ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಳನ್ನು ಯಾರಾದರೂ ಪ್ರಾರ್ಥನಾಮಂದಿರದಲ್ಲಿ ಕರ್ಣಾನಂದ ಉಂಟಾಗುವಂತೆ ರಾಗಲಯ ಸಹಿತವಾಗಿ ಹಾಡಿದರೆ ಅದಕ್ಕೆ ತುಂಬಾ ಸಂತೋಷಿಸಿ ಪರವಶನಾಗಿ ಆ ಹಾಡುಗಾರನನ್ನು ಅಪ್ಪಿಕೊಳ್ಳುತ್ತಲಿದ್ದನು. ನಂಬುಗೆಯೆಂಬುದು ದೊಡ್ಡ ಪದಾರ್ಥವು. ಹದಿನಾಲ್ಕು ವರುಷದ ಪ್ರಾಯದ ಮೊದ ಲುಗೊಂಡು ಅಯ್ಯತ್ತೊಂಬತ್ತನೆಯ ವರುಷ ವಯಸ್ಸಿನವರೆಗೆ ಈತನು ಎಷ್ಟು ಕಷ್ಟಗಳನ್ನು ಅನುಭವಿಸಿದರೂ, ಎಂತಹ ತೊಂದರೆಗಳಿಗೆ ಸಿಲುಕಿದರೂ, ಅವುಗಳಿಗೆ ಸ್ವಲ್ಪವೂ ಹೆದರದೆ ಕಾ ಕ್ಯಾಚರಣೆಯಲ್ಲಿ ತುಂಬ ದೃಢಸಂಕಲ್ಪನಾಗಿದ್ದನು, ಅದ್ವಿತೀಯನಾದ ಪರಮೇಶ್ವರನಲ್ಲಿ ಆತನಿಗಿರುವ ದೃಢವಾದ ನಂಬಿಕೆಯೇ ಇದಕ್ಕೆ ಕಾರಣವು, ಬಾಲ್ಯದಿಂದ ಮರಣ ಕಾಲದ ತನಕ ತನ್ನ ಕಷ್ಟಗಳಲ್ಲಿಯ ಸುಖಗಳಲ್ಲಿಯೂ ಆಪತ್ತುಗಳಲ್ಲಿಯೂ ರೋಗಾದಿಗಳಿಂದ ಹೀ ಡಿಸಲ್ಪಟ್ಟಿರುವಾಗಲೂ, ಆರೋಗ್ಯದಲ್ಲಿದ್ದಾಗಲೂ, ಸರ್ವಕಾಲಗಳಲ್ಲಿಯ ಅನಿಷ್ಕಳಂಕಸರ ಬ್ರಹ್ಮವನ್ನು ಮರೆಯದೆ, ಧ್ಯಾನಿಸುತ್ತಿದ್ದನು. ಈ ನಂಬಿಕೆಯೆಂಬುದು ಸ್ವದೇಶದಲ್ಲಿದ್ದಾ ಗಲೂ, ಪರದೇಶದಲ್ಲಿದ್ದಾಗಲೂ, ಸವನವಾಗಿಯೇ ಇತ್ತು, ರಾಮಮೋಹನನು ಪಾಷಂಡಿ ಗಳನ್ನೂ ನಾಸ್ತಿಕರನ್ನೂ ನೋಡಿ ತುಂಬಾ ವಿಚಾರಪಡುತ್ತಿದ್ದನು, ಆ ಕಾಲದಲ್ಲಿ ಕಲ್ಕತ್ತಾ ಪಟ್ಟಣದಲ್ಲಿ ಈ ತೆರದವರು ಅನೇಕರಿದ್ದರು. ಆದುದರಿಂದ ಅವರನ್ನು ನೋಡಿದಾಗಲೆಲ್ಲಾ ಧರ್ಮಸಹಾಯವಿಲ್ಲದಿದ್ದರೆ ಒಂದು ನಿಮಿಷಕಾಲವಾದರೂ ಸಾಧಕವಾಗಲರಿಯದ ಮನು ವ್ಯ ಜೀವಕ್ಕೆ ಈ ದುರ್ಮಾರ್ಗದ ಸಹವಾಸವು ಪರಮಾಧ” ಎಘಾತಹೇತುವೆಂದು ಭಯಪಡು ತಿದ್ದನು. ಒಂದಾವೃತ್ತಿ ಈತನ ಶಿಷ್ಯರಲ್ಲಿ ಒಬ್ಬನು ಒಬ್ಬನಾಸ್ತಿಕನ ವಿಷಯವಾದ ಸಂಭಾ ಷಣದಲ್ಲಿ ಅಂಗೈಯಭಾಷೆಯಲ್ಲಿ ಹೇಳುತ್ತ “ಮೊದಲಲ್ಲಿ ಈತನು (ತೀಸ್ಟ) ಆಸ್ತಿಕನಾಗಿ ದನು. ಆದರೂ ಈಗ (ಎತೀಸ್ತೆ) ನಾಸ್ತಿಕನಾಗಿರುವನು' ಎಂದನು, ಈ ಮಾತಿಗೆ ಕಾಮಮೋಹನನು ಕರುನಗೆ ನಕ್ಕು ಇನ್ನೂ ಕೆಲವು ದಿನಗಳಿಗೆ ಆತನು (ಬೀಸ್) ಪಶುವಾಗಿ ಮಾರ್ಪಡುವನೆಂದು ಶಬ್ದಾಲಂಕಾರ ಒದಗುವಹಾಗೆ ಪ್ರತ್ಯುತ್ತರವಿತ್ತನು. ಆ ಕಾಲದಲ್ಲಿ ರಾಮಮೋಹನನಿಗೆ ಠಾಕೂರ್‌ ಪ್ರಸನ್ನ ಕುಮಾರ, ಎಂಬ ಸ್ನೇಹಿತನಿ ದನು. ಆತನು ಕಲ್ಕತ್ತಾ ಪಟ್ಟಣದ ಹತ್ತಿರ ಇರುವ ಒಂದು ಹಳ್ಳಿಯ ನಿವಾಸಿ. ಅವನು ಆಗಾಗ ರಾಮಮೋಹನನೊಡನೆ ಧರವನ್ನು ಕುರಿತು ಹಲವು ಬಗೆಗಳಲ್ಲಿ ಪ್ರಶ್ನೆಗಳನ್ನು ಮಾಡಿ ತೃಪ್ತಿಕರವಾದ ಉತ್ತರಗಳನ್ನು ಪಡೆಯುತ್ತಿದ್ದನು, ಆತನ ಸ್ವಾಭಾವಿಕವಾದ ಪಾಂಡಿತ್ಯಕ್ಕೂ ಧರ್ಮಸಂದೇಹಗಳನ್ನು ತಿಳಿದುಕೊಳ್ಳುವುದರಲ್ಲಿ ಇರುವ ಆಸಕ್ತಿಗೂ ರಾಮಮೋಹನನು ಸಂತೋಷಿಸಿ, ಆತನನ್ನು ಹಳ್ಳಿಯ ತತ್ವಜ್ಞಾನಿ' ಎಂಬ ಹೆಸರಿನಿಂದ ಕರೆಯುತ್ತಾ ಬಂದನು. ಮರ್ಯಾದೆಯ ಕುಟುಂಬಕ್ಕೆ ಸೇರಿದ ಬಡಬ್ರಾಹ್ಮಣನೊಬ್ಬನು ಪ್ರತಿದಿನವೂ ಪ್ರಾ ರ್ಥನೆಯಕಾಲಕ್ಕೆ ಸರಿಯಾಗಿ, ಮಂದಿರಕ್ಕೆ ಬಂದು ಅಲ್ಲಿ ಬೋಧಿಸಲ್ಪಡುವ ಉಪದೇಶಗ ಳನ್ನು ಕೇಳುತ್ತಲಿದ್ದನು. ಒಂದುವೇಳೆ ಇವನು ತನಗೆ ಧರಿಸಲು ಒಳ್ಳೆಯ ಉಡುಪುಗಳಿಲ್ಲ ಎಂದು ಕೆಲವುದಿನಗಳ ತನಕ ಮಂದಿರಕ್ಕೆ ಬರಲಿಲ್ಲ, ರಾಮಮೋಹನನು ಈ ವಿಷಯವನ್ನು