ರಾಜಾರಾಮಮೋಹನರಾಯರ ಜೀವಿತ ಚರಿತ್ರೆ, ೧೭ ಗಿ ಪಡೆದನು, ಈ ಕಾರಣದಿಂದಲೆ ಡಿಗ್ನಿಯವರು ಯಾವ ಡಿಸ್ನಿ ಕ್ಷಿಗೆ ವರ್ಗವಾಗಿ ಹೋದರೂ ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸಿ, ರಾಮಮೋಹನನನ್ನೇ ತಮ್ಮ ಬಳಿಗೆ ಕರೆಯಿಸಿಕೊಳ್ಳು ತಿದ್ದರು. ಈತನು ಹೊಸಮಂಡಲಕ್ಕೆ ಪ್ರಯಾಣಮಾಡುವಾಗ ಮೊದಲಿದ್ದ ಸ್ಥಳದ ಜನ ರೆಲ್ಲ ಬಹಳವಾಗಿ ಚಿಂತೆಗೊಂಡು, ಆತನ ಉಪಕಾರದ ಕೃತಜ್ಞತೆಗಾಗಿ ಅವನನ್ನು ವಂದಿ ಸುತ್ತಾ, “ನಮಗೆ ಇಂತಹ ದಣಿ ಸಿಕ್ಕಲಾರನು' ಎಂದು ಹೇಳಿಕೊಳ್ಳುತ್ತಿದ್ದರು, ಇದೂ ಅಲ್ಲದೆ ರಾಮಮೋಹನನ ಮೇಲೆ ಮತ್ತೊಂದು ದೋಷವನ್ನು ಹೊರಿಸಿ ದ್ದರು. ಇವನು ವಿಗ್ರಹಾರಾಧಕರಲ್ಲಿಯೂ, ಪೂರ್ವಾಚಾರ ಪರಾಯಣರಲ್ಲಿಯೂ ವಿರೋ ಧಿಸುತಿದ್ದುದಲ್ಲದೆ, ದ್ವೇಷದಿಂದ ಕಲಹಕ್ಕೆ ಕಾಲುಕೆರೆಯುತ್ತಿದ್ದನೆಂದು ಹೇಳುತ್ತಿದ್ದರು. ಆದರೆ ತಮ್ಮ ಇಷ್ಟಕ್ಕೆ ವಿರೋಧವಾದ ಅಂಶಗಳಿಗೆ ಅನೇಕ ಆಧಾರಗಳನ್ನು ತೋರಿಸಿ ಹೇಳುವ ಪ್ರತಿಕಕ್ಷಿಗಳು ಇಂತಹ ದೋಷಾರೋಪಣೆ ಮೂಡುತ್ತಿರುವುದು ಏನೂ ಆಶ್ಚರ್ಯ ಕರವಲ್ಲವು. ಈತನು ಉದ್ಯೋಗವನ್ನು ಬಿಟ್ಟು, ತನ್ನ ಸ್ಥಳಕ್ಕೆ ಸೇರಿ, ಮತವಿಷಯವಾದ ಉಪ ನ್ಯಾಸಗಳನ್ನು ಮಾಡುತ್ತ, ಪೂರ್ವಾಚಾರಗಳನ್ನು ಮಾರದೆ ನಡೆಸುವವರಿಗೆ ಶತ್ರುವಾಗಿ ಇರುವ ಕಾಲದಲ್ಲಿಯೇ ಇವನ ಹಿರಿಯಮಗನಾದ ರಾಧಾಪ್ರಸಾದನಿಗೆ ವಿವಾಹವು ತಟ ಸ್ಥಿಸಿತು. ಈ ಶುಭಕಾರ್ಯಕ್ಕೆ ವಿಘ್ನ ವನ್ನಾಚರಿಸಬೇಕೆಂದು ಇವನ ವಿರೋಧಿಗಳಲ್ಲಿ ಕೆಲವರು ಯತ್ನಿಸಿದರು, ಆದರೆ ಅವುಗಳೊಂದೂ ಸಫಲವಾಗಲಿಲ್ಲ, ಹುಗ್ಗಿ ಡಿಸ್ನಿ ಕ್ರಿ ನಲ್ಲಿ ಒಬ್ಬ ಗೃಹಸ್ಥನ ಮಗಳನ್ನು ಇವನ ಮಗನಿಗೆ ಕೊಟ್ಟು ಮದುವೆ ಮಾಡಿದರು. ಮಗನ ಮದುವೆಯಾದಮೇಲೆ ರಾಮಮೋಹನನಿಗೆ ಕೆಲವು ತೊಂದರೆಗಳು ಸಂಭವಿ ಸಿದುವು, ಶಾಸ್ತ್ರ ಜ್ಞಾನದಿಂದ ಕೂಡಿದ ಇವನ ವಾದಗಳಿಗೆ ಶಾಸ್ತ್ರಸಮ್ಮ ತವಾದ ಉತ್ತರವನ್ನು ಕೊಡಲಾರದೆ ತಮ್ಮ ಪಕ್ಷವು ಸೋತುಹೋಗುತ್ತ ಬಂದ ದರಮೇಲೆ ಕೆಲ ವರು ದುರಾತ್ಮರು ಇಪ್ಯಾ೯ಸುಯೆಗಳನ್ನೇ ಮುಖ್ಯವಾಗಿ ಮಾಡಿಕೊಂಡು, ಒಂದು ಗುಂಪಾಗಿ ಸೇರಿ ಕೃಷ್ಣನಗರದ ಬಳಿಯ ರಾಮನಗರದ ನಿವಾಸಿಯಾದ ರಾಂಜೈಭಟ್ ಚಾಲನೆಂಬವನ ನಾಯಕತ್ವದಿಂದ ರಾಮಮೋಹನನು ಎಲ್ಲಿ ಕಾಣಿಸಿದರೆ ಅಲ್ಲೆಲ್ಲ ಅವ ನನ್ನು ಬೈಯುತ್ತಾ ಅವನ ಮನೆಯ ಸುತ್ತಲೂ ಸೇರಿ ಕೇಕೇ ಹಾಕುತ್ತ, ಎಲುಬು ಮುಂತಾದ ಹೇಸಿಗೆಯ ವಸ್ತುಗಳನ್ನು ಚೆಲ್ಲುತ್ತ, ಅವನ ಮನಸ್ಸಿಗೆ ಕಳವಳವನ್ನುಂಟು ಮಾಡುತ್ತಾ ಬಂದರು, ಆದರೆ ಸತ್ಯವೇ ಜಯವೆಂದು ನಂಬಿ, ತನ್ನ ಉದ್ದೇಶವನ್ನು ಇಷ್ಟು ಮಾತ್ರದಿಂದಲೇ ಬಿಟ್ಟು ಬಿಡುವ ಸ್ವಭಾವವು ಈ ಕಥಾನಾಯಕನಲ್ಲಿಲ್ಲದುದರಿಂದ, ಕಷ್ಟಗಳು ಎಷ್ಟು ವಿಧಗಳಿಂದ ತೊಂದರೆಪಡಿಸಿದರೂ ಅವುಗಳನ್ನೆಲ್ಲ ಸಹಿಸಿಕೊಂಡು, ಇದು ಏನೆಂದು ಒಂದುಸಲವಾದರೂ ಅವರನ್ನು ನಿಂದಿಸದೆ ಸುಮ್ಮನಿದ್ದನು, ಆನೀಚರು ಕೆಲವು ದಿನಗಳತನಕ ಹೀಗೆ ಮಾಡಿಮಾಡಿ, ಬೇಸತ್ತು ಕೊನೆಗೆ ತಮಗೆ ತಾವೇ ಸುಮ್ಮನಾದರು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.