೫೨ - ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ವುದಕ್ಕಾಗಿ 'ಮೊಟ್ಟ ಮೊದಲು ಈ ದೇಶದಲ್ಲಿ ಯಾವ ಭಾಗದಲ್ಲಿಯಾದರೂ ಯಾವ ಸ್ತ್ರೀ ಯಿಂದಲಾದರೂ ಬಲವಂತವಾಗಿಯಾಗಲಿ ಮರಣಕ್ಕೆ ಸಾಹಸ ಮಾಡುವಂತೆ ಪ್ರೋತ್ಸಾಹ ವಾಕ್ಯಗಳನ್ನು ಹೇಳಿಯಾಗಲಿ, ಸಹಗಮನವನ್ನು ಮಾಡಿಸಕೂಡದು' ಎಂದು ಅಪ್ಪಣೆ ಕೊಟ್ಟು, ಬಲವಂತವೇನೂ ಮಾಡಲ್ಪಟ್ಟಿಲ್ಲವೆಂದು ನಿರ್ಣಯಿಸುವುದಕ್ಕೆ ಪೋಲೀಸಿನವರು ಸಹಗಮನ ನಡೆಯುವ ಪ್ರತಿ ಒಂದು ಸ್ಥಳಕ್ಕೂ ಹೋಗಿ ನೋಡಬೇಕೆಂತಲೂ, ಸಹಗಮನ ನಡೆಯುತ್ತಿರುವ ಗ್ರಾಮದಲ್ಲಿ ನ್ಯಾಯಾಧಿಪತಿ ಆ ವಿಷಯವನ್ನು ವಿಚಾರಿಸುವುದಕ್ಕೆ ತಾನೇ ಆ ಸ್ಥಳಕ್ಕೆ ಹೋಗಿ ನೋಡಬೇಕೆಂತಲೂ, ನಿಯಮಗಳನ್ನೇರ್ಪಡಿಸಿದನು, ಆದರೂ ಈ ಅಪ್ಪಣೆಯ ಫಲವು ದಿನಗಳ ತನಕ ವಿರುದ್ಧವಾಗಿಯೇ ಪರಿಣಮಿಸಿತು. ಪ್ರಜೆಗಳಿಗೆಲ್ಲಾ ಈ ವಿಚಾರದಲ್ಲಿ ಭಕ್ತಿಶ್ರದ್ಧೆಗಳು ಹುಟ್ಟಿದುವು. ದೊರೆತನದವರು ಈ ವಿಷಯದಲ್ಲಿ ಪ್ರವೇಶಿಸಿದ ಮೊದಲು ಸಹಗಮನ ಮಾಡುವ ಸ್ತ್ರೀಯರ ಸಂಖ್ಯೆಯು ಅಭಿವೃದ್ಧಿ ಹೊಂದುತ್ತಿರುವುದೆಂತಲೂ, ರಕ್ಷಕ ಭಟರೂ, ನ್ಯಾಯಾಧಿಪತಿಯ ಸಹಗಮನ ಮಾಡಲ್ಪಡುವ ಪ್ರದೇಶದಲ್ಲಿರುವುದನ್ನು ನೋಡಿ, ಆ ಪುಣ್ಯಕಾಲ್ಯವನ್ನು ನೆರವೇರಿಸುವುದರಲ್ಲಿ ಯಾವ ಲೋಪವೂ ಉಂಟಾಗದೆ ಇರು ವುದಕ್ಕಾಗಿ ಇವರನ್ನು ಸಮ್ಮಾರದವರೇ ಕಳುಹುತ್ತಿರುವರೆಂತಲೂ, ಪ್ರಜೆಗಳು ವಿಪರೀತಾರ್ಥ ವನ್ನು ಮಾಡಿಕೊಳ್ಳುತ್ತಿರುವರೆಂದು ಅನುಭವದಿಂದ ಕಂಡು ಹಿಡಿದ ಅಧಿಕಾರಿಗಳೂ ದೇಶಾಭಿ ಮಾನಿಗಳೂ ಮೇಲಿನ ಅಧಿಕಾರಿಗಳಿಗೆ ತಿಳಿಯಪಡಿಸಿದರು. ಪಾಪ ! ಆ ನ್ಯಾಯಾಧಿಕಾರಿ ಗಳಿಗೆ ರಾಯಭಾರಿಗಳ ಮೂಲಕವಾಗಿ ಸ್ತ್ರೀಯರ ಇಷ್ಟವನ್ನು ಕಂಡು ಹಿಡಿಯುವುದು ಸ್ವತಃ ಗೋಪಾ ಇದ್ದಲ್ಲಿ ಬಹು ಕಷ್ಟ ಸಾಧ್ಯವಾಗಿತ್ತಲ್ಲದೆ ಆಕೆಯು ಯಾವ ಕಾರಣದಿಂದ ಲಾದರೂ ಸಹಗಮನವು ತನಗೆ ಸಮ್ಮತವಾಗಿದೆ ಎಂದು ಹೇಳಿದಲ್ಲಿ ಅದಕ್ಕೆ ಪ್ರತಿಕ್ರಿಯೆ ಇಲ್ಲದೆ ಸುಮ್ಮನೆ ಇರಬೇಕಾಗಿ ಬರುತ್ತಿತ್ತು, ಸಹಗಮನಕ್ಕೆ ಅಪ್ಪಣೆ ಕೊಡಲಾರದ ದಯಾ ಳುಗಳಾದ ನ್ಯಾಯಾಧಿಪತಿಗಳಿಗೆ ಒಂದೊಂದು ವೇಳೆ ಧನವಂತರೂ ಬಲವಂತರೂ ಆದ ಕೆಲವು ಹಿಂದೂಗಳ ಮೂಲಕ ಮಾತು ಬರುತ್ತಲೇ ಇದ್ದಿತು. ಹೀಗೆ ಜರುಗುವುದನ್ನು ಕಂಡು ಪ್ರಭುತ್ವದವರು ಇನ್ನೂ ಕೆಲವು ನಿಬಂಧನೆಗಳನ್ನು ಆಚರಣೆಗೆ ತಂದರು. ಯಾವ ಹೆಂಗುಸಾದರೂ ಗಂಡನ ಶವವನ್ನು ಸುಟ್ಟ ಕೆಲವು ದಿನಗಳ ತರುವಾಯ ಪ್ರತ್ಯೇಕವಾಗಿ ಚಿತೆಯನ್ನೊಡ್ಡಿ ಸಹಗಮನ ಮಾಡಲು ಯತ್ನಿಸಿದರೆ ಅಂಥಾ ಸ್ತ್ರೀಯರನ್ನು ಆತ್ಮ ಹತ್ಯದ ತಪ್ಪಿತಕ್ಕಾಗಿ ಶಿಕ್ಷಿಸಬಹುದೆಂದು ಹೊಸದಾದ ಶಾಸನವನ್ನು ಪ್ರ ಕಟಿಸಿದರು. ಎಲ್ಲಿಯಾದರೂ ಒಬ್ಬ ಹೀಯ ಸಹಗಮನ ಮಾಡಿದಕೂಡಲೆ ಆಕೆಯ ಮತ್ತು ಅವಳ ಗಂಡನ ಚರಸ್ಸಿರವಾದ ಆಸ್ತಿಯನ್ನೆಲ್ಲ ಸರಕಾರದವರು ತಮ್ಮ ಸ್ವಾಧೀನಪಡಿಸಿ ಕೊಳ್ಳುತ್ತಿದ್ದರು, ಮತ್ತು ಯಾವ ವಂಶದಲ್ಲಿಯಾದರೂ ಒಬ್ಬ ಸ್ತ್ರೀಯು ಸಹಗಮನವನ್ನು ಮಾಡಿ ಮೃತಪಟ್ಟಿದ್ದರೆ ಆ ವಂಶದವರು ಯಾರೇ ಆಗಲಿ ಸರಕಾರದ ಉದ್ಯೋಗಕ್ಕೆ ಅರ್ಹ ರಾಗಲಾರರೆಂದು ಕಠಿನವಾದ ನಿಬಂಧನೆಯನ್ನು ಆಚರಣೆಯಲ್ಲಿ ತಂದರು, ಹೀಗೆ ಎಷ್ಟು ನಿ ರ್ಬಂಧಗಳನ್ನು ಏರ್ಪಡಿಸಿದರೂ ಈ ಘೋರದುರಾಚಾರವನ್ನು ನಿಲ್ಲಿಸಲಾಗಲೇ ಇಲ್ಲ. 1815 ನೇ ವರುಷದಿಂದ 1828 ರ ವರೆಗೆ ಈ ಸಹಗಮನದಿಂದ ಎಷ್ಟು ಮಂದಿ ಸ್ತ್ರೀಯರು ಮಡಿದಿರೆಂಬುದನ್ನು ಕೆಳಗಣಪಟ್ಟಿಯಿಂದ ತಿಳಿಯ ಬಹುದು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.