ರಾಜಾರಾಮಮೋಹನರಾಯರ ಜೀವಿತ ಚರಿತ್ರೆ. ೨೭ ಬ್ರಹ್ಮಪಾಸನೆ ಮಾಡುವ ಕ್ರಮ ಯಾವುದು ? ಎಂಬ ಬಗ್ಗೆ 12 ಪ್ರಶ್ನೆಗಳನ್ನು ಹಾಕಿ ಪ್ರತಿ ಒಂದಕ್ಕೂ ಕ್ರಮವಾಗಿ ಉತ್ತರಗಳು ಬರೆಯಲ್ಪಟ್ಟಿವೆ. 5 ಪ್ರಾರ್ಥನಾ ಪತ್ರಿಕೆ-ಇದರಲ್ಲಿ ಸ್ವಜಾತಿ, ಅನ್ಯ ಜಾತಿ ಎಂಬ ವಿಚ್ಛೇದನೆಯನ್ನು ಕುರಿತು ಸ್ವಲ್ಪ ದೂರ ಚರ್ಚಿಸಿ, ಸಲ್ವರೂ ಸಹೋದರರೆಂಬರ್ಧವನ್ನು ಪ್ರತಿವಾದಿಸಿದೆ. 6 ಆತ್ಮಾನಾತ್ಮ ವಿವೇಕ-ಇದು ಶಂಕರಾಚಾರರಿಂದ ರಚಿಸಲ್ಪಟ್ಟಿದ್ದು, ರಾಮ ಮೋಹನನು ಬದನ್ನು ಒಂಗಾಳಿಭಾಷೆಯಲ್ಲಿ ಬರೆದನು. ಇದರಲ್ಲಿ ಸತ್ವ ಮತವೇದಾಂತಗಳೂ ವಿವರಿಸಲ್ಪಟ್ಟಿವೆ. 7 ಒಹೋಪಾಸನೆ-ಇದರಲ್ಲಿ ಬ್ರಹ್ಮನನ್ನು ಆರಾಧಿಸುವ ಕ್ರಮಗಳು ಹೇಳಲ್ಪ ಟಿವೆ. ಇವುಗಳಲ್ಲದೆ ಕೆಲವು ಉಪನಿಷತ್ತುಗಳು, ಗುರುಪಾದುಕೆ, ಪೋಲಕಿತಚಪೇಟಿಕಾ ಘಾತ, ಸೊರಸೂತ್ರಗಳು, ಶಂಕರಾಚಾರ್ ಕೃತವೇದಾಂತಸೂತ್ರ ಭಾಷ್ಯಾರ್ಧ, ಇನ್ನೂ ಕೆಲ ವು ಸಂಸ್ಕೃತಗ್ರಂಧಗಳನ್ನು ಹತನು ಬರೆದಿರುವನೆಂದು ಇವನ ಚರಿತ್ರೆಯನ್ನು ಬಂಗಾಳಿಭಾಷೆ ಯಲ್ಲಿ ಬರೆದಿರುವ ರಾಜನಾರಾಯಣಬೋಸ್ ಎಂಬಾತನು ಒದಿರುವನು. ಆದರೆ ಇವುಗ ಳಲ್ಲಿ ಕೆಲವು ಈಗ ಸಿಕ್ಕುವಂತೆ ಕಾಣಲಿಲ್ಲವು. ರಾಮಮೋಹನರಾಯನಿಂದ ಮಾಡಲ್ಪಟ್ಟ ಬ್ರಹ್ಮಜ್ಞಾನವಿಷಯವಾದ ಚರ್ಚೆಗಳು ವೇದವೇದಾಂತಗಳನ್ನು ತಿಳಿಯದೆ ಪುರಾಣಗಳನ್ನೂ ನ್ಯಾಯಶಾಸ್ತ್ರಗಳನ್ನೂ ಮಾತ್ರವೇ ಓದಿಕೊಳ್ಳುತಲಿದ್ದ ಆಗಿನ ಒ೦ಗಾಳ ರಾಜ್ಯದ ನವದೀಪ, ವಿಕ್ರಮಪರ, ಭಾಟ್ಟಾಡಾ, ತಿರ್ಬಿನಿ, ರ್ಸೆ ಷುಬಾಟಿ, ಮೊದಲಾದ ಪಟ್ಟಣಗಳಮಗೆ ಬಹಳ ಉಪಕಾರವಾಯಿತು. ಅದುವರೆಗೆ ಈ ವೇದವೇದಾಂತ ವಿಷಯದ ಚರ್ಚೆಯೇ ಇರಲಿಲ್ಲವೆಂದು ವಿದ್ವಾಂಸ ರೆಲ್ಲರೂ ಒಪ್ಪಿಕೊಂಡರು. ರಾಮಮೋಹನನ ಶಿಷ್ಯನೊಬ್ಬನು ತತ್ವಬೋಧಿನಿ ಎಂಬ ಪತ್ರಿಕೆಯಲ್ಲಿ ಹೀಗೆ ಬರೆದಿರು ವನು:- ಬಂಗಾಳದಲ್ಲಿ ವೇದದ ಚಚೆಯು ನಶಿಸಿ ಬಹು ದಿನಗಳಾದವು. ಹೀಗೆ ವೇದ ವೇದಾಂತ ಮಂತ್ರಗಳು, ಬ್ರಾಹ್ಮಣಗಳು, ಶ್ಲೋಕಗಳು, ಸೂತ್ರಗಳು, ಭಾಷ್ಯಗಳು ಮೊದಲಾದುವು ಸರ್ವತ್ರ ವ್ಯಾಪಿಸುವಿಕೆಯ , ಇವ್ರಗಳ ಮೂಲಕ ರಾಮಮೋಹನ ರಾಯನ ಬೃಹೋಪಾಸನೆಯು ಸ್ಥಾಪಿಸಲ್ಪಡುವಿಕೆಯೂ, ಇವುಗಳನ್ನು ನೋಡಿ, ಇದಕ್ಕೆ ಮುಂಚೆ ವಿಗ್ರಹಾರಾಧನೆ ಮಾಡಲಿಕ್ಕೆ ವೇದದಲ್ಲಿ ಸ್ಪಷ್ಟವಾದ ಅಂಗೀಕಾರವಿರುವುದೆಂದು ನಂಬುವ ಭಟ್ಟಾಚಾರ್ಯ, ಗೋಸ್ವಾಮಿ, ಮೊದಲಾದವರು ಆಶ್ಚರ್ಯಗೊಂಡರು. ಆದರೆ ರಾಮಮೋಹನನು ತನ್ನ ಗ್ರಂಧಗಳನ್ನು ಎಲ್ಲಾ ಕಡೆಯಲ್ಲಿಯೂ ವ್ಯಾಪಿಸುವಂತೆ ಮಾಡಿ, ಆ ಬಾಲಗೋಪಾಲರಿಗೆಲ್ಲ ವೇದ ವೇದಾಂತಗಳೆಂದರೆ ಇಂತವುಗಳೆಂದು ತಿಳಿಯಪಡಿಸಿ, ಪ್ರತಿಪಕ್ಷದವರ ಆರ್ಭಟಗಳನ್ನಣಗಿಸಿಬಿಟ್ಟನು. ಈ ಚರ್ಚೆಯಿಂದ ಬಂಗಾಳಿ ಭಾಷೆಯು ಈಡ ಅಭಿವೃದ್ಧಿ ಸ್ಥಿತಿಗೆ ಬಂದಿತು, ನಂ ಡಿತ ರಾಮಗತನ್ಯಾ ಯರತ್ನನೆಂಬವನು ಬಂಗಾಳಿ ಪಸ್ತಕಭಾಂಡಾಗಾರವೆಂಬ ಹೆಸರಿನಿಂದ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.