ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ | ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ನಿಂದ ಸಂಬೋಧಿಸಲ್ಪಟ್ಟನು, ನಾಲ್ಕು ದಿಕ್ಕುಗಳಲ್ಲಿಯೂ ಪ್ರಚಾರದಲ್ಲಿದ್ದ ಈ ಪತ್ರಿಕೆ ಯನ್ನು ಮದ್ರಾಸ್‌ ನಿವಾಸಿಯಾದ ಶಂಕರಶಾಸ್ತಿ ಯೆಂಬ ಪಂಡಿತನು ಓದಿ, ವೇದಗಳ ಧೈಯ ಉಪನಿಷತ್ತುಗಳಲ್ಲಿಯೂ ಹೇಳಲ್ಪಟ್ಟಿರುವ ನಿರಾಕಾರೋಪಾಸನವನ್ನು ನಾವು ಕೂಡ ಅಂಗೀಕರಿಸುವೆವು; ಆದರೂ ಪ್ರಕೃತದಲ್ಲಿ ಈ ವಿಷಯವನ್ನು ಸಂಗ್ರಹಿಸಿ, ಒಂದು ಹೊಸಮತವನ್ನು ಸ್ಥಾಪಿಸುವುದು ನ್ಯಾಯವಲ್ಲವೆಂತಲೂ, ಒಬ್ಬ ರಾಜನ ಬಳಿಗೆ ಕಾಲ್ಯಾ ರ್ಥಿಗಳಾಗಿ ಹೋಗತಕ್ಕವರು ಹಲವು ಸಣ್ಣ ಉದ್ಯೋಗಸ್ಥರ ನಲಕದಿಂದಲ್ಲದೆ ರಾಜನ ದರುಶನವನ್ನು ಹೊಂದಲಾರರೆಂಬಂತೆ ನಿರ್ಗುಣೋಪಾಸನವನ್ನು ಮಾಡಲಿಕ್ಕೆ ಮೊದಲು ಸಾಕಾರ ರೂಪವಾದ ಬಹುವಿಧ ದೇವತಾರಾಧನೆಯು ಅವಶ್ಯ ಕರ್ತವ್ಯವೆಂತಲೂ, ಒಂದು ಪತ್ರವನ್ನು ಬರೆದು ಅದೇ ಪತ್ರಿಕೆಯ ಮೂಲಕ ತಿಳಿಸಿದನು, ರಾಮಮೋಹನ ರಾಯನು ಇದನ್ನು ನೋಡಿ ' ನಾನು ಹೊಸಮತವನ್ನು ಸ್ಥಾಪಿಸಲಿಕ್ಕೆ ಪ್ರಯತ್ನಿ ಸಲೇ ಇಲ್ಲವೆಂತಲೂ, ನಮ್ಮ ಪೂರ್ವಿಕರಿಂದ ಅವಲಂಬಿಸಲ್ಪಟ್ಟು ಪ್ರಸ್ತುತಕಾಲದಲ್ಲಿ ನಮ್ಮ ಅಜ್ಞಾನದ ದೆಸೆಯಿಂದ ಮೂಲೆಗೆ ಬಿದ್ದಿರುವ ಪುರಾತನ ಮತವನ್ನೆ ಸ್ವೀಕರಿಸಬೇಕೆಂದು ಪ್ರಾರ್ಥಿಸುವೆನೆಂತಲೂ, ವಿಗ್ರಹಾರಾಧನೆಯು ಸತ್ರ ನಿಷಿದ್ಧವೆಂದು ವೇದಗಳಿಂದಲೂ ಉಪನಿಷದ್ವಾಕ್ಯಗಳಿಂದಲೂ ಸ್ಪಷ್ಟ ಪಡುತ್ತಿದ್ದರೂ, ಪ್ರತಿಪಕ್ಷದವರು ನನ್ನ ವಾದಕ್ಕೆ ಅಪಾರ್ಥ ವನ್ನು ಕಲ್ಪಿಸುವುದಕ್ಕಾಗಿ ನಾನು ಮಾಡುತ್ತಿರುವಯವು ನೂತನ ಮತ ನಿರ್ಮಾಣಕ್ಕೆಂದು ಜನರಿಗೆ ಭ್ರಮೆಯನ್ನು ಹುಟ್ಟಿಸುತ್ತಿರುವರೆಂತಲೂ, ಸರ್ವಜ್ಞನಾದ ಪರಮೇಶ್ವರನೊಂದಿಗೆ ವಿತಜ್ಞನಾದ ರಾಜನನ್ನು ಹೋಲಿಸುವುದು ಯುಕ್ತವಲ್ಲವೆಂತ ಲೂ, ' ಅನೇಕ ಹೇತುಗಳಿಂದ ಚರ್ಚಿಸಿ, ತನ್ನ ಪ್ರತ್ಯುತ್ತರವನ್ನು ಪ್ರಕಟಿಸಿದನು. ಇದ ರಮೇಲೆ ಶಂಕರಶಾಸ್ತ್ರಿಯು ಯಾವ ಉತ್ತರವನ್ನೂ ಬರೆಯಲಿಲ್ಲ. ತರುವಾಯ ಕತ್ರೆಯಲ್ಲಿ ಒಬ್ಬ ಬ್ರಾಹ್ಮಣನು ರಾಮಮೋಹನನ ಧರ್ಮ ಸಿದ್ಧಾಂ ತಗಳಿಗೆ ವಿರೋಧವಾಗಿ ವೇದಾಂತಚಂದ್ರಿಕೆ ಎಂಬ ಪುಸ್ತಕವನ್ನು ಪ್ರಚುರಿಸಿದನು, ರಾಮ ಮೋಹನನು ಅದರಲ್ಲಿನ ಆಕ್ಷೇಪಣೆಗಳಿಗೆ ಸಮಾಧಾನಗಳನ್ನು 1877 ರಲ್ಲಿ ಬರೆದನು. ಇವ ರಿಬ್ಬರೂ ಇಂಗ್ಲಿಷ್ ಭಾಷೆಯಲ್ಲಿಯೇ ಚರ್ಚಿಸತೊಡಗಿದರ., ರಾಮಮೋಹನನು ಈ ಚ ರ್ಚೆಯಲ್ಲಿ ಪುರಾತನ ಸಿದ್ದಾಂತಗಳಿಂದಲೇ ಪ್ರಮಾಣಗಳನ್ನು ತೋರಿಸಿ, ಪರಮೇಶ್ವರನು ನಿರಾಕಾರನೆಂದು ದೃಢಪಡಿಸಿದುದಲ್ಲದೆ, ಅನಂತವಾದ ವಸ್ತುವಿಗೆ ಒಂದುರೂಪವನ್ನೇ ರ್ಪಡಿಸುವುದು ಅಸಂಭವವೆಂದು ಹಲವು ಯುಕ್ತಿಗಳಿಂದ ಸಾಧಿಸಿದನು. ಈಶ್ವರನಿಗೆ ರೂಪಧಾರಣೆಯೇ ಇಲ್ಲದೆ ಇದ್ದಲ್ಲಿ ಪ್ರಸಂಚರೂಪದಲ್ಲಿರುವು ದು ಹೇಗೆ ? ಆತನು ವಿಶ್ವವೆಂಬರೂಪದಿಂದ ಪ್ರಕಾಶಿಸುತ್ತಿರುವ ನೆಂದು ಹೇಳುತ್ತೀರಲ್ಲವೇ ? ವಿಶ್ವವನ್ನೇ ರಸವಾಗಿ ಧರಿಸುತ್ತಿರುವ ಅವನು ಒಂದುವೇಳೆ ಇತರ ರೂಪವನ್ನು ಏತಕ್ಕೆ ಧರಿಸ ಬಾರದು ಎಂದು ಕೆಲವರು ಕೇಳಿದರು, ಅದಕ್ಕೆ ರಾಮಮೋಹನನು ಹಗ್ಗ ದಲ್ಲಿ ಸರ್ಪ ವೆಂಬ ಭ್ರಾಂತಿ ಹುಟ್ಟುವುದು ಸಹಜವಾದರೂ ಆ ಹಗ್ಗವೇ ಧ್ರುವವಾಗಿ ಸರ್ಪವು ಅಸತ್ಯ