೨೨ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ದ್ದುವು, ಕೆಲವರು ತಮ್ಮ ವ್ಯವಹಾರಗಳಲ್ಲಿ ಆಲೋಚನೆ ಗಳನ್ನು ಕೇಳಲಿಕ್ಕೆ ಅವನ ಬಳಿಗೆ ಬರುತ್ತಿದ್ದರು. ಆದರೂ ಕೆವುದಿನಗಳು ಕಳೆದಮೇಲೆ ವಿಗ್ರಹಾರಾಧನೆಯು ಯುಕ್ತವಾ ದುದೆಂಬ ಪಕ್ಷದವರ ಆರ್ಭಟಗಳಿಗೆ ಅಂಜಿದ ಕೆಲವರು ಇವನ ಪಕ್ಷವನ್ನು ಬಿಟ್ಟು ಬಿಟ್ಟರೂ ದ್ವಾರಕಾನಾಧಠಾಕೂರ್, ರ ಜಾ ಕಾಳೇಶಂಕರಘೋ ಪಲ್, ಗೋಪೀನಾಧಮುನಪಿ ಮೊದ ಲಾದವರು ಈ ಪಕ್ಷವನ್ನು ಬಿ-3 ದೃಢಚಿತ್ತರಾಗಿ ಇವನೊಂದಿಗೆ ಕೆಲಸಮಾಡುತ್ತಿದ್ದರು. ರಾಮಮೋಹನನು ತನ್ನ ಧರ್ಮ ಪ್ರಚಾರಕ್ಕೆ ನಾಲ್ಕು ಪದ್ಧತಿಗಳನ್ನು ಏರ್ಪಡಿಸಿಕೊ ಳ್ಳುವುದು ಯುಕ್ತವೆಂದು ತಿಳಿದನು. ಅವುಗಳಲ್ಲಿ 1ನೆಯದು ವಾಗ್ರೂಪವಾದ ಬೋಧೆ ಮತ್ತು ವಾದ, 2ನೆಯದು ಪಾಠಶಾಲೆಯ ಸ್ಥಾಪನೆ, 3ನೆಯದು ಮಾಸಪತ್ರಿಕೆಯನ್ನೂ, ಪುಸ್ತಕಗಳನ್ನೂ ಪ್ರಚುರಗೊಳಿಸುವುದು 4ನೆಯದು ಸಮಾಜವಿರ್ಮಾಣ, ಇವುಗಳಲ್ಲಿ ಮೊ ದಲು ಪುಸ್ತಕ ಪ್ರಕಟನೆಯಲ್ಲಿ ಹೆಚ್ಚು ಶ್ರದ್ದೆಯನ್ನು ವಹಿಸಿ, 1815 ರಲ್ಲಿ ವೇದಾಂತಸೂತ್ರ ಗಳನ್ನು ಬಂಗಾಳಿ ಭಾಷೆಯಲ್ಲಿ ಬರೆದು ಮಾತೃಕೆಯೊಂದಿಗೆ ಪ್ರಚುರಿಸಿದನು, ಈ ಪುಸ್ತಕ ದಲ್ಲಿ ಮರುಭಾಗಗಳುಂಟು, ಮೊದಲನೆಯ ಭಾಗದಲ್ಲಿ ಪೀಠಿಕೆಯ ಎರಡನೆಯದರಲ್ಲಿ ಉಪೋದ್ಘಾತವೂ, ವರನೆಯದರಲ್ಲಿ ಭಾಷಾಂತರಮಾಡಲ್ಪಟ್ಟ ಗ್ರಂಧವೂ ಬರೆಯಲ್ಪಟ್ಟು ವು. ಉಪೋದ್ಘಾತದಲ್ಲಿ ಬ್ರಹೋಪಾಸಕರಿಗೆ ವಿರೋಧವಾಗಿ ವಾದಿಸುವವರ ಸಂದೇಹಗ ಳನ್ನು ತಿಳಿಸಿ ಅವುಗಳ ಪರಿಹಾರಕ್ಕಾಗಿ ಇದರಡಿ ಕಂಡಂತೆ ಸಮಾಧಾನಗಳನ್ನು ಬರೆದನು. 1. ಪರಮೇಶ್ವರಸು ನಿರಾಕಾರನೆಂದು ಭಾವಿಸಿಯೇ ಧ್ಯಾನಮಾಡಬಹುದು, 2, ವಿಗ್ರಹಗಳೂ, ಪಠಗಳೂ ಇವುಗಳೊಂದೂ ಇಲ್ಲದೇನೇ ನಾವು ಆತನನ್ನು ಧ್ಯಾ ನಿಸತಕ್ಕದ್ದು. 3 ಈಶ್ವರಸಾಧನೆಗಾಗಿ ಹಲವು ಮಾರ್ಗಗಳುಂಟು, ಆದರೆ ನಮ್ಮ ಅಂತರಾತ್ಮಕ್ಕೆ ಯಾವಮಾರ್ಗವು ಯುಕ್ತವೆಂದು ತೋರುವುದೋ ಅದನ್ನೇ ನಾವು ಅವಲಂಬಿಸತಕ್ಕುದು. 4 ಬ್ರಹ್ಮಜ್ಞಾನಿಗೆ ಯುಕ್ತಾಯುಕ್ತ ವಿವೇಚನಾಶಕ್ತಿಯಿಲ್ಲವೆಂದು ತಿಳಿಯುವುದು ತಪ್ಪಾಗಿಯ ಕಲ್ಪಿತವಾಗಿಯೂ ಇರುವುದು. 5 ವಿಗ್ರಹಾರಾಧನೆಯು ಪಾಮರರಿಗೋಸ್ಕರ ಏರ್ಪಟ್ಟು ದೆಂದು ಪುರಾಣಗಳಲ್ಲಿ ಯ, ತಂತ್ರಗಳಲ್ಲಿಯೂ ಹೇಳಲ್ಪಟ್ಟಿದೆ. ಆದರೆ ಅಂತವರಿಗೆ ಸುದಾ ಕೇವಲ ಈಶ್ವರೋ ಪಾಸನೆಯೇ ಸುಲಭವಾಗಿಯೂ, ಫಲಕಾರಿಯಾಗಿಯೂ, ಇರುವುದು. 6 ನಮ್ಮ ಮತಗ್ರಂಧಗಳನ್ನು ಯಾವಭಾಷೆಯಲ್ಲಿಯಾದರೂ ಬರೆಯಬಹುದು ; ಹೀಗೆ ಮಾಡುವುದರಿಂದ ಯಾವ ದೋಷವೂ ಇಲ್ಲ. ವೇದಾಂತಸೂತ್ರಗಳು ಬಂಗಾಳಿ ಭಾಷೆಯಲ್ಲಿ ಮಾತ್ರವೇ ಇದ್ದಲ್ಲಿ ಅವು ಆಭಾಷೆಯ ನರಿಯದವರಿಗೆ ದುರವಗಾಹನಗಳಾಗುವುದೆಂದು ಯೋಚಿಸಿ ಹಿಂದೀ ಭಾಷೆಯಲ್ಲಿಯೂ ಈ ಗ್ರಂಥವನ್ನು ಬರೆದನು. ತರುವಾಯ 1918 ರಲ್ಲಿ ಇದನ್ನು ಇಂಗ್ಲಿಷಿನಲ್ಲಿ ಬರೆದನು, ಇದರ ಪೀಠಿಕೆಯಲ್ಲಿ ಹಿಂದೂ ಮತದ ಮೇಲೆ ಹಲವು ದೋಷಾರೋಪಣೆಗಳನ್ನು ಮಾಡುವ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.