ಈ ಪುಟವನ್ನು ಪರಿಶೀಲಿಸಲಾಗಿಲ್ಲ.

id ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ನವರಿಂದ ಅಹ್ವಾನಪತ್ರಿಕೆಗಳು ಬರುತ್ತಲಿದ್ದರೂ, ಕಾಠ್ಯ ಗೌರವದಿಂದ ಪ್ರಯಾಣಗಳನ್ನೆಲ್ಲಾ ನಿಲ್ಲಿಸಬೇಕಾಗಿ ಬಂತು, ಆದರೆ 1832 ನೆಯ ವರುಷದ ಬೇಸಗೆಯ ವಿರಾಮಕಾಲದಲ್ಲಿ ಪಾರ್ಲಿಮೆಂಟು ಸಭೆ ಸೇರಲ್ಪಡದೆ ಇದ್ದುದರಿಂದ ಅವನಿಗೆ ಸ್ವಲ್ಪ ಅವಕಾಶ ಸಿಕ್ಕಿತು, ಆದು ದರಿಂದ ಈ ವ್ಯವಧಿಯನ್ನು ಪ್ರ್ರಾಸ್ ದೇಶದಲ್ಲಿ ಕಳೆದನು, ಈ ಪ್ರಯಾಣದಲ್ಲಿ ಡೇವಿಡ್ ಹೇರ್ ಎಂಬವನ ಸಹೋದರನೊಬ್ಬನು ಈತನ ಸಂಗಡ ಇದ್ದನು, ಪ್ರ್ರಾಸಿನಲ್ಲಿ ಕೂಡ ಇಂಗ್ಲೆಂಡಿನಂತೆಯೆ ಪ್ರತಿಯೊಂದು ಸಮಾಜದಲ್ಲಿಯೂ ಆತನು ತುಂಬಾ ಗೌರವಿಸಲ್ಪಟ್ಟನು. « ನ್ಯೂ ಯಿಫಿಲಿಪ್ಸ್ ” ಎಂಬ ಅಲ್ಲಿನ ದೇಶಾಧಿಪತಿಯು ಹಲವು ಸಾರಿ ಈತನಿಗೆ ಔತನಗಳ ನ್ನು ಮಾಡಿಸಿ, ಸಹ ಪಯನ್ನು ಕೊಟ್ಟನು. ಪ್ರ್ರಾಸಿನಲ್ಲಿಯೂ, ಏಷ್ಯಾಟಿಕ್ ಸೊ ಸೈಟಿಯವರು ಅಲ್ಲಿರುವಾಗ ಈತನನ್ನು ಗೌರವಸಭ್ಯನನ್ನಾಗಿ ಮಾಡಿ ಗೌರವಿಸಿದರು, ಅಲ್ಲಿನ ವಿದ್ವಾಂಸರೆಲ್ಲರಿಗೂ ರಾಮಮೋಹನನು ಪರಿಚಿತನೂ ಸ್ನೇಹಿತನೂ ಅದನು, ಅಲ್ಲಿಯೇ ಈತ ನಿಗೆ « ಕಾಮ್ಸ್ ಮೋರ್ ” ಎಂಬ ಪ್ರಸಿದ್ಧ ಕವಿಶ್ವರನ ದರ್ಶನವೂ ಅವನ ಸಂಗಡ ಒಂದೇ ಕಡೆ ಸೇರಿ ಭುಜಿಸುವಿಕೆಯ ಲಭಿಸಿದವು. ಈ ವಿಷಯದಲ್ಲಿ ಆ ಕವೀಶ್ವರನು ತನ್ನ ದಿನಚರಿ ಯಲ್ಲಿ ಕೂಡ ಬರೆದುಕೊಂಡಿರುವನು. ಈತನು ಪ್ರ್ರಾಸ್ ದೇಶಕ್ಕೆ ಹೊರಟಿರುವುದಾಗಿಯೂ, ಇನ್ನೂ ಇತರ ರಾಜ್ಯಗಳನ್ನು ನೋಡಲಿಕ್ಕೆ ಅಪೇಕ್ಷಿಸುವುದಾಗಿಯೂ, ತನ್ನ ಸ್ನೇಹಿತನೊಬ್ಬನಿಗೆ ಬರೆದ 1832 ಜನವರಿ 31 ನೇ ತಾರೀಖಿನ ಕಾಗದದಿಂದ ತಿಳಿಯಬರುವುದು, ಅದರಲ್ಲಿ ಬರೆದ ಕೆಲವು ರಾಜ್ಯಗಳ ಲ್ಲದೆ ಇಟಲಿ, ಆಸ್ಟ್ರಿಯ, ಮೊದಲಾದ ಇತರ ರಾಷ್ಟ್ರಗಳಲ್ಲಿ ತಿರುಗುವಾಗ ಫ್ರೆಂಚ'ಭಾಷಾ ಜ್ಞಾನವಿಲ್ಲದಿದ್ದರೆ ಮನಃಪೂರ್ತಿಯಾಗಿ ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಅವ ಕಾಶ ದೊರೆಯಲಾರದೆಂದು ಯೋಚಿಸಿ, ಪ್ರ್ರಾಸಿನಿಂದ ಹಿಂದಿರುಗಿ ಬರುವಾಗ ಒಬ್ಬ ಸ್ನೇಹಿ ತನನ್ನು ಅವನ ಸಂಗಡ ಕರೆದುಕೊಂಡು ಬಂದು ಆ ಭಾಷೆಯನ್ನು ಕಲಿಯುತ್ತಿದ್ದೇನೆಂದು ಬರೆದನು. ರಾಮಮೋಹನನು ಫ್ರಾನ್ಸ್‌ ರಾಜ್ಯದಿಂದ ಮರಳ ಲಂಡನ್ನಿಗೆ ಬಂದಾಗಲೇ ಹಿಂದೂ ದೇಶದ ಸ್ಥಿತಿಗಳನ್ನು ಕುರಿತು ಸಂಸ್ಕರಿಸಿ, ನಿರಿಸಿದ ಕಾನೂನಿನ ಮಸೂದೆಯು ಪಾರ್ಲಿಮೆಂ ಟಿನ ಸಭಿಕರ ವಿಮರ್ಶೆಗಾಗಿ ಇಡಲ್ಪಟ್ಟಿತ್ತು, " ಇದರಿಂದ ಅಲ್ಲಿ ಆ ಮಸೂದೆಯಲ್ಲಿ ಹಿಂದುಗಳಿಗೆ ಉಪಯೋಗಕರವಾಗಿರುವ ವಿಷಯ ಗಳನ್ನು ಸ್ವಲ್ಪವೂ ಬದಲಾಯಿಸದೆ, ಅಂಗೀಕರಿಸಿದರೆಂಬ ಶುಭವಾರ್ತೆಯನ್ನು ಕೇಳುವುದ ಕ್ಯಾಗಿ ಸುಮಾರು ಎಂಟು ತಿಂಗಳ ತನಕ ಕಾದಿದ್ದು ತಕ್ಕ ಪ್ರಯತ್ನಗಳನ್ನು ಮಾಡುತ್ತಿದ್ದನು. ಈ ಅಂಶವು ಬ್ರಿಸ್ಟಲಿನಲ್ಲಿರುವ ಮಿತ್ರಮಂಡಲಿಗೆ ಈ ಮಧ್ಯಕಾಲದಲ್ಲಿ ಬರೆದ 1833 ನೇ ಫೆಬ್ರವರಿ 17, ಜುಲೈ 24, 31 ನೇ ಮೇ, 24 ನೇ ಮತ್ತು 19 ಜುಲೈ ಈ ತಾರೀಖುಗಳಲ್ಲಿ ಬರೆದ ಪತ್ರಗಳಿಂದ ಸ್ಪಷ್ಟವಾಗಿ ತಿಳಿಯಬರುವುದು, ಬ್ರಿಸ್ಟಲ್ ಪಟ್ಟಣದವರಿಗೆ ಡಾಕ್ಟರ್ ಕಾಲ್ವೆಂಟರಿನ ಮೂಲಕ ರಾಮಮೋಹನನು ಸ್ನೇಹಿತನಾದನು. ಬ್ರಿಸ್ಟಲ್ ನಿವಾಸಿಯಾದ