಳು ತೊಲಗಿಹೋಗುವುದಲ್ಲದೆ ಅಧಿ ಕಾರಗಳೂ ಕೂಡ ತಮ್ಮ ಅಧಿಕಾರಗಳನ್ನು ಅಕ್ರಮವಾಗಿ ಉಪಯೋಗಿಸಿ ಜನರಿಗೆ ತೊಂದ ರೆಯನ್ನುಂಟುಮಾಡದಾಗೆ ಎಚ್ಚರದಿಂದ ಇರುವರು (5) ಯುರೋಪಿಯನರ ಔದಾಲ್ಯದಿಂದಲೂ, ಹಿಂದೂದೇಶದವರ ಸಹವಾಸದಿಂ ದಲೂ ಆ ದೇಶದಲ್ಲಿ ಪಶ್ಚಿಮದೇಶದವರ ನಾಗರಿಕತೆಯ ಅಭಿವೃದ್ಧಿಗೂ, ಪಾಶ್ಚಾತ್ಯ ವಿದ್ಯಾ ನಿವೃದ್ಧಿಗೂ ತಕ್ಕ ಅನೇಕ ಸಾಧನಗಳು ಉಂಟಾಗುವುವು. (6) ಯುರೋಪಿಯನರ ನಿವಾಸಕಾರಣದಿಂದ ಇಂಗ್ಲೆಂಡಿಗೆ ಉತ್ತರಪ್ರತ್ಯುತ್ತರ ಗಳ ವ್ಯವಹಾರವು ವೃದ್ಧಿ ಹೊಂದುವುದು ಇದರಿಂದ ಸರಕಾರದವರಿಗೆ ಕೆಲವರಿಂದ ಮಾ ತ್ರವೇ ತಿಳಿದು ಬರತಕ್ಕ ಆ ದೇಶದ ಸ್ಥಿತಿಗಳು ಬಹುಮಂದಿಯ ಮೂಲಕ ವಿಷದವಾಗಿ ತಿಳಿ ಯಬರುವವು. ಸತ್ಯವನ್ನು ಗ್ರಹಿಸುವುದಕ್ಕೆ ಅವಕಾಶವುಂಟಾಗುವುದು ಅವಶ್ಯಕವಾದ ಬದಲಾವಣೆಗಳನ್ನು ಮಾಡಲು ಅವಕಾಶ ಸಿಕ್ಕುವುದು. ಹೀಗೆಯೇ ನಷ್ಟಗಳನ್ನು ಕೂಡ ವಿವರಿಸಿ, ಅವುಗಳ ಪರಿಶಾರೆ ಮಾರ್ಗಗಳನ್ನು Gರಿಸಿದನು, ಅವುಗಳನ್ನು ಸಂಕ್ಷೇಪವಾಗಿ ತಿಳಿಸುವೆ. (1) ತಾವು ದೊರೆತನದವರ ಜಾತಿಯವರೆಂಬ ಭಾವನೆಯಿಂದ ಅಲ್ಲಿನವರಿಗೆ ಇಲ್ಲದ ಅನೇಕ ಅನುಕೂಲಗಳನ್ನುಂಟುಮಾಡಿಕೊಂಡು ಅವರ ಮತಾಚಾರಗಳನ್ನು ತಿರಸ್ಕರಿಸಬಹು ದೆಂಮ ಕೆಲವರು ಹೇಳಬಹುದು, ಆದರೆ ಇವುಗಳನ್ನೆಲ್ಲ ಎರಡೇ ಉಪಾಯಗಳಿಂದ ನಿವಾ ರಿಸಿಕೊಳ್ಳಬಹುದು. ಇವುಗಳಲ್ಲಿ ಮೊದಲನೆಯದು, ಮೊದಲು ಮೊದಲು, ಸಮಾನರಾದ ಸಹೋದರರೆಂಬ ಅಭಿಪ್ರಾಯವುಳ್ಳ ವಿದ್ಯಾವಂತರನ್ನೇ ತಂದು ಸೇರಿಸುವುದು ಎರಡನೆ