(J೨೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ರಿಕಾ, ಇಂಗ್ಲೆಂಡ್ ದೇಶಗಳವರು ದೇವತಾಬೋಧನೆಗಳಂತೆ ಅಂಗೀಕರಿಸಿ ಕೃತಜ್ಞತೆಯುಳ್ಳನ ರಾಗಿದ್ದರೋ, ಯಾರನ್ನು ಒಂದುಸಾರಿನೋಡಿ ಆತನ ಮೃದು ಮಧುರ ವಾಗೋಧನಾಮೃತ ವನ್ನು ಆಸ್ವಾದಿಸಲಸೇಕ್ಷಿಸಿ ಅನ್ಯ ದೇಶೀಯರು ಕೂಡ ತಮ್ಮ ಪಟ್ಟಣಗಳಿಗೆ ಬರಹೇಳಿ, ಆತ ನಿಗೆ ಆಮಂತ್ರಣಕೊಟ್ಟು ಆತನು ಗತಿಸಿದ್ದನ್ನು ಕೇಳಿ ದುಃಖಿಸಿದರೋ ಅಂತ ಚ ಮಹಾತ್ಮನ ಸ್ವದೇಶವಾಸಿಗಳಾದ ನಾವು ಆತನನ್ನು ಗೌರವಿಸದೆ ಇರುವುದು ಎಷ್ಟು ಅಧರ್ಮ ವೋ ನೀವೇ ಆಲೋಚಿಸಿರಿ, ರಾಮಮೋಹನನ ಜ್ಞಾಸಕ ಚಿಕ್ಕವನ್ನು ಕುರಿತು ಯಾರಾದರೂ ಒಬ್ಬ ದೊಡ್ಡ ಅಧಿ ಕಾರಿ ಪ್ರಯತ್ನ ಪಟ್ಟಿದ್ದಲ್ಲಿ ಇದುವರೆಗೆ ಯಾವಾಗಲೋ ಅದು ಪೂರ್ತಿಯಾಗಿಯೇ ಇರುತ್ತ ಲಿತ್ತು. ಆಹಾ ! ಎಷ್ಟು ಎಕಾ ರಕರವಾದುದು ! ಈ ಯೋಗ್ಯತೆಗೆ ನಾವು ಲಜೈಸಬೇ ಕಾಗಿದೆ. ಸ್ವಯಂಸಹಾಯದ ಘನತೆಯನ್ನು ಮನಸ್ಸಿನಲ್ಲಿ ಎಣಿಸದೆ ಪರದೃತವೃತ್ತಿಯಲ್ಲಿ ವರ್ತಿಸುತ್ತಾ ನನಗೆ ಯಾವುದು ಬೇಕಾದರೂ 'ಭಿಕ್ಷಾಂ ದೇಹಿ' ಎನ್ನುತ್ರ ಅತಿ ದೈನ್ಯ.ದಿಂದ ನಡೆಯುತ್ತಿರುವ ನಮಗೆ ಮಹನೀಯ, ದೇಶಾಭಿಮಾನಿ, ಮನನೀಯನಾದ ಮಹಾಪುರುಷ ನಲ್ಲಿ ನಾವು ತೋರಿಸಬೇಕಾದ ಕೃತಜ್ಞತೆಯನ್ನು ಸೂಚಿಸುವ ಸತ್ಕಾರ್ಯ ನಿರ್ವ ಹಣಾರ್ಧ ವಾಗಿ ಸ್ವದೇಶಸ್ಪರ ದ್ರವ್ಯಸಹಾಯವನ್ನು ಬೇಡುವುದು ಅಗೌರವವೆನಿಸುವದೇ ? ಮಧುರ ಮಧುಭರಿತವಾದ ಕಮಲದ ರಸಾಸ್ವಾದನದ ಸವಿಯು ಮಧುಸಗಳಿಗೆ ಹೊರತಾಗಿ ಬ್ರೇಕಗ ಳಿಗೆ ತಿಳಿಯಲಹುದೆ ? ನಾವು ಇಂತಹ ಬುದ್ದಿವಂತ ಎನಿಸಿಕೊಂಡಿರುವುದರಿಂದಲೇ ನಮ್ಮ ಸ್ಪಿತಿ ಗತಿಗಳು ಅಷ್ಟು ಮಾತ್ರದಲ್ಲಿಯೇ ಇದೆ. ನಾವು ಎಷ್ಟೆಷ್ಟೋ ಗಿಡಗಳನ್ನೂ ಹತ್ರಗಳನ್ನೂ ಪೂಜೆಮಾಡಲಿಕ್ಕೆ ಸಿದ್ದರಾಗಿರತಕ್ಕ ವರೇಹೊರತು ಪೌರುಷಶಾಲಿಗಳಾದ ಬುದ್ದಿವಂತರ ಹೆಸರು ಗಳನ್ನು ಸದಾ ಸ್ಮರಿಸತಕ್ಕವರಲ್ಲ, ತಾಳೆಗರಿಯ ಉರಿಯಂತೆ ತಟ್ಟನೆ ತಣ್ಣಗಾಗುವ ಕ್ರಿಯಾಶೂನ್ಯಗಳಾದ ಒಣಹರಟೆಗಳನ್ನೊ ದರುವ ನಾವು ಮನಸ್ಸಿಟ್ಟು ಯಾವ ಸತ್ಕಾರ ವನ್ನು ತಾನೇ ನೆರವೇರಿಸಬಲ್ಲೆವು ? ಅಕ್ಕಚಿಕ್ಕ ಲಾ 1 ಎಲೈ ಭಾರತವರ್ಷವೇ ! ನಿರ್ಮಲ ಜ್ಞಾನ ಶೋಭಿತರಿಗೂ ಅವಕರ್ಮರಿಗೂ ನೆಲೆವನೆಯೆನಿಸಿದ್ದ ನಿನಗೆ ಎಂತಹ ಗತಿ ಬಂದಿತು ? ಎಲೆ ಯೂರೋಪ್ ಖಂಡವೇ ! ಎಲೆ ೮೧ ಕಾ ಖಂಡವೇ ! ನಿಮ್ಮ ದೇಶಗಳಲ್ಲಿ ಅನುಪಮನಯಶೋನಿಧಾನನಾಗಿ ನೆಗಳ ವಡೆದ ರಾಜಾರಾಮಮೋಹನರಾಯನ ಸೃದೇಶವು ಹೇಗೆ ಇದೆಯೋ ಅದನ್ನು ನೋಡಬೇಕ್ಷಿಸುವಿರಾದರೆ ಒಂದು ಸಾರಿ ನಮ್ಮ ಕಡೆಗೆ ತಿರುಗಿ ನೋಡಿರಿ, ಪರ್ವತವು ಹೇಗೆ ಮರಳನ ರಾಶಿಯಾಗಿ ಮಾರ್ಪಡುವುದೋ, ವಜವು ಹೇಗೆ ಗಾಜಿನ ತುಂಡಾಗುವದೋ, ಆಗ್ನಿ ಕಣಗಳು ಹೇಗೆ ಇದ್ದಲಿನ ತುಂಡುಗಳಾಗುವವೋ, ಇವು ಗಳನ್ನು ನೋಡಲೆಳಸಿದರೆ ನಮ್ಮ ವರಮೇಲೆ ಒಂದುಸಾರಿ ದೃಷ್ಟಿಯನ್ನು ಪ್ರಸರಿಸಿರಿ. ಆನಂ ಪರಹಿತಕಾಗಿಯೆ | ನೋವುಗಳಂ ಗಣಿಸದೆಯ್ಲಿ ಪರಮಂಡಲದೊಳ್ | ತೀವಿದಜನದಿಂದ ಪಕೃತಿ | ಗೈವುತ್ತಂ ತನುವನುಳಿದನವನೇ ಮಾನ್ಯಂ ||
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.