ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ರ್೪ ಸಂಸ್ಕಾರವನ್ನೂ ಮಾಡಿದನು. ಹಾಗೆ ಮಾಡಿದುದರಿಂದಲೇ ಆದೇಶೀಯರು ಪ್ರಪಂಚದ ಲ್ಲಿನ ದೊಡ್ಡ ದೊಡ್ಡ ಭೂಭಾಗಗಳನ್ನು ಜಯಿಸುವುದಕ್ಕೂ, ಸ್ವಮತಧಮ್ಮವನ್ನು ಸ್ಥಾಪಿ ಸುವುದಕ್ಕೂ ಕಾರಣವಾಯಿತು, ಇಂಗ್ಲೆಂಡಿನಲ್ಲಿ ಮತದಲ್ಲಿ ದೃಢವಾದ ಅಭಿಮಾನವ ನ್ನುಳ್ಳ ವ್ಯೂರಿರ್ಟ ಬಣದವರು ರಾಜರ ಬಲವನ್ನು ತಗ್ಗಿಸಿ ಪ್ರಜಾ ಬಲವನ್ನು ಹೆಚ್ಚಿಸ ಲಿಕ್ಕೆ ಕಾರಣರಾದರು, ಮತ್ತು ಅಮೆರಿಕಾ ಖಂಡದ ಸಂಯುಕ್ತ ಸಂಸ್ಥಾನಗಳ ನಾಗರಿಕ ತೆಗೂ, ಅಭಿವೃದ್ಧಿಗೂ ಪ್ರಥಮದಲ್ಲಿ ಇವರಿಂದಲೇ ಬೀಚಹಾಕಲ್ಪಟ್ಟಿತು. ಕಳೆದ ಶತ ಮಾನದಲ್ಲಿ ತಾನು ಮಾಡುವ ಪ್ರತಿ ಒಂದು ಕೆಲಸಕ್ಕೂ ಮೊದಲಲ್ಲಿ ದೇವರ ಪ್ರಾರ್ಥನೆ ಯನ್ನು ಮಾಡಿ ಪ್ರಾರಂಭಿಸುವಷ್ಟು ಸರನು ಭಕ್ತಿಭಾವವನ್ನುಳ್ಳ ಜೋಸೆಸ' ಮೊಜನೀ' ಎಂಬಾತನೇ 'ಡ್ಯೂಟೀಸ್ ಆಫ್ ರ್ಮೆ' ಮೊದಲಾದ ಮನುಷ ಸ್ವಾತಂತ್ರಗಳನ್ನು ತಿಳಿಸುವ ಗ್ರಂಧಗಳನ್ನು ಬರೆದು ಪ್ರಜಾ ಸ್ವಾತಂತ್ರ್ಯವನ್ನೂ ಅವರ ಅಭಿವೃದ್ಧಿಯನ್ನೂ ಬೆಳಸಲಿಕ್ಕೆ ಪ್ರಧಮ ಕಾರಣನಾದನು, “ಯೋಡರ' ಫಾರರ' ” ಎಂಬ ಅಮೆಕಾಖಂಡ ವಾಸಿಯು ಮತಸಂಸ್ಕಾರಗಳ ಜತೆಯಲ್ಲಿ ಕೊಂಚ ಕೊಂಚ ಲೋಕ ವ್ಯವಹಾರಗಳ ಬದಲಾ ವಣೆಗಳಲ್ಲಿ ಕೂಡ ಜ್ಞಾನಪ್ರಕಾಶವನ್ನು ವ್ಯಾಪನಗೊಳಿಸಿರುವನು. ಮಹಾತ್ಮನಾದ ರಾಜಾರಾಮ ಮೋಹನರಾ ರವನ್ನು ಸುದಾ ಮೇಲೆ ಹೇಳಲ್ಪಟ್ಟವ ರೊಂದಿಗೆ ಹೋಲಿಸಬಹುದು. ಆತನು ಮತ ಸಂಸ್ಕಾರಗಳ ಜತೆಯಲ್ಲಿ ತನ್ನ ದೇಶದ ಇತರ ಲೋಪಗಳನ್ನೂ ರಾಜ್ಯಾಂಗ ಸಂಸ್ಕಾರಗಳನ್ನೂ ಕುತ್ತು ಬಹುಮಟ್ಟಿಗೆ ಪ್ರಯತ್ನಿಸಿ ಕೆಲಸ ಮಾಡಿದನೆಂದು ಹೇಳಿದರೆ ಅದು ಆರೈಕರ.ರಾಗಿಯ ಆಕ್ಷೇಪಣಿಯವಾಗಿಯೂ ಇರು ವದೆಂದು ಭಾವಿಸಲಾಗದು, ಏತಕ್ಕೆಂದರೆ ಮನುಷ್ಯನ ಜೀವಿತದಲ್ಲಿನ ಸಂಸ್ಕಾರವಿಷಯಗಳ ನೆಲ್ಲಾ ಒಂದರೊಂದಿಗೆ ಒಂದನ್ನು ತೆಗೆಸಿ, ಕೆಲಸ ಮಾಡದೆ ಯಾವುದಾದರೂ ಒಂದು ಭಾಗವನ್ನು ಮಾತ್ರ ತೆಗೆದು ಕೊಂಡು ಕೆಲಸಮಾಡಿದಲ್ಲಿ ಆ ಸಂಸ್ಕರಣವು ಸಂಸ್ಕಾರವೇ ಅಲ್ಲವು. ಮತವಿಷಯ ಸಂಸ್ಕರಣಗಳನ್ನು ಕುರಿತು ರಾಮಮೋಹನನು ಕತೆಯಲ್ಲಿದ್ದ ಕೊಂಡು ತನ್ನಿಂದ ಮಾಡಲ್ಪಡಬೇಕಾದ ಕೆಲಸಗಳನ್ನೆಲ್ಲಾ ಹೇಗೆಹೇಗೆ ನೆರ ವೇರಿಸಿದನೆಂಬು ದನ್ನು ಹಿಂದಿನ ಪ್ರಕರಣದಲ್ಲಿ ಸಂಗ್ರಹವಾಗಿ ಹೇಳಿರುವೆವು, ಈಗ ರಾಜಕೀಯ ಸಂಸ್ಕ ರಣಗಳನ್ನೂ ಇತರ ಸಂಸ್ಕಾರಗಳನ್ನೂ ಕುರಿತು ರಾಮಮೋಹನನು ಯಾವ ಯಾವ ಯತ್ನಗಳನ್ನು ಮಾಡಿದನೋ ಅವುಗಳನ್ನು ಈ ಪ್ರಕರಣದಲ್ಲಿ ವಿವರಿಸುವೆವು. ರಾಮಮೋಹನನು ಸಹಗಮನ ಸಂಘ ದುರಂಕಾರವನ್ನು ತೊಲಗಿಸುವುದರಲ್ಲಿಯೇ ತನ್ನ ಜೀವಮಾನದ ಬಹುಭಾಗವನ್ನು ವಿನಿಯೋಗಿಸಿದನು, ಸತ್ತು ಹೋದ ಪತಿಯ ಶವದೊಂ ದಿಗೆ ಬದುಕಿರುವ ಹೆಂಡತಿಯ ದೇಹವನ್ನು ಸುಟ್ಟುಬಿಕಿ ಅದು ತುಂಬ ಪಾತಿವ್ರತ್ಯವೆಂತ ಲೂ, ಅದರಿಂದ ಸ್ವರ್ಗಲೋಕದಲ್ಲಿ ಸತಿಪತಿಗಳಿಬ್ಬರೂ ಶಾಶ್ವತವಾದ ಸೌಖ್ಯವನ್ನನುಭವಿಸ. ವರೆಂತಲೂ ನಮ್ಮವರು ಒಂದು ಬಗೆಯ ಮಧವಿಶ್ವಾಸವುಳ್ಳವರಾಗಿದ್ದರು. ಈ ಘೋರ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.