ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩6 ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ತಿಳಿದು ಅತನ ವಿಷಯದಲ್ಲಿ ಕೃತಜ್ಞನಾಗಿರತಕ್ಕದ್ದು ಹಿಂದೂದೇಶಸ್ಥನಾದ ಪ್ರತಿಯೊಬ್ಬ ಮನು ವ್ಯನಿಗೂ ಕರ್ತವ್ಯವಾಗಿರುವುದು. ಧೈದ್ಯವೆಂದರೆ ಈತನದೇ ಮಹಾಧೈರವು, ಇಂಗ್ಲೆಂಡಿಗೆ ಹೊರಡುವುದಕ್ಕಾಗಿ ಪ್ರಯ ೯೧ಮಾಡುವಾಗ ತನ್ನ ಕಿರಿಯಮಗನಾದ ರಾಮಪ್ರಸಾದನೆಂಬ ಬಾಲಕನು ಅಪ್ಪಾ ! ನಮ್ಮ ನ್ನು ಬಿಟ್ಟು ಎಲ್ಲಿಗೆ ಹೊರಡುವೆ ? ಎಂದು ಕನಿಕರವುಂಟಾಗುವಂತೆ ಅಳ ತೊಡಗಿದನು, ಇದ ರಿಂದ ಅವನ ಮನಸ್ಸು ಸ್ವಲ್ಪವಾದರೂ ಚಲಿಸಲಿಲ್ಲ, ತುಂಬಾ ಧೈರ್ಯದಿಂದ ಸಾಕು ಸಾಕು ! ಗಂಡಸಾಗಿ ಹುಟ್ಟಿ ಅಳುವೆಯಾ ? ಎಂದು ರಾಮಮೋಹನನು ಆ ಬಾಲಕನನ್ನು ಸಂತೈಸಿದನು. ಈತನು ಸ್ವಾತಂತ್ರ , ನನ್ನು ಬಹಳವಾಗಿ ಪ್ರೀತಿಸುತ್ತಾ ಅಲ್ಪವಿಷಯಗಳನ್ನು ತಿರ ಸ್ಕರಿಸುವ ಸ್ವಭಾವವುಳ್ಳವನಾಗಿದ್ದನು, ಕಲ್ಕತ್ತಾ ಪಟ್ಟಣದಲ್ಲಿರುವ ಕೈ ಸ್ತ ಮತಬೋಧಕ ರಿಗೆಲ್ಲಾ ಮುಖ್ಯಸ್ಥನಾಗಿದ್ದ ಒಬ್ಬ ಆ೦ಗ್ಗೇಯನು ಕ್ರಮಕ್ರಮವಾಗಿ ರಾಮಮೋಹನನ ಸ್ನೇಹವನ್ನು ಸಂಪಾದಿಸಿ ಆತನಿಗೆ ಘನತೆಯನ್ನಿತ್ತು ತನ್ನ ಮತಕ್ಕೆ ಸೇರಿಸಿಕೊಳ್ಳಬೇಕೆಂದು ಪ್ರಯತ್ನಿಸಿದನು. ರಾಮಮೋಹನನು ಈ ವಿಷಯವನ್ನು ತಿಳಿದು ಆತನ ಅಯೋಗ್ಯತೆಗೆ ಅಸಸ್ಯವನ್ನು ತೋರ್ಪಡಿಸುತ್ತಾ ತದನಂತರ ಯಾವಾಗಲೂ ಅವನ ದರ್ಶನವನ್ನು ಅಪೇಕ್ಷಿ ಸದೆ ತಿರಸ್ಕರಿಸಿದನು, ಈತನ ಹೃದಯವು ಸ್ವಭಾವವಾಗಿ ತುಂಬಾ ಧೈರ್ಯವಾಗಿಯೂ ಸೈರಣೆಯಳ್ಳದ್ದಾಗಿಯೂ ಇತ್ತು, ಒಂದುಸಾರ ಕಲ್ಕತ್ತೆಯಲ್ಲಿರುವ ಭವಾನೀಕರಣ, ನೀಲ ಮುನಿ ಎಂಬಿಬ್ಬರು ಬುದ್ಧಿ ಹೀನರು ರಾಮಮೋಹನನಿಗೆ 'ಸುಖವೂ ಕಷ್ಟವೂ ಪ್ರಾಪ್ತವಾ ದಾಗ ಆತನಿಗೆ ಸಂತೋಷವಿಪಾದಗಳುಂಟಾಗುವ ವೋ ? ಇಲ್ಲಿ ? ಆತನ ಬ್ರಹ್ಮ ಜ್ಞಾನ ವನ್ನು ಪರೀಕ್ಷಿಸೋಣ ಎಂದು ಆಲೋಚಿಸಿ ಕೃಷ್ಣನಗರದಲ್ಲಿ ಉದ್ಯೋಗದಲ್ಲಿದ್ದ ನಿನ್ನ ಮ ಗನು ವ್ಯತಿಹೊಂದಿದನೆಂದು ಒಂದು ಪತ್ರವನ್ನು ಬರೆದು ಅದನ್ನು ರಾಮಮೋಹನನ ಕೈಗೆ ಕೊಡಬೇಕೆಂದು ಒಬ್ಬ ಆಳನ್ನು ನೇಮಿಸಿ, ಆ ಮನುಷ್ಯನು ಈತನ ಹತ್ತಿರಕ್ಕೆ ಬರುವುದಕ್ಕೆ ಮುಂಚೆಯೇ ತಾವ ಈತನ ಬಳಿಯಲ್ಲಿ ಹೋಗಿ ಕುಳಿತಿದ್ದರು. ತರುವಾಯ ಆ ಆಳು ತಾನು ಕೃಷ್ಣನಗರ ದಿಂದ ಬಂದೆನೆಂದು ಹೇ ಆ ಪತ್ರವನ್ನು ತಂದುಕೊಟ್ಟನು. ಆ ಪತ್ರವನ್ನೋದಿ ಕೊಂಡು ತನ್ನಲ್ಲಿ ತಾನು ಏನು ಯೋಚಿಸಿದನೋ ತಿಳಿಯದು, ಆಮೇಲೆ ಐದು ನಿಮಿಷಗಳ ತನಕ ಆಕಾಶದಕಡೆ ನೋಡುತ್ತಿದ್ದು ಮರಳಿ, ಎಂದಿನಂತೆ ತಾನು ಅದುವರೆಗೆ ಮಾಡುತ್ತಿದ್ದ ಕೆಲಸವನ್ನೇ ಮಾಡುತ್ತಾ ಕುಳಿತುಕೊಂಡನು. ಈ ಅಸಮಾನ್ಯ ಸ್ಥಿತಿಯನ್ನು ಕಣ್ಣಾರೆ ಕಂಡ ಆ ಪರೀಕ್ಷಕರಿಬ್ಬರೂ ಈತನು ಸಾಧಾರಣ ಪುರುಷನಲ್ಲವೆಂದು ತಿಳಿದು ಆತನ ಪಾದ ಗಳಮೇಲೆ ಬಿದ್ದು ತಮ್ಮ ತಪ್ಪುಗಳನ್ನು ಬಿನ್ನವಿಸಿ ಕ್ಷಮೆ ಬೇಡಿಕೊಂಡರು. ಸಂಘಸಂಸ್ಕರಣವಿಷಯದಲ್ಲಿ ಈತನ ಮನಸ್ಸಿನಲ್ಲಿ ದೃಢ'ಲಕಲ್ಪವೇ ಇರುತ್ತಿದ್ದಿತು. ಈತನು ಮನೋವಾಕ್ಕಾಯಕರ್ಮಗಳಲ್ಲಿಯೂ ಏಕರೀತಿಯಾಗಿದೆ. ಇದನ್ನು ವಿಗ್ರಹಾ ಕಾಧನೆಯ, ತನಗೆ ಸಮ್ಮತವಲ್ಲವಾದುದರಿಂದ ಎಂತಹ ಸ್ನೇಹಿತರ ಮನೆಗಳಲ್ಲಿಯೂ ಉತ್ಸವಾದಿ